ಮನೋರಂಜನೆ

“ಅರ್ಜುನ್​ ಸರ್ಜಾ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರುತಿಗೆ ಬೆಂಬಲ” ಎಂಬ ಆರೋಪದ ಬಗ್ಗೆ ನಟ ಚೇತನ್​ ಹೇಳಿದ್ದೇನು?

ನಟಿ ಶ್ರುತಿ ಹರಿಹರನ್​ ಸಹ ಖ್ಯಾತ ನಟ ಅರ್ಜುನ್ ಸರ್ಜಾ ಅವರಿಂದ ತಮಗಾದ ಅನುಭವದ ಕುರಿತು ಹೇಳಿಕೊಂಡಿದ್ದು ಚಿತ್ರರಂಗದಲ್ಲಿ ಈಗ ಬಿರುಗಾಳಿಯನ್ನೇ ಎಬ್ಬಿಸಿದೆ. ತಮಿಳಿನ ವಿಸ್ಮಯ ಸಿನಿಮಾದಲ್ಲಿ ಶೃತಿಹರಿಹರನ್​​ ಹಾಗೂ ಅರ್ಜುನ್​​ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸಿದ್ರು. ಈ ಸಿನಿಮಾ ಶೂಟಿಂಗ್​​ ವೇಳೆಯಲ್ಲಿ ಅರ್ಜುನ್​​ ಸರ್ಜಾ ನನ್ನೊಂದಿಗೆ ಅಸಹಜವಾಗಿ ವರ್ತಿಸುತ್ತಿದ್ರು” ಎಂದು ಹೇಳಿಕೆ ನೀಡಿದ್ದಾರೆ. ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರ ಪರ ಅನೇಕ ಕಲಾವಿದರು ಬೆಂಬಲಿಸಿದರೇ ಇನ್ನೂ ಕೆಲವರು ಶ್ರುತಿ ಆರೋಪದ ಸತ್ಯಾಸತ್ಯತೆಯನ್ನೇ ಪ್ರಶ್ನೆ ಮಾಡಲಾರಂಭಿಸಿದ್ದಾರೆ.

ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರ ಪರ ನಟ ಬಿರುಗಾಳಿ ಚೇತನ್ ಕೂಡ ನಿಂತಿದ್ದಾರೆ. ಆದರೆ ಚೇತನ್ ಹಣದ ಕಾರಣದಿಂದ ಶೃತಿ ಹರಿಹರನ್ ಬೆನ್ನಿಗೆ ನಿಂತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. “ಪ್ರೇಮಬರಹ ಸಿನಿಮಾಗೆ ಮೊದಲು ಚೇತನ್ ಆಯ್ಕೆಯಾಗಿದ್ದರು. ಆ ವೇಳೆ ಅವರಿಗೆ ಆಪ್ಪ ₹10 ಲಕ್ಷ ಅಡ್ವಾನ್ಸ್ ಕೊಟ್ಟಿದ್ದರು. ಕಾರಣಾಂತರಗಳಿಂದ ಸಿನಿಮಾದಿಂದ ಅವರನ್ನು ಕೈ ಬಿಡಲಾಯ್ತು. ಆದರೆ, ಇಲ್ಲಿವರೆಗೂ ಚೇತನ್​ ಹಣ ವಾಪಸ್ ಮಾಡಿಲ್ಲ. ಚೇತನ್​ಗೆ ನೀಡಿದ್ದ ಅಡ್ವಾನ್ಸ್​ ₹10ಲಕ್ಷ ಹಣವನ್ನು ವಾಪಸ್ ನೀಡುವಂತೆ ಚಿತ್ರ ನಿರ್ಮಾಪಕ ಅರ್ಜುನ್ ಸರ್ಜಾ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಟ ಚೇತನ್, ಅರ್ಜುನ್ ಸರ್ಜಾ ಮೇಲೆ ಸಿಟ್ಟಾಗಿದ್ದರು. ಈ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಶ್ರುತಿಹರಿಹರನ್ ಪರವಾಗಿ ಚೇತನ್ ಮಾತನಾಡುತ್ತಿದ್ದಾರೆ” ಎಂದು ಚೇತನ್ ಮೇಲೆ ಆರೋಪಿಸಲಾಗುತ್ತಿದೆ.

10 ಲಕ್ಷ ರುಪಾಯಿ ಹಣದ ವಿಚಾರವಾಗಿ ನಟ ಚೇತನ್ ಶ್ರುತಿ ಹರಿಹರನ್ ಪರವಾಗಿ ಮಾತನಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚೇತನ್, ಅರ್ಜುನ್ ಸರ್ಜಾ ಅವರ ಪ್ರೇಮ ಬರಹ ಚಿತ್ರದಲ್ಲಿ ನಾನು ಅಭಿನಯಿಸಬೇಕಿತ್ತು. ಈ ಚಿತ್ರಕ್ಕಾಗಿ ನಾನು 6 ತಿಂಗಳ ಕಾಲ ಅರ್ಜುನ್ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಇದೇ ವೇಳೆ ಫೋಟೋಶೂಟ್ ಹಾಗೂ ಚಿತ್ರೀಕರಣದ ಸ್ಥಳಗಳನ್ನೆಲ್ಲಾ ಸುತ್ತಾಡಿದ್ದೇವು.

ಮುಂದಿನ ದಿನಗಳಲ್ಲಿ ಮತ್ತೆ ನಾವು ಒಟ್ಟಿಗೆ ಕೆಲಸ ಮಾಡಬಹುದು ಎಂದು ನಟ ಅರ್ಜುನ್ ಸರ್ಜಾ ಅವರು ಹೇಳಿದ್ದರು. ಹೀಗಾಗಿ ಅವರು ನನಗೆ ನೀಡಿದ್ದ ಮುಂಗಡ ಹಣವನ್ನು ಮತ್ತೆ ಮರಳಿ ಕೊಟ್ಟಿಲ್ಲ ಮುಂದಿನ ಪ್ರಾಜೆಕ್ಟ್ ನಲ್ಲಿ ನಾವಿಬ್ಬರು ಒಟ್ಟಾಗಿ ಕೆಲಸ ಮಾಡುತ್ತೇವೆ ಅಂದುಕೊಂಡಿದ್ದೆ. ಆದರೆ ಅವರಿಗೆ ನನ್ನ ಜೊತೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಅವರು ಮುಂಗಡವಾಗಿ ನೀಡಿದ್ದ ಹಣವನ್ನು ವಾಪಸ್ ನೀಡಲು ನಾನು ರೆಡಿಯಾಗಿದ್ದೇನೆ. ಆದರೇ ಅದಕ್ಕೂ ಈ ವಿಚಾರಕ್ಕೂ ಸಂಭಂದ ಕಲ್ಪಿಸುವುದು ತಪ್ಪು ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top