ಭವಿಷ್ಯ

24 ಅಕ್ಟೋಬರ್: ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೨೪ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೪೦
ಸೂರ್ಯಾಸ್ತ : ೧೮:೦೪
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಶ್ವಯುಜ

ಪಕ್ಷ : ಶುಕ್ಲ ಪಕ್ಷ
ತಿಥಿ : ಹುಣ್ಣಿಮೆ – ೨೨:೧೪ ವರೆಗೆ
ನಕ್ಷತ್ರ : ರೇವತಿ – ೦೯:೨೩ ವರೆಗೆ
ಯೋಗ : ಹರ್ಷಣ – ೦೯:೩೪ ವರೆಗೆ
ಸೂರ್ಯ ರಾಶಿ : ತುಲಾ

ಅಭಿಜಿತ್ ಮುಹುರ್ತ:ಯಾವುದೂ ಇಲ್ಲ
ಅಮೃತಕಾಲ : ೦೬:೫೬ – ೦೮:೩೪
ರಾಹು ಕಾಲ:೧೨:೨೨ – ೧೩:೪೭
ಗುಳಿಕ ಕಾಲ:೧೦:೫೭ – ೧೨:೨೨
ಯಮಗಂಡ:೦೮:೦೬ – ೦೯:೩೧

ಆಗಿಹೋದ ಕಹಿ ಘಟನೆಗಳ ನೆನಪಿನಿಂದ ನೋವು ಮರುಕಳಿಸುತ್ತದೆಯೇ ಹೊರತು ಅದರಿಂದ ಪ್ರಯೋಜನವಿಲ್ಲ. ಸಂಗಾತಿಯಿಂದ ಸಾಂತ್ವನದ ಮಾತನ್ನು ಕೇಳುವಿರಿ. ಯೋಗ್ಯರ ಸಲಹೆಯಿಂದ ಮಾತ್ರ ಸಮಸ್ಯೆ ದೂರವಾಗಲಿದೆ

ಅತಿಯಾದ ಆತ್ಮ ಸಮರ್ಥನೆ ನಿಮ್ಮನ್ನು ಅಪಮಾನಗೊಳಿಸುವುದು. ವ್ಯವಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳಿರಿ. ಅವಸರ ಕೆಲಸ ಕೆಡಿಸಿದರೆ ಸಂಯಮ ಕಾರ್ಯ ಸಾಧಿಸುತ್ತದೆ. ಹಾಗಾಗಿ ಮಾಡುವ ಕಾರ್ಯದಲ್ಲಿ ಸಂಯಮ ಇರಲಿ. ಹಮ್ಮಿಕೊಂಡ ಉತ್ತಮ ಕಾರ್ಯಗಳು ಗುರುಹಿರಿಯರ ಆಶೀರ್ವಾದದಿಂದ ಯಶಸ್ವಿ ಆಗಲಿದೆ.

ನಿಗದಿತ ಸಮಯದಲ್ಲಿ ಕೆಲಸ ಮುಗಿಸಬೇಕೆಂಬ ನಿಮ್ಮ ಪ್ರಯತ್ನ ಯಶಸ್ವಿಯಾಗಲಿದೆ. ನೊಂದ ಬಂಧುಗಳಿಗೆ ಸಾಂತ್ವನದ ಮಾತುಗಳನ್ನು ಆಡುವಿರಿ. ಜನಪ್ರಿಯತೆ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಏರ್ಪಡುವುದು

ನೀವಾಗಿಯೇ ಸೃಷ್ಟಿಸಿಕೊಂಡಿದ್ದ ಗೊಂದಲಗಳು ಹಾಗೂ ಸಮಸ್ಯೆಗಳು ತಾವಾಗಿಯೇ ಪರಿಹಾರ ಕಂಡುಕೊಳ್ಳುವುದು. ಸಾಮಾಜಿಕ ಜೀವನ ಅತ್ಯುತ್ತಮವಾಗಿದ್ದರೂ ಖಾಸಗಿ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಅವುಗಳನ್ನು ಚಾಣಾಕ್ಷತನದಿಂದ ದೂರ ಮಾಡಿಕೊಳ್ಳುವಿರಿ. ಸಕಾಲಿಕ ನೆರವಿನಿಂದ ಚಿಂತೆಗಳು ದೂರವಾಗುವುದು. ನೂತನ ಕಾರ್ಯಗಳು ಪ್ರಾಯೋಗಿಕವಾಗಿ ಜಾರಿಗೆ ಬರಲಿವೆ.

