fbpx
ಸಮಾಚಾರ

ಬಿಗ್‍ಬಾಸ್‍ನ ಈ ವಿಶೇಷ ಸ್ಪರ್ಧಿಯ ಬಗ್ಗೆ ನಿಮಗೆಷ್ಟು ಗೊತ್ತು? ಅವರ ಸಾಧನೆ ಏನು ಗೊತ್ತಾ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುತ್ತಿರುವ, ಕನ್ನಡ ಕಿರುತೆರೆಯ ಅತಿ ದೊಡ್ಡ ಮತ್ತು ಅತಿ ಜನಪ್ರಿಯ ರಿಯಾಲಿಯಿ ಷೋ ಬಿಗ್ ಬಾಸ್ ಶೋನ ಆರನೇ ಆವೃತ್ತಿಗೆ ಅದ್ದೂರಿ ಆರಂಭ ಸಿಕ್ಕಿದೆ. ತಿಂಗಳ ಹಿಂದೆಯೇ ಯಾರ್‍ಯಾರು ಬಿಗ್‌ಬಾಸ್ ಮನೆ ಸೇರಿಕೊಳ್ಳಬಹುದೆಂಬ ಬಗ್ಗೆ ಹುಟ್ಟಿಕೊಂಡಿದ್ದ ಕುತೂಹಲ, ಅಂತೆಕಂತೆಗಳಿಗೂ ತೆರೆ ಬಿದ್ದಿದೆ. ವಿಶೇಷ ಅಂದ್ರೆ ಈ ಬಾರಿಯ ಬಿಗ್​ಬಾಸ್​ಗೆ ತೃತೀಯ ಲಿಂಗಿಯೊಬ್ಬರು ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಬಿಗ್‌ಬಾಸ್ ಶುರುವಾಗುತ್ತದೆ ಎಂದರೆ ಬಿಗ್‌ಬಾಸ್ ವೀಕ್ಷಕರಿಗೆ ಹಬ್ಬದ ವಾತಾವರಣ. ಮುಂದಿನ ನೂರು ದಿನಗಳ ಕಾಲ ಅದರದ್ದೇ ಚರ್ಚೆ, ಅದರದ್ದೇ ಮಾತು. ಅದು ಅದಾಗಲೇ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳ ಹಿನ್ನಲೆ ಏನು? ಅವರ ಸಾಧನೆ ಏನು? ಎಂಬಂತ ವಿಚಾರಗಳನ್ನು ತಿಳಿದುಕೊಳ್ಳಲು ವೀಕ್ಷಕರು ಮುಂದಾಗಿದ್ದಾರೆ. ಅದರಂತೆ ಈ ಭಾರಿಯ ವಿಶೇಷ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ತೃತೀಯ ಲಿಂಗಿ ಆಡಮ್ ಪಾಷ ಅವರ ಬಗೆಗಿನ ಮಾಹಿತಿಗಳೂ ತೆರೆದುಕೊಳ್ಳುತ್ತಿವೆ.

ಕನ್ನಡದ ಬಿಗ್​ಬಾಸ್​​ನಲ್ಲಿ ಭಾಗವಹಿಸಿದ ಮೊದಲ ತೃತೀಯಲಿಂಗಿ ಸ್ಪರ್ಧಿ ಎಂಬ ಕೀರ್ತಿಗೆ ಆಡಮ್​ ಪಾಷಾ ಪಾತ್ರರಾಗಿದ್ದಾರೆ.. ಆಡಮ್ ಹುಟ್ಟಿದ್ದು ಬೆಳದಿದ್ದು ಎಲ್ಲಾ ಬೆಂಗಳೂರಿನಲ್ಲೆ. ಈಗ ಆಡಮ್​ಗೆ 35 ವರ್ಷ ಅವರಿಗೆ 13 ವರ್ಷ ವಯಸ್ಸಾಗಿದ್ದಾಗ ತಾವೊಬ್ಬ ತೃತೀಯ ಲಿಂಗಿ ಎಂಬುದು ಗೊತ್ತಾಗಿತ್ತಂತೆ.. ಬಳಿಕ ತೃತೀಯ ಲಿಂಗಿಯ ರೀತಿಯೇ ಅವ್ರು ಬೆಳೆದಿದ್ದಾರೆ..

