ಮನೋರಂಜನೆ

ಅಪಪ್ರಚಾರ ಮಾಡಿದರೂ ನಿಲ್ಲದ ವಿಲನ್ ಓಟ- ನಾಲ್ಕೇ ದಿನಕ್ಕೆ 55 ಕೋಟಿ ಗಳಿಕೆ.

ಕನ್ನಡ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಇದೇ ವಾರ ದೇಶಾದ್ಯಂತ ತೆರೆಕಂಡಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸ್ಯಾಂಡಲ್​ವುಡ್​ನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ‘ದಿ ವಿಲನ್’ ಸಿನಿಮಾ ಧೂಳೀಪಟ ಮಾಡಿದೆ. ಸ್ಯಾಂಡಲ್​ವುಡ್​​ನ ಇಬ್ಬರು ಘಟಾನುಘಟಿ ಸ್ಟಾರ್​​ ನಟರು ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯಿಸಿದ್ದಾರೆ. ಕನ್ನಡ ಸಿನಿಮಾವೊಂದು ಈ ಪಾಟಿ ಕಲೆಕ್ಷನ್ ಮಾಡಿರುವುದು ನಿಜಕ್ಕೂ ಸಂತೋಷ.

ಹಾಗೆ ನೋಡಿದರೆ ಇತ್ತೀಚೆಗೆ ವಿಲನ್ ಸಿನಿಮಾ ಬಗ್ಗೆ ಆದ ಅಪಪ್ರಚಾರ ಯಾವ ಸಿನಿಮಾಗೂ ಆಗಿರಲಿಲ್ಲ! ವಿಪರ್ಯಾಸ ಎಂದರೆ ವಿಲನ್ ಗೆ ಆಗಿರುವಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಯಾವ ಸಿನಿಮಾಗೂ ಆಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲಸಿಲ್ಲದ ಕೆಲವು ಕಿಡಿಗೇಡಿಗಳು ಸಿನಿಮಾ ಬಗ್ಗೆ ಕೆಟ್ಟದಾಗಿ ಬಿಂಬಿಸಿ ವಿಕೃತಿ ಮೆರೆದಿದ್ದರು. ಅಂತವರೆಲ್ಲಾ ದಿ ವಿಲನ್ ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡು ಇದೀಗ ಬುಡಕ್ಕೆ ಬೆಂಕಿ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ.

ಮೊದಲ ದಿನ 20.5ಕೋಟಿ ಗಳಿಕೆ:
‘ದಿ ವಿಲನ್​’ ಚಿತ್ರ ಪ್ರೇಕ್ಷಕರ ಮನವನ್ನು ಗೆದ್ದಿದೆ. ಅದಕ್ಕೆ ಸಾಕ್ಷಿಯೆಂಬಂತೆ ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 20.5 ಕೋಟಿ ರೂ ಬಾಚಿಕೊಂಡಿದೆ.. ಹಾಗಂತ ಇದು ಯಾರೋ ಕೆಲಸಿಲ್ಲದವರು ಸೋಷಿಯಲ್ ಮೀಡಿಯಾದಲ್ಲಿ ಹರಡಿಸಿರುವ ಸುಳ್ಳು ಸುದ್ದಿ ಎಂದು ಭಾವಿಸಬೇಡಿ ಏಕೆಂದರೆ ಚಿತ್ರದ ಮೊದಲ ದಿನ 20.5 ಕೋಟಿ ರೂ ಗಳಿಸಿದೆ ಎಂದು ಸ್ವತಃ ನಿರ್ದೇಶಕ ಪ್ರೇಮ್ ಅವರೇ ಹೇಳಿದ್ದಾರೆ.

ನಾಲ್ಕೇ ದಿನಕ್ಕೆ 55 ಕೋಟಿ ರೂ ಗಳಿಕೆ..
ಮೊದಲ ದಿನವೇ ಬರೋಬ್ಬರಿ ಇಪ್ಪತ್ತು ಕೋಟಿ ಬಾಚಿಕೊಂಡಿದ್ದ ವಿಲನ್ ಎರಡು ಮತ್ತು ಮೂರನೇ ದಿನದಲ್ಲೂ ಮ್ಯಾಜಿಕ್ ಮಾಡಿದೆ. ಚಿತ್ರವು ಎರಡು, ಮೂರು ಮತ್ತು ನಾಲ್ಕನೇ ದಿನ ಕ್ರಮವಾಗಿ 14,12 ಮತ್ತು 9 ಕೋಟಿ ರೂ ಗಳಿಸಿದೆ ಎನ್ನಲಾಗಿದೆ. ಅಲ್ಲಿಗೆ ದಿ ವಿಲನ್ ಸಿನಿಮಾ ಕೇವಲ ನಾಲ್ಕೇ ದಿನಕ್ಕೆ ಬರೋಬರಿ 55 ಕೋಟಿ ರೂಗಳನ್ನ ಲೂಟಿ ಮಾಡಿದೆ.

ಬಾಕ್ಸ್ ಆಫೀಸ್ ನಲ್ಲಿ ಈ ಪರಿ ಹಣ ಗಳಿಕಗೆ ಮುಖ್ಯ ಕಾರಣ, ಒಂದು ಎಲ್ಲ ಥಿಯೇಟರ್ ಗಳಲ್ಲು ಹೌಸ್ ಫುಲ್ ಆಗಿರೋದು.. ಮತ್ತೊಂದು ಟಿಕೆಟ್ ರೇಟ್ ಜಾಸ್ತಿ ಮಾಡಿರೋದು.. ಜೊತೆಗೆ ವಿಲನ್ ಸಿನಿಮಾ ಮೊದಲ ದಿನದ ಅತಿ ಹೆಚ್ಚು ಶೋ ಕಂಡಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top