ದೇವರು

ಇಂದು ನಾಡದೇವತೆ ಚಾಮುಂಡೇಶ್ವರಿ ದೇವಿಯ ರಥೋತ್ಸವ,ಈ ರಥೋತ್ಸವದ ಹಿಂದೆ ಇರೋ ಕಾರಣ ಆದ್ರೂ ಏನ್ ಗೊತ್ತಾ

ನಮ್ಮ ನಾಡ ದೇವತೆಯಾದ ಚಾಮುಂಡೇಶ್ವರಿ ದೇವಿಯ ರಥೋತ್ಸವ ಇಂದು ಚಾಮುಂಡಿ ಬೆಟ್ಟದಲ್ಲಿ ನೆಡೆಯುತ್ತಿದೆ.ಚಾಮುಂಡಿ ಬೆಟ್ಟದಲ್ಲಿ ಇಂದು ಅದ್ದೂರಿ ವಿಜೃಂಭಣೆಯ ರಥೋತ್ಸವ. ಮುಂಜಾನೆಯಿಂದಲೇ ಭಕ್ತರ ಸಮೂಹವೇ ಚಾಮುಂಡಿ ಬೆಟ್ಟದಲ್ಲಿ ನೆರೆದಿದೆ, ಬೆಳಗ್ಗೆ ಎಂಟು ಗಂಟೆ ಹತ್ತು ನಿಮಿಷಕ್ಕೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಯ ರಥೋತ್ಸವ ಪ್ರಾರಂಭವಾಗಿದೆ. ಬೆಳಗ್ಗೆ ಎಂಟು ಗಂಟೆ ಹತ್ತು ನಿಮಿಷಕ್ಕೆ ಸಲ್ಲುವ ಶುಭ ಲಗ್ನದಲ್ಲಿ ರಥೋತ್ಸವ ಪ್ರಾರಂಭ.ಮೈಸೂರು ದಸರಾ ಮುಗಿದ ನಂತರ ತಾಯಿ ನಾಡ ದೇವತೆಯಾದ ಚಾಮುಂಡೇಶ್ವರಿ ದೇವಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ರಥೋತ್ಸವವನ್ನು ಪ್ರತಿವರ್ಷ ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬರಲಾಗಿದೆ .ಇದು ಕೂಡ ಸಂಪ್ರದಾಯದ ಒಂದು ಭಾಗವಾಗಿ ಈಗ ರಥೋತ್ಸವ ಇಂದು ನಡೆಯಲಿದೆ, ವಿಜಯದಶಮಿ ಮುಗಿದ ನಂತರ ಚಾಮುಂಡೇಶ್ವರಿ ದೇವಿಯ ಈ ರಥೋತ್ಸವವನ್ನು ಮಾಡುವುದು ಸಂಪ್ರದಾಯವಾಗಿದೆ.

 

 

 

ಈಗಾಗಲೇ ಮೈಸೂರು ಮಹಾರಾಜರಾದ ರಾಜ ಯದುವೀರ್ ಉತ್ಸವಕ್ಕೆ ಪೂಜೆಯನ್ನು ಕೂಡ ಸಲ್ಲಿಸಿ, ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಒಂದು ಪ್ರದಕ್ಷಿಣೆಯನ್ನು ಹಾಕಿ, ನಂತರ ರಥೋತ್ಸವದ ಒಳಭಾಗಕ್ಕೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯ ಮೂರ್ತಿಯನ್ನು ತಂದು ಕೂರಿಸಲಾಗುತ್ತದೆ. ನಂತರ ರಥೋತ್ಸವಕ್ಕೆ ಚಾಲನೆ ಸಿಗಲಿದೆ.ಇದು ಹಿಂದಿನ ಕಾಲದಿಂದಲೂ ರಾಜರು ನಡೆಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ಚಾಮುಂಡೇಶ್ವರಿ ದೇವಿಗೆ ಕೃತಜ್ಞತೆ ಹೇಳುವ ರೀತಿಯಲ್ಲಿ ಈ ಆಚರಣೆಯನ್ನು ರಥೋತ್ಸವವನ್ನು ಮಾಡಲಾಗುತ್ತದೆ.ಚಾಮುಂಡಿ ಬೆಟ್ಟಕ್ಕೆ ಬಂದಿರುವ ಭಕ್ತರು 2 ರಿಂದ 3 ಗಂಟೆಯಿಂದಲೇ ಬಂದು ಇಲ್ಲಿ ಸೇರಿದ್ದಾರೆ. ಈ ಕೊರೆವ ಚಳಿಯಲ್ಲೂ ಭಕ್ತರು ಯಾವುದನ್ನೂ ಲೆಕ್ಕಿಸದೆ ದೇವಿಯ ಕೃಪೆಗೆ ಪಾತ್ರರಾಗಲು ರಥೋತ್ಸವವನ್ನು ಅದ್ದೂರಿಯಿಂದ ನೆರವೇರಿಸಲು ಚಾಮುಂಡಿ ಬೆಟ್ಟದಲ್ಲಿ ಬಂದು ಸೇರಿದ್ದಾರೆ.ಇದರಿಂದ ನಾಡ ದೇವತೆಯ ಕೃಪೆ ನಮ್ಮ ನಾಡಿನ ಜನರ ಮೇಲೆ ಇರುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top