ಮನೋರಂಜನೆ

ಕೊನೆಗೂ ಹೊರಬಿತ್ತು ರ್‍ಯಾಪಿಡ್ ರಶ್ಮಿ ಮದುವೆ ವಿಚಾರ- ಬಿಗ್ಬಾಸ್ ವೇದಿಕೆಯ ಮೇಲೆ ಗಂಡನ ವಿಷಯ ಬಹಿರಂಗ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ, ಕನ್ನಡ ಕಿರುತೆರೆಯ ಅತಿ ದೊಡ್ಡ ಮತ್ತು ಅತಿ ಜನಪ್ರಿಯ ರಿಯಾಲಿಯಿ ಷೋ ಬಿಗ್ ಬಾಸ್ ಶೋನ ಆರನೇ ಆವೃತ್ತಿಗೆ ಅದ್ದೂರಿ ಆರಂಭ ಸಿಕ್ಕಿದೆ. ತಿಂಗಳ ಹಿಂದೆಯೇ ಯಾರ್‍ಯಾರು ಬಿಗ್‌ಬಾಸ್ ಮನೆ ಸೇರಿಕೊಳ್ಳಬಹುದೆಂಬ ಬಗ್ಗೆ ಹುಟ್ಟಿಕೊಂಡಿದ್ದ ಕುತೂಹಲ, ಅಂತೆಕಂತೆಗಳಿಗೂ ತೆರೆ ಬಿದ್ದಿದೆ. ವಿಶೇಷ ಅಂದ್ರೆ ಈ ಬಾರಿಯ ಬಿಗ್​ಬಾಸ್​ಗೆ ತೃತೀಯ ಲಿಂಗಿಯೊಬ್ಬರು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಬಿಗ್‌ಬಾಸ್ ಶುರುವಾಗುತ್ತದೆ ಎಂದರೆ ಬಿಗ್‌ಬಾಸ್ ವೀಕ್ಷಕರಿಗೆ ಹಬ್ಬದ ವಾತಾವರಣ. ಮುಂದಿನ ನೂರು ದಿನಗಳ ಕಾಲ ಅದರದ್ದೇ ಚರ್ಚೆ, ಅದರದ್ದೇ ಮಾತು. ಅದು ಅದಾಗಲೇ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಹಿನ್ನಲೆ ಏನು? ಅವರ ಸಾಧನೆ ಏನು? ಎಂಬಂತ ವಿಚಾರಗಳನ್ನು ತಿಳಿದುಕೊಳ್ಳಲು ವೀಕ್ಷಕರು ಮುಂದಾಗಿದ್ದಾರೆ. ಅದರಂತೆ ಈ ಭಾರಿಯ ಆಕರ್ಷಣೆಗಳಲ್ಲಿ ಒಬ್ಬರಾದ ರ್‍ಯಾಪಿಡ್ ರಶ್ಮಿ ಕೂಡ ವೀಕ್ಷರಿಗೆ ಅಚ್ಚರಿಯ ವಿಚಾರವೊಂದನ್ನ ಬಹಿರಂಗಪಡಿಸಿದ್ದಾರೆ.

 

 

ಮಾತಿನ ಮಲ್ಲಿ ಎಂದೇ ಹೆಸರಾಗಿರುವ ರ್‍ಯಾಪಿಡ್ ರಶ್ಮಿ ಬಿಗ್ ಬಾಸ್ ಮನೆಗೆ ಹೋಗುವಾಗ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ.. ತುಂಬಾ ಜನರಿಗೆ ರಶ್ಮಿ ಮದುವೆ ಆಗಿದ್ದಾರೆಯೇ, ಇಲ್ಲವೇ ಎಂಬ ಕುತೂಹಲ ಇದ್ದೇ ಇರುತ್ತೆ..ಈ ಕುತೂಹಲಕ್ಕೆ ಸ್ವತಃ ರಶ್ಮಿ ಅವರೇ ಉತ್ತರ ಕೊಟ್ಟಿದ್ದಾರೆ. ತಮಗೆ ಮದುವೆ ಆಗಿರುವ ಸುದ್ದಿಯನ್ನು ರಶ್ಮಿ ಬಿಚ್ಚಿಟ್ಟಿದ್ದಾರೆ.. ಕೆಲವೇ ತಿಂಗಳ ಹಿಂದೆಯಷ್ಟೇ ಡೇವೀಸ್ ಎಂಬುವವರೊಡನೆ ಮದುವೆ ಆಗಿರುವುದಾಗಿ ಹೇಳಿದ್ದಾರೆ.

ಅನೇಕರಿಗೆ ರಶ್ಮಿ ಮದುವೆ ಆಗಿರುವ ವಿಚಾರ ಗೊತ್ತೇ ಇಲ್ಲ. ಏಕೆಂದರೆ ತಾವು ಮದುವೆ ಆಗಿರುವ ವಿಚಾರವನ್ನು ರಶ್ಮಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೀಗ ಬಿಗ್ ಬಾಸ್ ವೇದಿಕೆಯ ಮೇಲೆ ತಮಗೆ ಮದುವೆ ಆಗಿರೋ ವಿಷಯವನ್ನು ಹಂಚಿಕೊಂಡಿದ್ದಾರೆ.. ಅಂದಹಾಗೆ ರಶ್ಮಿ ಅವರನ್ನು ಬಿಗ್ ಬಾಸ್ ಮನೆಯೊಳಕ್ಕೆ ಕಳುಹಿಸಲು ಅವರ ಪತಿ ಡೇವಿಸ್ ಅವರೇ ಆಗಮಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top