ಅರೋಗ್ಯ

ಕಡಲೆಕಾಳಿನ ಈ 7 ಅದ್ಭುತ ಅರೋಗ್ಯ ಪ್ರಯೋಜನಗಳನ್ನ ತಿಳ್ಕೊಂಡ್ರೆ ಆಸ್ಪತ್ರೆಗೋಗೋದು ತಪ್ಪುತ್ತೆ.

ನಮ್ಮಲ್ಲಿ ಒಂದೆರಡು ತಲೆಮಾರಿನ ಜನರು ಎಲ್ಲಾ ಅರೋಗ್ಯ ಸಮಸ್ಯೆಗಳಿಗೂ ಮನೆಮದ್ದುಗಳ ಮೊರೆ ಹೋಗುವವರೇ ಹೆಚ್ಚು. ಆದರೆ ಈಗಿನ ತಲೆಮಾರಿನ ಜನರಿಗೆ ಡಾಕ್ಟರ್ ಗಳು ಇಲ್ಲದಿದ್ದರೆ ತಮ್ಮ ಜೀವನವೇ ಇಲ್ಲದಂತಾಗಿದೆ.ಸಣ್ಣ ಪುಟ್ಟ ಸಮಸ್ಯೆಗಳು ಕಾಣಿಸಿಕೊಂಡರೆ ಮೊದಲು ಆಸ್ಪತ್ರೆಗೆ ಹೋಗುತ್ತಾರೆ. ನಮ್ಮ ದಿನನಿತ್ಯದ ಬಳಕೆಯ ಹಲವು ವಸ್ತುಗಳು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ನಿವಾರಣೆ ಒದಗಿಸುತ್ತದೆ.ಅಂತ ಪದಾರ್ಥಗಳಲ್ಲಿ ಕಡಲೆ ಕಾಳು ಸಹ ಒಂದು. ಕಡಲೆಕಾಳುಗಳ ಆರೋಗ್ಯ ಗುಣಗಳನ್ನು ತಿಳಿಯಲು ಮುಂದೆ ಓದಿ.

 

 

 

ಮೈ ಸೋಪನ್ನು ಉಪಯೋಗಿಸಿದರೆ ಕೆಲವರಿಗೆ ಅಲರ್ಜಿ ಆಗುತ್ತದೆ ಅಂಥವರು ಕಡಲೆ ಹಿಟ್ಟನ್ನು ಬಳಸಿಕೊಂಡು ಸ್ನಾನ ಮಾಡಿದರೆ ಯಾವ ತೊಂದರೆಯೂ ಆಗುವುದಿಲ್ಲ. ತುರಿಕೆ,ಅಲರ್ಜಿಯಂತ ಚರ್ಮದ ಕಾಯಿಲೆಗಳನ್ನು ಗುಣಪಡಿಸುತ್ತದೆ.ಕಡಲೇ ಹಿಟ್ಟಿನಿಂದ ಕೂದಲನ್ನು ತೊಳೆಯುತ್ತಿದ್ದರು ತಲೆ ಕೂದಲು ರೇಷ್ಮೆ ಯಂತೆ ಹೊಳಪಾಗುತ್ತದೆ. ಮತ್ತು ತಲೆ ಹೊಟ್ಟು,ಡ್ಯಾಂಡ್ರಫ್ ಹೇನು ಮುಂತಾದ ಸಮಸ್ಯೆಗಳು ಪರಿಹಾರ ವಾಗುತ್ತದೆ.ಹಿತವಾಗಿ ಹುರಿದ ಕಡಲೆಯನ್ನು ಬಳಸುವುದರಿಂದ ವೀರ್ಯ ವೃದ್ದಿಯಾಗುತ್ತದೆ. ಹುರಿಗಡಲೆ ಖರ್ಜೂರ ಹಾಲು ಸಕ್ಕರೆ ಗಳಿಂದಲೇ ತಯಾರಿಸಿದ ಲೇಪನವನ್ನು ಸೇವಿಸಿದರೆ ಶೀಘ್ರವಾಗಿ ವೀರ್ಯ ಸ್ಖಲನವಾಗುವುದಿಲ್ಲ. ಸಂತಾನೋತ್ಪತ್ತಿ ಶಕ್ತಿ ಹೆಚ್ಚಾಗುತ್ತದೆ.ಹುರಿಗಡಲೆಯನ್ನು ನೆಗಡಿ ಬಂದಾಗ ತಿಂದರೆ ನೆಗಡಿ ಮತ್ತು ಶೀತ ಕಡಿಮೆಯಾಗುತ್ತದೆ. ಮೂಗು ಕಟ್ಟಿಕೊಳ್ಳುವ ಸಮಸ್ಯೆ ಕಾಣಿಸಿಕೊಂಡರೆ ಹುರಿಕಡಲೆಯನ್ನು ತಿಂದು ಪರಿಹಾರ ಕಂಡುಕೊಳ್ಳಬಹುದು.

ಕಡಲೆ ಹಿಟ್ಟಿಗೆ ಖರ್ಜೂರ ಹಾಲು ಸಕ್ಕರೆ ಬೆರೆಸಿ ಸೇವಿಸಿದರೆ ಸಣ್ಣ ಇರುವವರು ತೂಕ ಹೆಚ್ಚಿಸಿಕೊಳ್ಳಬಹುದು. ಇದರೊಂದಿಗೆ ಮೂಳೆಗಳು ಧೃಡವಾದ ಶಕ್ತಿ ಸಿಗುತ್ತದೆ.ಪೊಟಾಶಿಯಂ, ಮೆಗ್ನೀಶಿಯಂ, ಕ್ಯಾಲ್ಸಿಯಂ ರೀತಿ ಎಷ್ಟೋ ತರಹದ ಮಿನರಲ್ಸ್ ಕಡಲೆಯಲ್ಲಿ ಇರುತ್ತದೆ. ಇದು ಬೀಪಿಯನ್ನು ಕಂಟ್ರೋಲ್ ಮಾಡುತ್ತದೆ. ಹೆಚ್ಚು ಹೊತ್ತಿದ್ದರೂ ಹಸಿವು ಆಗದೆ ಮಾಡುತ್ತದೆ.ಕಡಲೆಹಿಟ್ಟು ತ್ವಚೆಗೆ ತುಂಬಾ ಒಳ್ಳೆಯದು ನಾವು ಬಳಸುವ ಸೋಪಿಗಿಂತ ಕಡ್ಲೆಹಿಟ್ಟು ಚರ್ಮಕ್ಕೆ ಒಳ್ಳೆಯದು ಕಡಲೆ ಹಿಟ್ಟಿನಲ್ಲಿ ಯಾವುದೇ ರೀತಿಯ ಹಾನಿಕಾರಕ ಪದಾರ್ಥಗಳು ಇರುವುದಿಲ್ಲ. ನಾವು ಅದನ್ನು ಬಳಸಿದಲ್ಲಿ ಮುಖದ ಕಲೆಗಳು ಮೊಡವೆಗಳು ಕಡಿಮೆಯಾಗಿ ಮುಖದ ಅಂದ ಹೆಚ್ಚುತ್ತದೆ.ಹಳದಿ ಕಾಮಾಲೆ ಇರುವವರು ಕಡಲೆಗಳನ್ನು ತಿಂದರೆ ಬೇಗನೆ ವಾಸಿಯಾಗುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top