ಮನೋರಂಜನೆ

ಜೋಗಿ ಪ್ರೇಮ್​ಗೆ ಬರ್ತ್​ ಡೇ ವಿಶ್ ಜೊತೆ ಈ ಮಾತುಗಳನಾಡಿ ಹುರಿದುಂಬಿಸಿದ ಕಿಚ್ಚ

ಜೋಗಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿ ,ಜೋಗಿ ಪ್ರೇಮ್ ಅಂತ ಲೇ ಫೇಮಸ್ ಆದ್ರೂ ಪ್ರೇಮ್ ,ಸದಾ ಕಾಲ ಒಳ್ಳೆಯ ಚಿತ್ರಗಳನ್ನು ಜನರಿಗೆ ಕೊಟ್ಟು ಅವರನ್ನು ರಂಜಿಸಲಿ ಸದಾ ಕಾಲ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಾನೆ ಇರ್ತಾರೆ ಪ್ರೇಮ್ .ಕನ್ನಡ ಚಿತ್ರರಂಗದಲ್ಲಿ ವಿಪರೀತ ಕ್ರೆಜ್ ಹುಟ್ಟುಹಾಕಿದ ‘ದಿ ವಿಲನ್’ ಚಿತ್ರ ಬಿಡುಗಡೆಯಾಗಿ ಭರ್ಜರಿ ಯಶಸ್ಸಿನ ಕಡೆ ಮುನ್ನುಗುತ್ತಿದೆ ,ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಸುದೀಪ್ ಮತ್ತು ಶಿವಣ್ಣ ಒಟ್ಟಾಗಿ ನಟಿಸಿದರಿಂದ ಈ ಪಾಟಿ ಸಂಚಲನ ಸೃಷ್ಟಿಸಿತ್ತು.ಈ ಚಿತ್ರ ದಿನ ಮಾಡುತ್ತಿರುವ ಗಳಿಕೆ ನೋಡಿದ್ರೆ ಈ ಚಿತ್ರ ದಾಖಲೆ ಮುರಿಯೋದು ಖಂಡಿತಾ.

 

 

 

ಇವತ್ತು ನಿರ್ದೇಶಕ ಪ್ರೇಮ್ ರವರ ಹುಟ್ಟುಹಬ್ಬ ಕನ್ನಡ ಕ್ರಿಯೇಟಿವ್ ಡೈರೆಕ್ಟರ್​ ಅಂತಾನೆ ಫೇಮಸ್ ಆಗಿರೋ ಪ್ರೇಮ್ ಜನ್ಮದಿನದ ಸಂಭ್ರಮ ದಲ್ಲಿಇದ್ದಾರೆ,ಈ ದಿನ ದಂಡು ಕಿಚ್ಚ ಈ ರೀತಿಯಾಗಿ ಪ್ರೇಮ್ಗೆ ಟ್ವೀಟರ್ ನಲ್ಲಿ ವಿಶ್ ಮಾಡಿದ್ದಾರೆ ,ಅದು ಬರೀ ವಿಶ್ ಅಲ್ಲ ಜೊತೆಗೆ ಪ್ರೇಮ್ ರವರಿಗೆ ಧೈರ್ಯದ ಮಾತುಗಳನ್ನು ಹೇಳಿದ್ದಾರೆ “‘ನನ್ನ ಪ್ರೀತಿಯ ಗೆಳೆಯ, ನಿರ್ದೇಶಕ ಪ್ರೇಮ್​ಗೆ ಜನ್ಮದಿನದ ಶುಭಾಶಯ. ಈ ವರ್ಷ ನಿನ್ನ ಪಾಲಿಗೆ ಅದ್ಭುತವಾಗಿರಲಿ,ಪ್ರತಿ ಸಾರಿ ನಿನ್ನೆ ಮೇಲೆ ಈ ರೀತಿ ದಾಳಿಯಾಗುತ್ತೆ. ಈ ಬಾರಿಯೂ ಅದೇ ಆಗಿದೆ. ಬೇರೆಯವರು ನಿನ್ನ ಮೇಲೆ ದಾಳಿ ಮಾಡುವಂತಹ ಯಾವುದೋ ಮಹತ್ವದ ಕೆಲಸವನ್ನೇ ನೀನು ಮಾಡುತ್ತಿದ್ದೀಯಾ.. ಅಷ್ಟೇ ಅಲ್ಲ ಇದು ನೀನೇನು ಮಾಡುತ್ತಿದ್ದೀಯಾ ಎಂಬುದನ್ನ ತಿಳಿದುಕೊಳ್ಳುವ ಸಮಯ… ಈ ಹಂತವನ್ನ ನೀನು ಅನುಭವಿಸು ಎಂಜಾಯ್​ ಮಾಡು’ ಹೀಗೆ ಪ್ರೇಮ್​ಗೆ ಧೈರ್ಯವನ್ನೂ ತುಂಬಿದ್ದಾರೆ ಸುದೀಪ್​.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top