 

ಜೀವನದಲ್ಲಿ ಹೊಂದಾಣಿಕೆ ಅನಿವಾರ್ಯ ಎನಿಸುವುದು. ನೀವು ಎಷ್ಟೇ ತಿಳಿವಳಿಕೆಯುಳ್ಳವರಾದರೂ ಕೆಲವೊಂದು ವಿಚಾರಗಳಲ್ಲಿ ಆತ್ಮೀಯರ ಸಲಹೆಯನ್ನು ಸ್ವೀಕರಿಸುವುದು ಒಳ್ಳೆಯದು. ಚಿಕ್ಕಪುಟ್ಟ ತಪ್ಪುಗಳಿಗೂ ಭಾರಿ ಬೆಲೆ ತೆರಬೇಕಾಗುವುದು.

 

ಮಾನಸಿಕ ದುಗುಡ ಹಾಗೂ ಅನಗತ್ಯ ಭಯವನ್ನು ಬಿಡಿ. ಬಿಟ್ಟು ಹೋಗಿದ್ದ ಬಾಂಧವ್ಯ ಮತ್ತೆ ಬೆಸೆಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಸುತ್ತಲೂ ನಯವಂಚಕರ ಗುಂಪೇ ತುಂಬಿರುವುದು. ಅವರ ಮಾತಿನ ಜಾಲಕ್ಕೆ ಸಿಲುಕಬೇಡಿ.

 

ಬಂಧುಗಳ ಮಧ್ಯೆ ಬಿಟ್ಟು ಹೋಗಿದ್ದ ಸಂಬಂಧ ಮತ್ತೆ ಚಿಗುರಲಿದೆ. ಇದರಿಂದ ಮನೆಯಲ್ಲಿ ಎಲ್ಲರಿಗೂ ಸಂತೋಷವುಂಟಾಗುವುದು. ಚಿಕ್ಕ ಮಕ್ಕಳ ಅನಾರೋಗ್ಯದಿಂದ ಹೆಚ್ಚಿನ ಖರ್ಚಾಗುವುದು. ಇದಕ್ಕಾಗಿ ಹೆಚ್ಚು ಚಿಂತಿಸಬೇಡಿ. ತುಸು ಜಾಗ್ರತೆ ವಹಿಸದಿದ್ದಲ್ಲಿ ಆಹಾರ ಸಂಬಂಧಿಉದರ ಸಮಸ್ಯೆ ನಿಮ್ಮನ್ನು ಕಾಡುವುದು.

 

ನೀವು ಎಷ್ಟೇ ದುಡಿದು ದಣಿದರೂ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಅವಕಾಶ ಬಹಳ ಕಡಿಮೆ. ನೀವು ಉಳಿಸಿದಷ್ಟು ಹಣವನ್ನು ಮಡದಿ ಮಕ್ಕಳು ಖರ್ಚು ಮಾಡುವರು. ಹೀಗಾಗಿ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಪರದಾಡುವಿರಿ. ಆದರೂ ದುಡಿಮೆಯ ಉತ್ಸಾಹ ನಿಮ್ಮಲ್ಲಿ ಕಡಿಮೆಯಾಗುವುದಿಲ್ಲ. ಹಿರಿಯರ ಅಣತಿಯಂತೆ ನಡೆದರೆ ಉತ್ತಮ.

