fbpx
ಮನೋರಂಜನೆ

ಮಗಳಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿರುವ ಆರೋಪ- ಈ ಬಗ್ಗೆ ದುನಿಯಾ ವಿಜಯ್ ಹೇಳೋದೇನು?

ವಿಜಿ ಮನೆಯ ಕುಟುಂಬದ ವ್ಯಾಜ್ಯ ಈಗ ಮತ್ತೊಮ್ಮೆ ಶುರುವಾಗಿದ್ದು ದುನಿಯಾ ವಿಜಿ ಪುತ್ರಿ ಮೋನಿಕಾ ವಿಜಯ್ ಅವರೇ ಸ್ವತಃ ತಮ್ಮ ತಂದೆ ವಿರುದ್ಧವೇ ದೂರು ನೀಡಿದ್ದಾರೆ. “ತನ್ನನ್ನು ತೀರಾ ಅವಾಚ್ಯ ಶಬ್ಧಗಳಿಂದ ಬೈದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದರು” ಎಂದು ಆರೋಪಿಸಿ, ಗಿರಿನಗರ ಪೊಲೀಸ್​ ಠಾಣೆಯಲ್ಲಿ ಮೋನಿಕಾ ದೂರು ದಾಖಲಿಸಿದ್ದಾರೆ. ತಂದೆ ದುನಿಯಾ ವಿಜಯ್, ವಿಜಿಯ ಎರಡನೇ ಪತ್ನಿ(?) ಕೀರ್ತಿ ಗೌಡ ಹಾಗೂ ವಿಜಿ ಕಾರ್ ಡ್ರೈವರ್ ಸೇರಿದಂತೆ ಒಟ್ಟು ಐದು ಜನರ ವಿರುದ್ಧ ದೂರು ದಾಖಲಾಗಿದೆ. ಐಪಿಸಿ ಸೆಕ್ಷನ್ 148,147, 341, 324,323,504 ಅಡಿ ದೂರು ದಾಖಲಾಗಿದೆ.

ತಮ್ಮ ಬಟ್ಟೆಗಳನ್ನ ಎತ್ತಿಕೊಂಡು ಬರಲು ಮೋನಿಕಾ ಅವ್ರು ನೆನ್ನೆ ದುನಿಯಾ ವಿಜಿ ಮತ್ತು ಕೀರ್ತಿ ಗೌಡ ವಾಸವಿರುವ ಮನೆಗೆ ಹೋಗಿದ್ದರಂತೆ. ಮೋನಿಕಾ ಅವರು ಮನೆಯೊಳಗೇ ಹೋಗುತ್ತಿದ್ದಂತೆ ಕೀರ್ತಿಗೌಡ ಹಾಗೂ ವಿಜಯ್ ಮತ್ತು ಕೆಲವರು ಮೋನಿಕಾ ಮೇಲೆ ಹಲ್ಲೆ ಮಾಡಿದ್ದಾರೆ, ಬಾಯಿಗೆ ಬಂದಂತೆ ಬೈದಿದ್ದಾರೆ ಅಂತಾ ಆರೋಪಿಸಲಾಗಿದೆ..  “ಮಾರಕಾಸ್ತ್ರಗಳನ್ನ ತೋರಿಸಿ ಹೆದರಿಸಿದರು ಎಂದು ದುನಿಯಾ ವಿಜಿ ಪುತ್ರಿ ಮೋನಿಕಾ ಆರೋಪಿಸಿದ್ದಾರೆ.  

ದುನಿಯಾ ವಿಜಿ ಹೇಳಿದ್ದೇನು?
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದುನಿಯಾ ವಿಜಯ್ ಕೊಟ್ಟಿರುವ ದೂರು ಸುಳ್ಳು, ಮೂರು ದಿನದಲ್ಲಿ ಪತ್ನಿ, ಮಗಳ ಡ್ರಾಮಾ ಬಯಲು ಮಾಡುವುದಾಗಿ ಹೇಳಿದ್ದಾರೆ. “ನನ್ನ ಮೇಲೆ ಪದೇ ಪದೇ ಈ ರೀತಿ ಮಾಡಿ, ನನ್ನ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಯವರಿಗೂ ಈ ಬಗ್ಗೆ ಎಲ್ಲ ಗೊತ್ತಿದೆ. ಮೂರು ದಿನದಲ್ಲಿ ಸತ್ಯ ಬಿಚ್ಚಿಡುತ್ತೇನೆ. ಯಾರೂ ಇದನ್ನು ನಂಬಬೇಡಿ. ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ..”

“ನಾನು ಮೋನಿಕಾಗೆ ಹೊಡೆದಿಲ್ಲ, ಇದೆಲ್ಲಾ ಬರಿ ನಾಟಕ, ಅವರದ್ದು ಒಂದು ರೀತಿಯ ವಿಕೃತ ಮನಸ್ಸು. ನಾನು ಕೆಲಸವಿಲ್ಲದೇ ಸುಮ್ಮ ಕೂರಬೇಕು ಅನ್ನುವುದು ಅವರ ಆಸೆ. ಅದಕ್ಕಾಗಿಯೇ ನಾಗರತ್ನ ಮತ್ತು ಮಕ್ಕಳು ಇಂತಹ ರಾದ್ಧಾಂತ ಮಾಡ್ತಿದ್ದಾರೆ. ಮಕ್ಕಳನ್ನು ಎತ್ತಕಟ್ಟುವ ಕೆಲಸ ಮಾಡ್ತಿದ್ದಾರೆ. ಇವರಿಗೆ ಬೆಳಗ್ಗೆ ಎದ್ದರೆ ದೂರು, ಸಂಜೆ ಎಫ್‍ಐಆರ್ ಹಾಗೂ ಟಿವಿಯಲ್ಲಿ ಬರುವ ಆಸೆ. ನನ್ನ ಮೇಲೆ ಎಫ್‍ಐಆರ್ ದಾಖಲಾಗಲು ಈ ರೀತಿ ಮಾಡುತ್ತಿದ್ದಾರೆ. ನಾನು ತೊಂದರೆಯಲ್ಲಿದ್ದರೆ ಅವರಿಗೆ ಖುಷಿ. ಹಾಗಾಗಿ ಅವರು ಹೀಗೆ ಮಾಡುತ್ತಿದ್ದಾರೆ. ” ಎಂದು ಕಿಡಿಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top