fbpx
ಭವಿಷ್ಯ

ವಾರ ಭವಿಷ್ಯ ಅಕ್ಟೋಬರ್ 22 ನೇ ತಾರೀಖಿನಿಂದ 28 ನೇ ತಾರೀಖಿನವರೆಗೆ

ಮೇಷ ರಾಶಿ

 

 

 

ಗುರು ಹಿರಿಯರಲ್ಲಿ ಭಕ್ತಿ ಹೆಚ್ಚಾಗಲಿದೆ, ಮಾನಸಿಕ ನೆಮ್ಮದಿ ,ಮನಸ್ಸಿಗೆ ಶಾಂತಿ ಲಭ್ಯವಾಗಲಿದೆ, ಕಾರ್ಯದಲ್ಲಿ ವಿಳಂಬ ಮತ್ತು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ,ಮಿತ್ರರು ಶತ್ರುಗಳಾಗುತ್ತಾರೆ, ಸ್ಥಳ ಬದಲಾವಣೆಯಾಗಲಿದೆ , ಪರರಿಗೆ ವಂಚನೆ ಮಾಡಲು ಮನಸ್ಸು ನಿಮಗೆ ಮೂಡುತ್ತದೆ, ಅಕಾಲ ಬೋಜನ.

ಪರಿಹಾರ:ಪ್ರತಿನಿತ್ಯ “ಓಂ ಸುಬ್ರಹ್ಮಣ್ಯ ಯಾಯ ನಮಃ” ಈ ಮಂತ್ರವನ್ನು 54 ಬಾರಿ ಜಪಿಸಿ, ಮಂಗಳವಾರ ಅಂಧ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

ವೃಷಭ ರಾಶಿ 

 

 

 

ವೃತಾ ತಿರುಗಾಟ , ಕೈಹಾಕಿದ ಕೆಲಸಗಳಲ್ಲಿ  ಪ್ರಗತಿ, ನಾನಾ ರೀತಿಯ  ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ, ಅನಾರೋಗ್ಯ, ನಂಬಿದ ಜನರಿಂದ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತದೆ, ದನ ನಷ್ಟ ,  ವಾಹನ ಸಂಚಾರದಿಂದ ತೊಂದರೆಗಳು ಹೆಚ್ಚಾಗುತ್ತವೆ.

ಪರಿಹಾರ:ಪ್ರತಿನಿತ್ಯ ಹನುಮಾನ್ ಚಾಲೀಸ್ ಪಾರಾಯಣ ಮಾಡಿ, ಮಂಗಳವಾರ 108 ವೀಳ್ಯದೆಲೆಯ ಹಾರವನ್ನು ಹಾಕಿ ನಮಸ್ಕಾರ ಮಾಡಿ.

ಮಿಥುನ ರಾಶಿ 

 

 

 

ಸ್ತ್ರೀಯರಿಗೆ ಅನುಕೂಲ, ಗೌರವ ಸನ್ಮಾನ ಪ್ರಾಪ್ತಿಯಾಗಲಿದೆ, ಇಷ್ಟಾರ್ಥ ಸಿದ್ಧಿಯಾಗುತ್ತದೆ, ಯಾರನ್ನು ಹೆಚ್ಚಿಗೆ ನಂಬಬೇಡಿ,ದ್ರವ್ಯ ಲಾಭ , ಅಧಿಕ ಖರ್ಚು , ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ.

ಪರಿಹಾರ:ಸುದರ್ಶನ ಮಂತ್ರವನ್ನು ಪ್ರತಿನಿತ್ಯ ಪಠಿಸಿ , ಶುಕ್ರವಾರ ಒಟು ಬ್ರಾಹ್ಮಣರಿಗೆ ಸ್ವಯಂ ಪಾಕವನ್ನು ನೀಡಿ ನಮಸ್ಕಾರ ಮಾಡಿ.

ಕಟಕ ರಾಶಿ

 

 

 

ಅನ್ಯ ಜನರಲ್ಲಿ ವೈಮನಸ್ಯ, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ, ಸ್ನೇಹಿತರಿಂದ ಬೆಂಬಲ ದೊರೆಯಲಿದೆ, ದುಃಖದಾಯಕ ಪ್ರಸಂಗ ಎದುರಾಗಲಿದೆ, ಪಾಪ ಬುದ್ಧಿ, ಅಧಿಕವಾದ ಖರ್ಚು.

ಪರಿಹಾರ:ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ, ಬುಧವಾರ ಕಡು ಬಡವರಿಗೆ ಕೈಲಾದ ಸೇವೆಯನ್ನು ಮಾಡಿ.