 

ಸ್ನೇಹಿತರ ಹಾಗೂ ಅನುಭವಿಗಳ ಮಾರ್ಗದರ್ಶನ ತುಂಬಾ ಅಗತ್ಯ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಕಾಡುವುದು. ಸೂಕ್ತ ಚಿಕಿತ್ಸೆ ಮಾಡಿಸಿ. ನಿಮ್ಮ ಶ್ರಮಕ್ಕೆ ಹಾಗೂ ದುಡಿಮೆಗೆ ತಕ್ಕ ಪ್ರತಿಫಲ ದೊರೆಯಲಿದೆ. ಮತ್ತೊಬ್ಬರ ಜೀವನದ ಆಗುಹೋಗುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಇದರಿಂದ ನೀವು ಜೀವನದಲ್ಲಿ ಕಷ್ಟ ಅನುಭವಿಸುವಿರಿ.

ಗೊತ್ತುಗುರಿಯಿಲ್ಲದೆ ಹಮ್ಮಿಕೊಂಡ ಅನೇಕ ಕಾರ್ಯಗಳಿಗೆ ಆರ್ಥಿಕ ಕೊರತೆ ಕಂಡು ಬರಲಿದೆ. ಕೊಟ್ಟ ಮಾತು ಉಳಿಸಿಕೊಳ್ಳಲು ಪರದಾಡುವಿರಿ. ಮಾತಿನ ತಪ್ಪು ಗ್ರಹಿಕೆಯಿಂದ ಕುಟುಂಬದಲ್ಲಿ ದೊಡ್ಡ ಬಿರುಗಾಳಿ ಏಳುವುದು. ಇದನ್ನು ತಾಳ್ಮೆಯಿಂದ ಹಾಗೂ ವಿವೇಚನೆಯಿಂದ ಬಗೆಹರಿಸಿಕೊಳ್ಳಿ.

 

ಮಾತಿನಲ್ಲಿ ಬಲು ಚತುರರಾದ ನೀವು ವಿಷಯಗಳು ತಿಳಿದಿದ್ದರೂ ಮುಗ್ಧರಂತೆ ಇರುವುದು ಉತ್ತಮ. ಬೇರೆಯವರ ವೈಯಕ್ತಿಕ ವಿಚಾರಗಳಲ್ಲಿ ಅತಿ ಕುತೂಹಲ ಬೇಡ. ಇದರಿಂದ ವೈಯಕ್ತಿಕ ಕೀರ್ತಿಗೆ ಕಳಂಕ ಬರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ಮನಸ್ಸಿಗೆ ನೆಮ್ಮದಿ ನೀಡುವುದು. ಆದಾಯ ಹೆಚ್ಚುವುದು. ಸ್ಥಿರಾಸ್ತಿ ಖರೀದಿ ವಿಚಾರದಲ್ಲಿ ಆಶಾಕಿರಣ ಮೂಡುವುದು.

ಕುಟುಂಬದ ಸೌಹಾರ್ದತೆ ಕಾಪಾಡಿಕೊಳ್ಳಲು ಹೆಣಗಾಡುವಿರಿ. ನೀವು ಯಾರ ಪರವಾಗಿ ಮಾತನಾಡಿದರೂ ಮತ್ತೊಬ್ಬರಿಗೆ ಅಸಹನೆ ಆಗುವುದು. ಸಮನ್ವಯತೆ ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಯಾವುದೇ ಪ್ರಯತ್ನಗಳಿಗೆ ಮನೆ ಸದಸ್ಯರ ಸಹಕಾರ ಸಿಗದೆ ಕಳವಳ ಪಡುವಿರಿ. ಆದರೆ ನಿಮ್ಮ ಛಲದ ಸ್ವಭಾವ ಅವೆಲ್ಲವನ್ನು ಮೆಟ್ಟಿ ನಿಲ್ಲುವುದು. ದುಡಿಮೆ ಎಷ್ಟಿದ್ದರೂ ಸಾಲದೇ ಹೋಗಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top