ಕುಟುಂಬ:
“ನನಗೆ ಕುಟುಂಬ ಇಲ್ಲ, 2010ರಲ್ಲಿ ನಮ್ಮ ಅಮ್ಮ ನಿಧರಾದರು. ಅಮ್ಮ ಮೃತಪಟ್ಟ ನಂತರ ನಾನು ಬ್ಯಾಂಕಾಕಿಗೆ ಹೋದೆ. ಯಾಕೆಂದರೆ ನಮ್ಮ ತಂದೆಗೆ ನಾನು ಹೀಗಿರುವುದು ಇಷ್ಟವಿರಲಿಲ್ಲ.. ನಾನು ‘ಗೇ’ ಅಂತ ಗೊತ್ತಿದ್ದರೂ, ಹುಡುಗನ ರೀತಿ ಇರಲು ಹೇಳುತ್ತಿದ್ದರು.. ನನ್ನ ತಂದೆ ನನ್ನೊಂದಿಗೆ ಯಾವತ್ತೂ ಕೂಡ ಉತ್ತಮ ಬಾಂಧವ್ಯವನ್ನು ಹೊಂದಿರಲಿಲ್ಲ. ನನಗೂ ನನ್ನ ತಂದೆಯ ಮಧ್ಯೆ ತುಂಬಾ ಅಂತರ ಇತ್ತು. ಆದ್ದರಿಂದ ನಾನು ಬೆಂಗಳೂರು ಬಿಟ್ಟು ಬ್ಯಾಂಕಾಕಿಗೆ ಹೋದೆ. ನನಗೆ ಇಬ್ಬರು ಸಹೋದರಿಯರು ಕೂಡ ಇದ್ದಾರೆ.

ಸಹೋದರಿಯಿಂದ ಮೋಸ:
“ಒಮ್ಮೆ ನನ್ನ ಅಕ್ಕ ಫೋನ್ ಮಾಡಿ ತಂದೆಗೆ ಆರೋಗ್ಯ ಸರಿಯಿಲ್ಲ ಬಾ ಎಂದು ಕರೆದರು. ಆಗ ನಾನು ಕೂಡಲೇ ಬೆಂಗಳೂರಿಗೆ ಬಂದೆ. ಆ ವೇಳೆ ನಮ್ಮ ತಂದೆಗೆ ಕ್ಯಾನ್ಸರ್ ಅಂತಿಮ ಹಂತ ತಲುಪಿತ್ತು. ನಮ್ಮ ತಂದೆ ಸಾಯುವ ಸ್ಥಿತಿಯಲ್ಲಿ ಇದ್ದಾಗಲೂ,”ನೀನು ಹಿಜಡಾ ಯಾಕೆ ನನ್ನನ್ನು ನೋಡಲು ಬಂದೆ” ಎಂದು ನಿಂದಿಸಿದರು.. ಆನಂತರ ಅಕ್ಕ ನನ್ನ ಹೆಬ್ಬೆಟ್ಟು ತೆಗೆದುಕೊಂಡು ಕೋಟ್ಯಂತರ ರೂ ಮೌಲ್ಯದ ಆಸ್ತಿಯಲ್ಲವನ್ನು ಮಾರಾಟ ಮಾಡಿ ಮೋಸ ಮಾಡಿ ಹೋದರು.

ಬಿಗ್ ಬಾಸ್ ಮನೆಗೆ ಡ್ರ್ಯಾಗ್ ಕ್ವೀನ್:
ತೃತೀಯ ಲಿಂಗಿಗಳನ್ನ ಕಂಡ್ರೆ ಕೀಳಾಗಿ ಅಣಕ ಮಾಡುವ ಜನರೇ ಈ ಸಮಾಜದಲ್ಲಿ ಹೆಚ್ಚಾಗಿದ್ದಾರೆ, ಅಂತ ಜನರ ಅಂತ ಕೀಳರಿಮೆಗಳನ್ನ ತಲೆಗೆ ಹಾಕಿಕೊಳ್ಳದೇ ಸವಾಲಾಗಿ ಸ್ವೀಕರಿಸಿ ಒಬ್ಬ ಅಂತಾರಾಷ್ಟ್ರೀಯ ಮಟ್ಟದ ಡ್ಯಾನ್ಸರ್​ ಆಗಿ ಸಾಧನೆ ಮಾಡಿದ್ದಾರೆ. ಡ್ರ್ಯಾಗ್‌ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಆಡಮ್‌ ಪಾಷಾ ಬೆಂಗಳೂರಿನ ಫಸ್ಟ್‌ ಡ್ರ್ಯಾಗ್ ಕ್ವೀನ್ ಆಗಿರುವ ಹೆಗ್ಗಳಿಕೆ ಹೊಂದಿದ್ದಾರೆ.