ಸಿಂಹ ರಾಶಿ 

 

 

 

ಮಾತಾ ಪಿತೃವಿನಲ್ಲಿ ಪ್ರೀತಿ ವಾತ್ಸಲ್ಯ ಹೆಚ್ಚಾಗಲಿದೆ, ಮಾನಸಿಕ ಶಾಂತಿ, ಕುಟುಂಬ ಸೌಖ್ಯ, ಹಿತ ಶತ್ರುಗಳಿಂದ ತೊಂದರೆಗೆ ಒಳಗಾಗಬೇಕಾಗುತ್ತದೆ, ಇಲ್ಲಸಲ್ಲದ ಅಪವಾದಗಳು ನಿಮ್ಮ ಮೇಲೆ ಬರುತ್ತವೆ, ಎಚ್ಚರಿಕೆಯಿಂದ ಇರಿ, ಅಕಾಲ ಬೋಜನ ಪ್ರಾಪ್ತಿ.

ಪರಿಹಾರ:ಪ್ರತಿನಿತ್ಯ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿ, ಶನಿವಾರ ಸಿಹಿ ಪದಾರ್ಥವನ್ನು ಶ್ರೀಮನ್ನಾರಾಯಣನಿಗೆ ಅರ್ಪಣೆ ಮಾಡಿ ಭಕ್ತರಿಗೆ ವಿನಿಯೋಗಿಸಿ.

ಕನ್ಯಾ ರಾಶಿ

 

 

 

ನೆಮ್ಮದಿಯ ಜೀವನ, ಕುಟುಂಬ ಸಮೇತ ಪ್ರಯಾಣ ಮಾಡುವ ಶುಭಯೋಗ, ಸಭೆ ಸಮಾರಂಭಗಳಲ್ಲಿ ಭಾಗಿಯಾಗುವ ಶುಭಯೋಗ, ಚಂಚಲ ಮನಸ್ಸು, ಕೆಟ್ಟ ಆಲೋಚನೆಗಳು ನಿಮ್ಮ ಶರೀರದಲ್ಲಿ ಉತ್ಪತ್ತಿಯಾಗುತ್ತವೆ, ಆರೋಗ್ಯದಲ್ಲಿ ತೊಂದರೆ, ವಾಹನ ಖರೀದಿ ಮಾಡುವ ಶುಭಯೋಗ.

ಪರಿಹಾರ:ಪ್ರತಿನಿತ್ಯ ಅಷ್ಟಾಕ್ಷರಿ ಮಂತ್ರ ವಾದ “ಓಂ ನಮೋ ನಾರಾಯಣಾಯ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ ಸೂರ್ಯ ನಮಸ್ಕಾರವನ್ನು ಮಾಡಿ.

ತುಲಾ ರಾಶಿ

 

 

 

ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತುಗಳ ಖರೀದಿ, ಸ್ಥಳ ಬದಲಾವಣೆ, ಅಧಿಕ ಧನವ್ಯಯ, ಆತ್ಮೀಯರೊಂದಿಗೆ ಮನಸ್ತಾಪ, ನಂಬಿಕೆ ದ್ರೋಹಕ್ಕೆ ಒಳಗಾಗಬೇಕಾಗುತ್ತದೆ, ಅಕಾಲ ಬೋಜನ.

ಪರಿಹಾರ:ಪ್ರತಿನಿತ್ಯ 18 ಬಾರಿ ಅಶ್ವಥ ವೃಕ್ಷ ಪ್ರದಕ್ಷಿಣೆಯನ್ನು ಮಾಡಿ, ತಂದೆ ತಾಯಿಗಳಿಗೆ ನಮಸ್ಕರಿಸಿ, ಆಶೀರ್ವಾದವನ್ನು ಪಡೆಯಿರಿ.

ವೃಶ್ಚಿಕ ರಾಶಿ 

 

 

 

ರಾಜಕೀಯ ವ್ಯಕ್ತಿಗಳಿಂದ ಸಹಾಯ, ಷೇರು ವ್ಯವಹಾರಗಳಲ್ಲಿ ನಷ್ಟ, ಹಣಕಾಸು ವಿಚಾರದಲ್ಲಿ ಎಚ್ಚರವಹಿಸಿ, ದೈಹಿಕ ಚಿಂತನೆಯನ್ನು ಹೆಚ್ಚಿಗೆ ಮಾಡಲಿದ್ದೀರ, ಮನಸ್ಸಿನಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಲಿದೆ .

ಪರಿಹಾರ:ಪ್ರತಿನಿತ್ಯ “ಓಂ ಲಕ್ಷ್ಮಿ ಹಯಗ್ರೀವಾಯ ನಮಃ”  ಈ ಮಂತ್ರವನ್ನು 108 ಬಾರಿ ಜಪಿಸಿ, ಬುಧವಾರ ಜೇನು ತುಪ್ಪವನ್ನು ಅರ್ಪಿಸಿ, ನಮಸ್ಕಾರ ಮಾಡಿ.

ಧನಸ್ಸು ರಾಶಿ 

 

 

 

ಮಾನಸಿಕ ನೆಮ್ಮದಿ, ಆಧ್ಯಾತ್ಮಿಕ ವಿಚಾರದಲ್ಲಿ ಹಿರಿಯರ ಬೆಂಬಲ ಲಭ್ಯವಾಗಲಿದೆ, ಮನಸ್ಸಿಗೆ ಶಾಂತಿ ಲಭ್ಯವಾಗಲಿದೆ, ಪ್ರತಿಭೆಗೆ ತಕ್ಕ ಫಲ ದೊರೆಯಲಿದೆ, ಆತ್ಮೀಯರಿಂದ ಸಲಹೆಯನ್ನು ಪಡೆದುಕೊಳ್ಳಿ.

ಪರಿಹಾರ:ಮಹಾಲಕ್ಷ್ಮಿ ಅಷ್ಟೋತ್ತರವನ್ನು ಪಠಣೆ ಮಾಡಿ, ಶುಕ್ರವಾರ ಸುಮಂಗಲಿಯರಿಗೆ ಅರಿಶಿನ-ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ.

ಮಕರ ರಾಶಿ

 

 

 

ಈ ವಾರ ಯತ್ನ ಕಾರ್ಯಗಳಲ್ಲಿ ವಿಘ್ನಗಳನ್ನು ಅನುಭವಿಸಬೇಕಾಗುತ್ತದೆ, ಊರೂರು ಸುತ್ತಾಟ, ಮಾತಿನ ಚಕಮಕಿಗೆ ಇಳಿದು ಬಿಡುತ್ತೀರ, ವಾಹನದಲ್ಲಿ ಅಪಘಾತವಾಗುವ ಸಾಧ್ಯತೆ ಹೆಚ್ಚಾಗಿದೆ, ಋಣಬಾಧೆ, ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.

ಪರಿಹಾರ:ಗಜೇಂದ್ರ ಮೋಕ್ಷ ಪಾರಾಯಣವನ್ನು ಮಾಡಿ ವೃದ್ಧ ದಂಪತಿಗಳಿಗೆ ಸ್ವಯಂ ಪಾಕವನ್ನು ದಾನ ಮಾಡಿ, ನಮಸ್ಕಾರ ಮಾಡಿ.

ಕುಂಭ ರಾಶಿ 

 

 

 

ಭೋಗ ವಸ್ತುಗಳು ಪ್ರಾಪ್ತಿಯಾಗಲಿವೆ, ಧನ ಲಾಭ, ಬಾಕಿ ಹಣ ವಸೂಲಿಯನ್ನು ಮಾಡುವುದಕ್ಕೆ ಮುಂದಾಗುತ್ತೀರ, ಮಾನಸಿಕ ನೆಮ್ಮದಿ,ಮನಃಶಾಂತಿ, ಸ್ತ್ರೀಯರಿಗೆ ಶುಭವಾದ ವಾರ, ಉದ್ಯೋಗದಲ್ಲಿ ಬಡ್ತಿ ,ಪರರಿಗೆ ಸಹಾಯ ಮಾಡುವಿರಿ.

ಪರಿಹಾರ:ಸೋಮವಾರ ಶಿವಾಲಯಕ್ಕೆ ಭೇಟಿ ನೀಡಿ ಬಿಲ್ವಾರ್ಚನೆಯನ್ನು ಮಾಡಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಮೀನ ರಾಶಿ 

 

 

 

ತೀರ್ಥಯಾತ್ರೆ ದರ್ಶನ ಮಾಡುವ ಶುಭಯೋಗ, ಮಾತೃವಿನಿಂದ ಸಹಾಯ, ಸುಖ ಭೋಜನ ಪ್ರಾಪ್ತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಸಣ್ಣ ಪುಟ್ಟ ವಿಚಾರಗಳಲ್ಲಿ ಕಲಹ, ಯಾರಾದರೂ ಮಾತನಾಡುವಾಗ ಮಧ್ಯ ಹೋಗಬೇಡಿ, ಇದರಿಂದ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.

ಪರಿಹಾರ:ಗೋಪೂಜೆಯನ್ನು ಮಾಡಿ ಹಸು ಮತ್ತು ಕರುವಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ತಿನ್ನಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top