ಮನೋರಂಜನೆ

ನಿಮ್ಮ ಮನೆ ಹಣ್ಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನಿರುತ್ತೀರಾ? ಸರ್ಜಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮತ್ತೊಬ್ಬ ನಟಿ.

ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ನಟಿಯರನೇಕರು ತಮಗಾದ ಲೈಂಗಿಕ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಇದೀಗ ನಟ ಅರ್ಜುನ್‌ ಸರ್ಜಾ ವಿರುದ್ಧ ಯುವ ನಟಿ ಶೃತಿ ಹರಿಹರನ್‌ ಕಿರುಕುಳ ನೀಡಿದ್ದ ಆಪಾದನೆ ಮಾಡಿದ್ದಾರೆ.

ನಟಿ ಶ್ರುತಿ ಹರಿಹರನ್​ ಸಹ ಖ್ಯಾತ ನಟ ಅರ್ಜುನ್ ಸರ್ಜಾ ಅವರಿದ ತಮಗಾದ ಅನುಭವದ ಕುರಿತು ಹೇಳಿಕೊಂಡಿದ್ದಾರೆ. ತಮಿಳಿನ ವಿಸ್ಮಯ ಸಿನಿಮಾದಲ್ಲಿ ಶೃತಿಹರಿಹರನ್​​ ಹಾಗೂ ಅರ್ಜುನ್​​ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸಿದ್ರು. ಈ ಸಿನಿಮಾ ಶೂಟಿಂಗ್​​ ವೇಳೆಯಲ್ಲಿ ಅರ್ಜುನ್​​ ಸರ್ಜಾ ನನ್ನೊಂದಿಗೆ ಅಸಹಜವಾಗಿ ವರ್ತಿಸುತ್ತಿದ್ರು” ಎಂದು ಹೇಳಿಕೆ ನೀಡಿದ್ದಾರೆ. ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರ ಪರ ಕಿರಿಕ್​ ಹುಡುಗಿ ಸಂಯುಕ್ತಾ ಹೆಗ್ಡೆ ಬ್ಯಾಟ್​ ಬೀಸಿದ್ದಾರೆ.​ ಟ್ವೀಟ್​ ಮೂಲಕ ಬೆಂಬಲ ವ್ಯಕ್ತಪಡಿಸಿರುವ ಸಂಯುಕ್ತಾ ಸರ್ಜಾ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರ್ಜುನ್ ಸರ್ಜಾಗೆ ಒಳ್ಳೆಯ ಹೆಸರಿನ ಜೊತೆ ಹಣ ಇದೆ. ಆದ್ದರಿಂದ ಅವರಿಗೆ ಜನರು ಬೆಂಬಲ ಕೊಡುತ್ತಾರೆ. ಹಾಗಂದ ಮಾತ್ರಕ್ಕೆ ಕೀಳು ಮಟ್ಟದ ವರ್ತನೆ ತೋರಲು ಯಾರು ಅಧಿಕಾರ ಕೊಟ್ಟವರು ಅಂತ ಕಿಡಿಕಾರಿದ್ದಾರೆ. ನಮ್ಮ‌ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ‌ಮುಂದೆ ಬಂದು ತಮಗಾದ ಅನ್ಯಾಯದ ಬಗ್ಗೆ ಮಾತನಾಡಲು ಭಯಪಡುತ್ತಾರೆ. ನಮ್ಮಂತ ನಟಿಯರು ಧೈರ್ಯವಾಗಿ ಮುಂದೆ ಬಂದು ಮಾತನಾಡಿದರೆ ಟೀಕೆ ಮತ್ತು ಟ್ರೋಲ್​ಗೆ ಗುರಿಯಾಗುತ್ತೇವೆ. ಈಗ ಶ್ರುತಿ ಬಗ್ಗೆಯು ಎಲ್ಲ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

 

 

ನಟಿಯರು ತಮಗಾದ ನೋವನ್ನು ಹಂಚಿಕೊಂಡರೆ ಬೇರೆಯವರು ಟೀಕೆ ಮಾಡುತ್ತಾರೆ. ನಮಗಂತೂ ನಟರಷ್ಟು ಸಂಬಳ ಕೊಡಲ್ಲ. ದಯವಿಟ್ಟು ಕನಿಷ್ಠ ಗೌರವವನ್ನಾದರೂ ಕೊಡಿ. ನಾವೇನಾದರೂ ಮಾತನಾಡಿದರೆ ಬೇರೆ ನಟಿಯರನ್ನು ಇಂಡಸ್ಟ್ರಿಗೆ ತರುತ್ತಾರೆ. ನಿಮ್ಮ ಮನೆ ಹಣ್ಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನಿರುತ್ತೀರಾ ಅಂತ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top