2009ರಲ್ಲಿ ಇಂಡಿಯನ್ ಸೂಪರ್ ಕ್ವೀನ್ ಸ್ಪರ್ಧೆಗೆ ಎಂಟ್ರಿ ಕೊಟ್ಟು ನಂತರ 2010ರಲ್ಲಿ ಥೈಲೆಂಡ್​ನಲ್ಲಿ ನಡೆಡಿದ್ದ ಇಂಟರ್​ನ್ಯಾಷನಲ್​ ಸೂಪರ್​ ಕ್ವೀನ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.. ತೃತೀಯ ಲಿಂಗಿಗಳೂ ಕೂಡ ಸಾಮಾನ್ಯರಂತೆ ಎಲ್ಲರ ಜೊತೆಯಲ್ಲಿ ಒಂದೇ ಮನೆಯಲ್ಲೇ ಇರಬಹುದು ಎಂಬುದನ್ನು ತೋರಿಸಲು ಬಿಗ್​ಬಾಸ್​ನಲ್ಲಿ ಭಾಗವಹಿಸುತ್ತಿರುವುದಾಗಿ ಆಡಮ್ ಹೇಳಿದ್ದಾರೆ.

ಅಂದಹಾಗೆ ಆಡಮ್ ಅವರ ಜೀವನ ಅಷ್ಟೇನೂ ಸುಲಭವಾಗಿರಲಿಲ್ಲ., ಲೈಂಗಿಕ ದೃಷ್ಟಿಕೋನದಿಂದ ಅವ್ರು ತುಂಬಾ ಅವಮಾನಗಳನ್ನ ಮತ್ತು ನಿಂದನೆಗಳನ್ನ ಎದುರಿಸಿದ್ದಾರೆ, ಸ್ವತಃ ತಮ್ಮ ಕುಟುಂಬದವರಿಂದಲೇ ದೂರತಳ್ಳಲ್ಪಟ್ಟು ಮೋಸಕ್ಕೂ ಒಳಗಾಗಿದ್ದಾರೆ. ಇನ್ನು ಸಮಾಜದಲ್ಲಿ ಅವರನ್ನ ಹಿಜ್ಡಾ, ಗೇ ಅಂತೆಲ್ಲಾ ದೂರ ಮಾಡಿ ಕೀಳಾಗಿ ಕಂಡಿದ್ದಾರೆ. ಇಷ್ಟೆಲ್ಲಾ ನೋವುಗಳ ನಡುವೆಯೂ ಆಡಮ್ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರುವುದು ಪ್ರತಿಯೊಬ್ಬ ತೃತೀಯ ಲಿಂಗಿಗಳಿಗೂ ಮಾದರಿಯಾಗಿದೆ ಎನ್ನಬಹುದು.

ಈ ಹಿಂದೆ ಹಿಂದಿಯ ಬಿಗ್ ಬಾಸ್ ನಲ್ಲಿ ತೃತೀಯ ಲಿಂಗಿಗಳಿಗೂ ಅವಕಾಶ ಕಲ್ಪಿಸಿ ಸಾಮಾಜಿಕವಾಗಿ ಅವರಿಗೂ ಪ್ರೋತ್ಸಾಹ ನೀಡುವ ಕೆಲಸ ಮಾಡಿತ್ತು.. ಆದರೆ ಕನ್ನಡದ ಐದು ಸೀಸನ್ ಗಳಲ್ಲಿಯೂ ಇದುವರೆಗೂ ತೃತೀಯ ಲಿಂಗಿಗಳಿಗೆ ಅವಕಾಶ ನೀಡಿರಲಿಲ್ಲ. ಈಗ ಆಡಮ್ ಪಾಷ ಮೂಲಕ ಅವಕಾಶ ಕೊಡುವ ಮೂಲಕ ಅವರನ್ನೂ ಮುಖ್ಯ ವಾಹಿನಿಗೆ ತರುತ್ತಿರುವುದು ನಿಜಕ್ಕೂ ಶ್ಲಾಘನೀಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top