ಸಮಾಚಾರ

ಪ್ಯಾಸೆಂಜರ್ ರೈಲಿನಲ್ಲಿ ಜನರಲ್ ಭೋಗಿ ಹಾಗೂ ರಿಸರ್ವ್ ಭೋಗಿ ಕಂಡು ಹಿಡಿಯುವುದು ಹೇಗೆ ಗೊತ್ತಾ

ರೈಲಿನಲ್ಲಿ ನಾವು ಪ್ರಯಾಣಿಸುವಾಗ ಒಂದು ದೊಡ್ಡ ಸಮಸ್ಯೆ ಎಂದರೆ ಯಾವುದು ಜನರಲ್ ಬೋಗಿ ? ಯಾವುದು ರಿಸರ್ವ್ ಭೋಗಿ ಎಂದು ಕಂಡು ಹಿಡಿಯುವುದು ಸ್ವಲ್ಪ ಕಷ್ಟ.ರೈಲಿನಲ್ಲಿ ಇರುವ ಭೋಗಿ ಯಾವುದು ಎಂದು ನಮಗೆ ಆತಂಕಕ್ಕೆ ಒಳಗಾಗಿಸುತ್ತದೆ. ಸಾಮಾನ್ಯ ಜನರಿಗೆ ಇದು ಗೊತ್ತಾಗುವುದಿಲ್ಲ. ರೈಲ್ವೆ ನಿಲ್ದಾಣದಲ್ಲಿ ರೈಲನ್ನು ಹತ್ತಬೇಕಾದರೆ, ಯಾವ ಬೋಗಿಗೆ ಹತ್ತಬೇಕು ? ಎಂದು ತುಂಬಾ ಗೊಂದಲಕ್ಕೆ ಒಳಗಾಗುತ್ತಾರೆ ಜನ ಸಾಮಾನ್ಯರು. ಯಾವುದೋ ಜನರಲ್ ಭೋಗಿ, ಯಾವುದು ರಿಸರ್ವ್ ಭೋಗಿ ಎನ್ನುವುದು ಜನಸಾಮಾನ್ಯರಿಗೆ ತಿಳಿಯುವುದಿಲ್ಲ. ಆದ್ದರಿಂದ ರೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ರೈಲಿನ ಮೇಲೆ ಕೆಲವು ಚಿಹ್ನೆಗಳನ್ನು ಹಾಕಿರುತ್ತಾರೆ. ಆ ಚಿಹ್ನೆಗಳು ಏನು ? ಅವು ಏನನ್ನು ಸೂಚಿಸುತ್ತವೆ ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

 

 

ನೀಲಿ ಬಣ್ಣದ ರೈಲಿನಲ್ಲಿ, ಕಿಟಕಿಯ ಕೊನೆಯಲ್ಲಿ ಹಳದಿ ಬಣ್ಣದಲ್ಲಿ ಅಥವಾ ಬಿಳಿ ಬಣ್ಣದಲ್ಲಿ ಗೆರೆಗಳು ಇದ್ದರೆ ಅದು ಸೆಕೆಂಡ್ ಕ್ಲಾಸ್ ಭೋಗಿ ಎನ್ನುವ ಅರ್ಥವನ್ನು ಕೊಡುತ್ತದೆ. ಅಂದರೆ ಅದು ರಿಸರ್ವ್ ಭೋಗಿ ಆಗಿರುವುದಿಲ್ಲ.ರೈಲ್ವೆ ನಿಲ್ದಾಣದಲ್ಲಿ ರೈಲನ್ನು ಹತ್ತುವ ಪ್ರಯಾಣಿಕರಿಗೆ ಈ ರೀತಿಯ ರೈಲನ್ನು ನೋಡಿದಾಗ ಯಾವುದು ಯಾವ ಬೋಗಿ ಎನ್ನುವುದು ಅರ್ಥವಾಗುತ್ತದೆ. ಬೋಗಿಯಲ್ಲಿ ಕೆಂಪು ಮತ್ತು ನೀಲಿ ಬಣ್ಣದ ಬೋಗಿಯಲ್ಲಿ ಹಳದಿ ಬಣ್ಣದ ಗೆರೆಗಳು ಇದ್ದರೆ, ಅದು ಅಂಗವಿಕಲರಿಗೆ ಮಾತ್ರ. ಅವರಿಗೆ ಮಾತ್ರ ಬೋಗಿಯನ್ನು ಉಪಯೋಗಿಸಲಾಗುತ್ತದೆ. ಕಂದು ಮತ್ತು ಹಸಿರು ಬಣ್ಣದ ಗೆರೆಗಳನ್ನು ಹೊಂದಿರುವ ಬೋಗಿಯಲ್ಲಿ ಅದು ಏನನ್ನು ಸೂಚಿಸುತ್ತದೆ ಎಂದರೆ…. ಮಹಿಳೆಯರಿಗೆ ಮಾತ್ರ ಮೀಸಲಾಗಿರುವ ಭೋಗಿ ಎಂದು ಸೂಚಿಸುತ್ತದೆ. ಬೂದು ಬಣ್ಣದ ಮೇಲೆ ಕೆಂಪು ಗೆರೆಗಳು ಇದ್ದವು ಎಂದರೆ ಅದು ಫಸ್ಟ್ ಕ್ಲಾಸ್ ಕೋಚ್ ಭೋಗಿ ಎಂದು ನಾವು ತಿಳಿದುಕೊಳ್ಳಬೇಕಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top