ಮನೋರಂಜನೆ

“ಅರ್ಜುನ್ ಸರ್ಜಾ ಮೇಲೆ ಶ್ರುತಿ ಆರೋಪ ಮಾಡಲು ಧ್ರುವ ಸರ್ಜಾ ಕಾರಣ” ಹೊಸ ಟ್ವಿಸ್ಟ್ ಕೊಟ್ಟ ಚೇಂಬರ್ ಕಾರ್ಯದರ್ಶಿ ಭಾಮಾ ಹರೀಶ್.

ನಟಿ ಶ್ರುತಿ ಹರಿಹರನ್​ ಸಹ ಖ್ಯಾತ ನಟ ಅರ್ಜುನ್ ಸರ್ಜಾ ಅವರಿಂದ ತಮಗಾದ ಅನುಭವದ ಕುರಿತು ಹೇಳಿಕೊಂಡಿದ್ದು ಚಿತ್ರರಂಗದಲ್ಲಿ ಈಗ ಬಿರುಗಾಳಿಯನ್ನೇ ಎಬ್ಬಿಸಿದೆ. ತಮಿಳಿನ ವಿಸ್ಮಯ ಸಿನಿಮಾದಲ್ಲಿ ಶೃತಿಹರಿಹರನ್​​ ಹಾಗೂ ಅರ್ಜುನ್​​ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸಿದ್ರು. ಈ ಸಿನಿಮಾ ಶೂಟಿಂಗ್​​ ವೇಳೆಯಲ್ಲಿ ಅರ್ಜುನ್​​ ಸರ್ಜಾ ನನ್ನೊಂದಿಗೆ ಅಸಹಜವಾಗಿ ವರ್ತಿಸುತ್ತಿದ್ರು” ಎಂದು ಹೇಳಿಕೆ ನೀಡಿದ್ದಾರೆ. ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಅವರ ಪರ ಅನೇಕ ಕಲಾವಿದರು ಬೆಂಬಲಿಸಿದರೇ ಇನ್ನೂ ಕೆಲವರು ಶ್ರುತಿ ಆರೋಪದ ಸತ್ಯಾಸತ್ಯತೆಯನ್ನೇ ಪ್ರಶ್ನೆ ಮಾಡಲಾರಂಭಿಸಿದ್ದಾರೆ.

ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಲೈಂಗಿಕ ದೌರ್ಜನ್ಯ ಆರೋಪವೀಗ ವಿವಾದದ ಕೇಂದ್ರಬಿಂದುವಾಗಿದೆ. ನೆನ್ನೆಯಿಂದೀಚೆಗೆ ಈ ವಿವಾದಕ್ಕೆ ರಾಜಕೀಯ ಅಜೆಂಡಾ ಹಾಗೂ ಧರ್ಮದ ಬಣ್ಣ ಮೆತ್ತಿಕೊಂಡು ಬೇರೆ ರೀತಿಯ ತಿರುವುಗಳನ್ನ ಪಡೆದಿತ್ತು. ಇದೀಗ ಈ ಪ್ರಕರಣಕ್ಕೆ ಮತ್ತೊಂದು ದೊಡ್ಡ ತಿರುವು ಸಿಕ್ಕಿದ್ದು “ಅರ್ಜುನ್ ಸರ್ಜಾ ಮೇಲೆ ಶ್ರುತಿ ಆರೋಪ ಮಾಡಲು ಧ್ರುವ ಸರ್ಜಾ ಕಾರಣ” ಎಂದು ಫಿಲಂ ಚೇಂಬರ್ ಕಾರ್ಯದರ್ಶಿ ಬಾಮ ಹರೀಶ್ ಟ್ವಿಸ್ಟ್ ನೀಡಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಭಾಮಾ ಹರೀಶ್ ಸ್ಯಾಂಡಲ್ ವುಡ್ ಮೀಟೂ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ಈ ವೇಳೆ ಶೃತಿ ಮೀಟೂ ಆರೋಪಕ್ಕೆ ನಟ ಧ್ರುವ ಸರ್ಜಾ ಕಾರಣ ಎಂದು ಹೇಳಿದ್ದಾರೆ..

ನಟಿ ಶೃತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ಅಳಿಯ ಧೃವ ಸರ್ಜಾರೊಂದಿಗೆ ನಟಿಸುವ ಅವಕಾಶ ನೀಡಲು ಮನವಿ ಮಾಡಿದ್ದರು. ಆದರೆ ಈ ವೇಳೆ ಅವರ ಜೋಡಿ ಹಾಗೂ ವಯಸ್ಸಿನ ಹೊಂದಾಣಿಕೆ ಕಾರಣ ನೀಡಿ ಅರ್ಜುನ್ ಸರ್ಜಾ ಅವರು ಶೃತಿ ಅವರ ಮನವಿಯನ್ನು ನಿರಾಕರಿಸಿದ್ದರು. ಅಂದಿನ ದ್ವೇಷ ದೊಡ್ಡದಾಗಿ ಇಂದು ಮೀಟೂವರೆಗೂ ಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶೃತಿ ದ್ವೇಷದಿಂದಲೇ ಈ ರೀತಿ ಆರೋಪ ಮಾಡಿದ್ದು, ಇದು ಸರಿಯಲ್ಲ. ಇಲ್ಲದ ಆರೋಪ ಮಾಡುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top