ಅರೋಗ್ಯ

ಮಲೆ ನಾಡಿನ ಬಂಗಾರ ಗೇರು ಹಣ್ಣು ತಿಂದ್ರೆ 12 ಕಾಯಿಲೆಗಳು ಹತ್ರ ಬರದಂಗೆ ಓಡೋಗುತ್ತೆ

ಗೇರು ಹಣ್ಣು.

 

 

 

ಹೊಟ್ಟೆಯಲ್ಲಿರೋ ಜಂತು ಹುಳುಗಳು ಬೇಗ ಸಾಯ್ಬೇಕಂದ್ರೆ ದಿನಕ್ಕೆ ಒಂದೆರಡು ಗೇರು ಹಣ್ಣು ತಿನ್ನಿ.ಅನಾಕಾರ್ಡಿಕ್‌ ಆಮ್ಲಗಳಿಂದ ತುಂಬಿರುವ ಗೇರು ಹಣ್ಣು ಬ್ಯಾಕ್ಟೀರಿಯ ನಿರೋಧಕ ಅಂಶವನ್ನು ಬಹಳವಾಗಿ ಹೊಂದಿದೆ ಬಾಯಿ ಹುಣ್ಣು ,ಹಲ್ಲಿನ ಹುಳುಕು ಇವುಗಳಿಂದ ರಕ್ಷಿಸುತ್ತದೆ .ಲುಥೆನ್ ಹಾಗೂ ಜಿಯಾಕ್ಸಾಂಥಿನ್ ಅಂಶ ಈ ಹಣ್ಣಿನಲ್ಲಿ ಹೆಚ್ಚಾಗಿದ್ದು ಕಣ್ಣಿನ ಊತ ಹಾಗು ಪೊರೆ ಸಮಸ್ಯೆಗಳು ಬರದಂತೆ ತಡೆಯಲು ಸಹಾಯ ಮಾಡುತ್ತದೆ .ಗೇರು ಹಣ್ಣಿನಲ್ಲಿ ವಿಟಮಿನ್ ಸಿ , ವಿಟಮಿನ್‌ ಬಿ೧, ವಿಟಮಿನ್‌ ಬಿ೩ , ಬೀಟಾ ಕ್ಯಾರೋಟಿನ್‌ ಅಂಶಗಳು ಹೆಚ್ಚಾಗಿವೆ .ಗೇರು ಹಣ್ಣಿನಲ್ಲಿರುವ ಕ್ಯಾಲ್ಸಿಯಂ.ಮೆಗ್ನೇಷಿಯಂ ಹಾಗೂ ಪೊಟ್ಯಾಶಿಯಮ್ ಅಂಶಗಳು ಮೂಳೆ ಸವೆತವನ್ನು ತಪ್ಪಿಸಲು ಸಹಾಯ ಮಾಡುವುದಲ್ಲದೆ ,ಮೂಳೆಗೆ ಸಂಬಂಧಿಸಿದ ರೋಗಗಳನ್ನು ಗುಣ ಪಡಿಸುತ್ತದೆ.

ಗೇರುಹಣ್ಣನ್ನು ವೈನ್ ತಯಾರಿ ಮಾಡಲು ಸಹ ಬಳಸಲಾಗುತ್ತದೆ .ಹೊಟ್ಟೆಗೆ ಸಬಂಧಿಸಿದ ಸಮಸ್ಯೆಗಳು , ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ ಅಷ್ಟೇ ಅಲ್ಲದೆ ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ .ದೇಹಕ್ಕೆ ಅಗತ್ಯವಾಗಿ ಬೇಕಾದ ಕಬ್ಬಿನಾಂಶದ ಕೊರತೆಯನ್ನು ಗೇರು ಹಣ್ಣು ನೀಡುತ್ತದೆ , ಇದರಿಂದ ದೇಹದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚಾಗಿ ರಕ್ತ ಕಡಿಮೆ ಸಂಬಂಧಿ ಕಾಯಿಲೆಗಳನ್ನು ನಿವಾರಣೆ ಮಾಡುತ್ತದೆ.ದೇಹದಲ್ಲಿ ಹೆಚ್ಚಾದ ಸಕ್ಕರೆ ಅಂಶವನ್ನು ತಡೆಯಲು ಸಹ ಗೇರು ಹಣ್ಣು ಸಹಾಯ ಮಾಡುತ್ತದೆ ಇದರಿಂದ ಸಕ್ಕರೆ ಮಟ್ಟ ಸಾಧಾರಣವಾಗಿರುತ್ತದೆ .

ವಿಟಮಿನ್ ಬಿ ಹಾಗು ಫಾಲಿಕ್‌ ಆಸಿಡ್‌ ಅಂಶಗಳು ಗರ್ಭಿಣಿಯರಿಗೆ ಬಹಳ ಉತ್ತಮ ವಾದುದ್ದು ಅಷ್ಟೇ ಅಲ್ಲದೆ ಮೆದುಳಿನ ಶಕ್ತಿಯನ್ನು ಉತ್ತೇಜಿಸುತ್ತದೆ .ಗೇರು ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಕ್ಯಾನ್ಸರ್ ಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ .ಹೃದಯದ ಸ್ನಾಯುಗಳನ್ನು ಬಲ ಪಡಿಸುತ್ತದೆ ಮತ್ತು ಹೃದಯ ಸಮ್ಬವಂಧಿ ರೋಗಗಳು ಬರದಂತೆ ತಡೆಯುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top