ಮನೋರಂಜನೆ

ಈ ಕಾರಣಕ್ಕೆ ಕೈ ಮುಗಿದು ಕ್ಷಮೆ ಕೇಳಿದ ನಟಿ ಶ್ರುತಿ ಹರಿಹರನ್​

ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ನಟಿಯರನೇಕರು ತಮಗಾದ ಲೈಂಗಿಕ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಇದೀಗ ನಟ ಅರ್ಜುನ್‌ ಸರ್ಜಾ ವಿರುದ್ಧ ಯುವ ನಟಿ ಶೃತಿ ಹರಿಹರನ್‌ ಕಿರುಕುಳ ನೀಡಿದ್ದ ಆಪಾದನೆ ಮಾಡಿದ್ದಾರೆ.

ನಟಿ ಶ್ರುತಿ ಹರಿಹರನ್​ ಸಹ ಖ್ಯಾತ ನಟ ಅರ್ಜುನ್ ಸರ್ಜಾ ಅವರಿದ ತಮಗಾದ ಅನುಭವದ ಕುರಿತು ಹೇಳಿಕೊಂಡಿದ್ದಾರೆ. ತಮಿಳಿನ ವಿಸ್ಮಯ ಸಿನಿಮಾದಲ್ಲಿ ಶೃತಿಹರಿಹರನ್​​ ಹಾಗೂ ಅರ್ಜುನ್​​ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸಿದ್ರು. ಈ ಸಿನಿಮಾ ಶೂಟಿಂಗ್​​ ವೇಳೆಯಲ್ಲಿ ಅರ್ಜುನ್​​ ಸರ್ಜಾ ನನ್ನೊಂದಿಗೆ ಅಸಹಜವಾಗಿ ವರ್ತಿಸುತ್ತಿದ್ರು” ಎಂದು ಹೇಳಿಕೆ ನೀಡಿದ್ದಾರೆ. ಈ ಸಮಾಚಾರ ದಿನಕ್ಕೆ ಒಂದು ತಿರುವು ಪಡೆಯುತ್ತಿದೆ,ಈ ವಿಷಯದ ಬಗ್ಗೆ ಮಾತನಾಡುವುದಕ್ಕೆ ಫೈರ್ ತಂಡ ಭಾನುವಾರ ಸುದ್ದಿ ಗೋಷ್ಠಿ ನಡೆಸಿತ್ತು,ಆ ಸಂದರ್ಭದಲ್ಲಿ ನಟಿ ಶ್ರುತಿ ಹರಿಹರನ್ ,ನಟ ಚೇತನ್ ಹಾಗೂ ಇನ್ನು ಅನೇಕ ಗಣ್ಯರು ಪಾಲ್ಗೊಂಡಿದ್ದರು.ಸರ್ಜಾ ವಿರುದ್ಧ ಆರೋಪ ಮಾಡಿರುವ ನಟಿ ಶೃತಿ ಹರಿಹರನ್​ ತಾವು ಹಿಂದೆ ಮಾಡಿದ ಈ ತಪ್ಪಿಗೆ ಕ್ಷಮೆ ಕೇಳಿದ್ದಾರೆ.

 

 

 

ಆರ್.ಜೆ. ರಶ್ಮಿ ಜೊತೆ ಸೆಕ್ಸ್ ಬಗ್ಗೆ ಸಂಕೋಚ ಇಲ್ಲದೆ ಅವರು ಹರಟಿದ ವಿಚಾರ ಪ್ರಸ್ತಾಪ ಆಗಿದ್ದರಿಂದ.ಹಿಂದೆ ಒಂದು ಸಲ ರಾಪಿಡ್ ರಶ್ಮಿ ಅಸಭ್ಯವಾದ ಪ್ರಶ್ನೆ ಯನ್ನು ಶ್ರುತಿ ಹರಿಹರನ್ ಅವರಿಗೆ ಕೇಳದ್ದಾರೆ ಅದಕ್ಕೆ ಅಷ್ಟೇ ಅಸಭ್ಯವಾಗಿ ಶ್ರುತಿ ಹರಿಹರನ್ ಉತ್ತರ ನೀಡಿದ್ದಾರೆ ,ರಶ್ಮಿ ಶ್ರುತಿ ಹರಿಹರನ್ ಕುರಿತು ‘ನಿಮಗೆ ಲೈಂಗಿಕ ಕ್ರಿಯೆಯಲ್ಲಿ ಯಾವ ಆಯಾಮ​ ಇಷ್ಟ ಅಂತ ಪ್ರಶ್ನೆ ಕೇಳಿದ್ದಕ್ಕೆ, ಅದು ವ್ಯಕ್ತಿಯ ಹೈಟ್ ಮೇಲೆ ನಿರ್ಧರಿಸಬಹುದು’ ಎಂದು ಶ್ರುತಿ ಹರಿಹರನ್ ಉತ್ತರ ಕೊಟ್ಟಿದ್ದರು.ಅಂತಹ ವಿಚಾರ ಮಾತನಾಡುವವರು ಕೇವಲ ತಬ್ಬಿಕೊಂಡದಕ್ಕೆ, ಊಟಕ್ಕೆ ಕರೆದಿದ್ದಕ್ಕೆ ಯಾಕೆ ಸಂಕೋಚ ಎಂಬುದು ಪತ್ರಕರ್ತರ ಪ್ರಶ್ನೆ ಆಗಿತ್ತು ಇದಕ್ಕೆ ಉತ್ತರ ನೀಡಿದ್ದ ಶ್ರುತಿ ಅದು ಒಂದು ಫನ್ ಬೆಸ್ಡ್​ ಆಗಿತ್ತು ಎಂದು ಉತ್ತರ ನೀಡಿ ಅದರಿಂದ ನಿಮಗೆ ಬೇಜಾರಾಗಿದ್ದಾರೆ ನಾನು ಕ್ಷಮೆ ಕೇಳುತ್ತೇನೆ ಎಂದು ಶ್ರುತಿ ಕೈ ಮುಗಿದಿದ್ದಾರೆ ಕೈ ಮುಗಿದು ಕ್ಷಮೆ ಕೇಳಿದ ನಟಿ ಶ್ರುತಿ ಹರಿಹರನ್​.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top