ಹೆಚ್ಚಿನ

ವಾಸ್ತು ಪ್ರಕಾರ ಬೆಳ್ಳಿ ಅಥವಾ ಬಿಳಿ ಲೋಹದ ಆನೆಯನ್ನು ಮನೆಯಲ್ಲಿ ಇರಿಸಿದರೆ ಮನೆಯವರಿಗೆ ಇಷ್ಟು ಲಾಭ ತಂದ್ಕೊಡುತ್ತೆ.

ಉತ್ತಮ ಅದೃಷ್ಟ ,ಹಣ, ಸಿರಿ,ಸಂಪತ್ತು ಮತ್ತು ಮಾಡುವ ಕೆಲಸದಲ್ಲಿ ಯಶಸ್ಸು ಸಿಗಬೇಕೆಂದರೆ ವಾಸ್ತುವಿನ ಪ್ರಕಾರ ಆನೆಯ ಬೆಳ್ಳಿಯ ಪ್ರತಿಮೆಯನ್ನು ಹೇಗೆ ? ಎಲ್ಲಿ ? ಸ್ಥಾಪಿಸಬೇಕು?ಆನೆಗಳು ಬುದ್ಧಿಯ ಸಂಕೇತವಾಗಿವೆ ಆದ್ದರಿಂದ ಆನೆಯ ಪ್ರತಿಮೆಯನ್ನು ಹೊಂದಿರುವವರಿಗೆ  ಉತ್ತಮ ಅದೃಷ್ಟವು ಒಲಿದು ಬರುವುದು.ನಿಮ್ಮ ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಆನೆಯ ಪ್ರತಿಮೆಯನ್ನಿಟ್ಟು ಅದಕ್ಕೆ ಯಾವುದೇ ಹಾನಿಯಾಗದಂತೆ ಅಂದರೆ ಹೊಡೆಯದಂತೆ ಅದನ್ನು ರಕ್ಷಿಸಿದರೆ,ನಿಮ್ಮ ಅದೃಷ್ಟವು ದ್ವಿಗುಣವಾಗಿ ಹೆಚ್ಚುವುದಲ್ಲದೇ ಹಣದ ಹರಿವನ್ನು ಯತ್ತೆಚ್ಛವಾಗಿ ಹೆಚ್ಚಿಸುವುದು.

 

 

 

ವಾಸ್ತುವಿನ ಪ್ರಕಾರ ಬೆಳ್ಳಿಯಿಂದ ಮಾಡಿದ ಆನೆಯ ಪ್ರತಿಮೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.ನೀವು ಆನೆಯ ಬೆಳ್ಳಿಯ ಪ್ರತಿಮೆಯನ್ನು ಎಲ್ಲಿ ಸ್ಥಾಪಿಸುತ್ತೀರೋ ಅಲ್ಲಿ ಅದು ನಕಾರಾತ್ಮಕ ಶಕ್ತಿಯನ್ನು ನಾಶಮಾಡಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವುದು.ನೀವು ನಿಮ್ಮ ಮನೆಯಲ್ಲಿ ಅಥವಾ ಕಛೇರಿಯಲ್ಲಿ ಬೆಳ್ಳಿಯ ಆನೆಯ ಪ್ರತಿಮೆಯನ್ನು ಇಟ್ಟರೆ ಅದು ಎಲ್ಲಾ ದೋಷ ಮತ್ತು ತೊಂದರೆಗಳನ್ನು ನಿವಾರಿಸುವುದು ಮತ್ತು ಅಲ್ಲಿನ ಪರಿಸರವನ್ನು ಸಹ ಶಾಂತವಾಗಿಸುವುದು. ದೇವಿ ಲಕ್ಷ್ಮೀಯ ಆಶೀರ್ವಾದವು ಸಹ ಇದರ ಜೊತೆಗೆ ಸಿಗುವುದು.ಆನೆಯ ಪ್ರತಿಮೆಯನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಮೇಜಿನ ಮೇಲೆ ಇಟ್ಟರೆ ಒಳ್ಳೆಯ ಅದೃಷ್ಟವನ್ನು ಹಣ ,ಮತ್ತು ಹಣಕಾಸಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಯಶಸ್ಸನ್ನು ಹೊತ್ತು ತರುವುದು.ಬೆಳ್ಳಿಯ ಆನೆಯ ಪ್ರತಿಮೆಯನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು.

 

 

 

ಬೆಳ್ಳಿಯಿಂದ ಮಾಡಿದ ಆನೆಯ ಪ್ರತಿಮೆಯನ್ನು ನೀವು ಇನ್ನು ಹುಷಾರಾಗಿ ಇಟ್ಟುಕೊಂಡರೆ ಅದು ಮಂಗಳಕರವೆಂದು ಇದರ ಜೊತೆಗೆ ಆನೆಯ ಬೆಳ್ಳಿಯ ಪೆಂಡೆಂಟ್ ಅನ್ನು ನಿಮ್ಮ ಕುತ್ತಿಗೆಗೆ ಬೆಳ್ಳಿಯಲ್ಲಿ ಮಾಡಿಸಿಕೊಂಡು ಧರಿಸಿದರೂ ಕೂಡ ಒಳ್ಳೆಯದು.ದಂಪತಿಗಳ ಮನಸ್ಸಿನಲ್ಲಿ ಭಿನ್ನಾಭಿಪ್ರಾಯವಿದ್ದರೆ, ಅವರ ಸಂಬಂಧದಲ್ಲಿ ತೊಂದರೆಗಳಿದ್ದರೆ ,ಒಂದು ಜೋಡಿ ಬೆಳ್ಳಿಯಿಂದ ಮಾಡಿದ ಆನೆಯನ್ನು ನಿಮ್ಮ ಮನೆಯಲ್ಲಿಟ್ಟುಕೊಂಡರೆ ನಿಮ್ಮ ಕಷ್ಟಗಳು ಪರಿಹಾರವಾಗುವುವು.ಒಂದು ವೇಳೆ ಬೆಳ್ಳಿಯಿಂದ ಮಾಡಿದ ಆನೆಯನ್ನು ಕೊಂಡುಕೊಳ್ಳಲು ಆಗಲಿಲ್ಲವೆಂದರೆ ಬಿಳಿ ಲೋಹದ ಆನೆಯನ್ನು ಬೇಕಾದರೂ ಮಾಡಿಸಿಕೊಳ್ಳಬಹುದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top