ಹೆಚ್ಚಿನ

ವ್ಯಕ್ತಿಯ ಅಂಗಾಲಿನ ಆಕಾರದ ಆಧಾರದ ಮೇಲೆ ಆ ವ್ಯಕ್ತಿಯ ಗುಣ,ಸ್ವಭಾವ, ಅದೃಷ್ಟದ ಬಗ್ಗೆ ಚೆನ್ನಾಗಿ ತಿಳ್ಕೊಬಹುದು.

ವ್ಯಕ್ತಿಯ ಅಂಗಾಲನ್ನು ನೋಡಿ ನೀವು ಯಾವುದೇ ವ್ಯಕ್ತಿಯ ಬಗ್ಗೆಯಾದರೂ ಸಹ ತುಂಬಾ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ. ಅದರಲ್ಲಿ ವ್ಯಕ್ತಿಯ ಅಂಗಾಲು ನೀರಿನಲ್ಲಿ ನೆನೆದು ಒದ್ದೆಯಾದಾಗ ನಂತರ ನಾವು ನಮ್ಮ ಕಾಲನ್ನು ನೆಲದ ಮೇಲೆ ಇಟ್ಟಾಗ  ಒಂದು ಅಂಗಾಲಿನ  ಆಕಾರ ಮೂಡುತ್ತದೆ. ಆ ಆಕಾರ ಅಥವಾ ಚಿತ್ರದ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ಹೇಳಬಹುದಾಗಿದೆ.

 

 

 

ಸಂಪೂರ್ಣವಾಗಿ ನೆಲದ ಮೇಲೆ ಅವರ ಅಂಗಾಲಿನ ಚಿತ್ರ ಈ ರೀತಿಯಾಗಿ ಇದ್ದರೆ ಅವರ ಮನಸ್ಸು ಶುದ್ಧವಾಗಿದ್ದು ಜವಾಬ್ದಾರಿಯುತ ಮನುಷ್ಯರಾಗಿರುತ್ತಾರೆ. ಇವರ ಯೋಚನೆಯೂ ಅನ್ಯ ಜನರಿಗಿಂತ ವಿಭಿನ್ನ ಪ್ರವೃತ್ತಿಯಿಂದ ಕೂಡಿರುತ್ತದೆ. ಇವರು ಓದುವುದರಲ್ಲಿ ಮತ್ತು ಬರೆಯುವುದರಲ್ಲಿ ತುಂಬಾ ಉತ್ತಮರು. ಇವರು ಸಾಧಾರಣ ಜೀವನವನ್ನು ನೆಡೆಸುತ್ತಾರೆ.ಅತ್ಯುತ್ತಮ ವಿಚಾರಗಳ ಬಗ್ಗೆ ಯೋಚಿಸುತ್ತಾರೆ. ಆದರೆ ಇವರ ಬಗ್ಗೆ ಹೇಳುವುದಾದರೆ ಇವರು ಸೋಮಾರಿಗಳೂ ಸಹ ಆಗಿದ್ದು, ಪ್ರತಿಯೊಂದು ಕೆಲಸ ಕಾರ್ಯವನ್ನು ಇಂದು ಮಾಡುತ್ತೇವೆ, ನಾಳೆ ಮಾಡುತ್ತೇವೆ, ನಾಡಿದ್ದು ಮಾಡಿದರಾಯಿತು ಎಂದು ಹೇಳಿಕೊಂಡು ಮುಂದೆ ಸಾಗುತ್ತಿರುತ್ತಾರೆ. ಇದೇ ಕಾರಣದಿಂದಾಗಿ ಇವರ ಅದೃಷ್ಟ ಇವರ ಜೊತೆಗೆ ಇರುವುದಿಲ್ಲ. ಇವರ ಜೀವನ ಶೈಲಿಯಲ್ಲಿ ಕೂಡ ಒಂದು ಚಾಕ ಚಕ್ಯತೆ ಇರುವುದಿಲ್ಲ.

ಈ ಜನರು ಅವರ ಇಷ್ಟದ ಅನುಸಾರ ಅವರ ಜೀವನ ನಡೆಸುತ್ತಾರೆ. ಅವರು ಏನು ಯೋಚನೆ ಮಾಡುತ್ತಾರೋ ಅದನ್ನೇ ಮಾಡುತ್ತಾರೆ. ಬೇರೆ ಯಾರು ಏನೇ ಹೇಳಿದರೂ ಸಹ ಅವರು ಆ ಕೆಲಸವನ್ನು ಮಾಡುವುದಿಲ್ಲ. ಇವರು ಮನಸ್ಸು ಹೇಳುವುದನ್ನೇ ಮಾಡುತ್ತಾರೆ. ವಿವಾಹದ ನಂತರ ಇವರ ಅದೃಷ್ಟದ ಬಾಗಿಲು ತೆರೆಯುತ್ತದೆ. ಯಶಸ್ಸು ಗಳಿಸುತ್ತಾರೆ. ಪ್ರಾರಂಭಿಕ ಹಂತದಲ್ಲಿ ಇವರು ವೃತ್ತಿಗೆ ಸಂಬಂಧಪಟ್ಟಂತೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಆದರೆ ಮೂವತ್ತನಾಲ್ಕು ವರ್ಷಗಳ ನಂತರ ಇವರ ಅದೃಷ್ಟವೂ ಇವರ ಗುರಿಯ ಕಡೆಗೆ ಇವರನ್ನು ಕರೆದುಕೊಂಡು ಹೋಗುತ್ತದೆ .

ಎರಡನೆಯದಾಗಿ ನೀವು ನೀರಿನಲ್ಲಿ ನೆನೆಸಿರುವ ಕಾಲನ್ನು ನೆಲದ ಮೇಲೆ ಇಟ್ಟಾಗ ಮದ್ಯದ ಅಂಗಾಲು ನೆಲಕ್ಕೆ ಸಂಪೂರ್ಣವಾಗಿ ತಾಕುವುದಿಲ್ಲ. ಜೊತೆಗೆ ನಿಮ್ಮ ಬೆರಳುಗಳು ಮತ್ತು ಅಂಗಾಲಿನ ಮಧ್ಯೆ ಸ್ವಲ್ಪ ಖಾಲಿ ಜಾಗ ಮೂಡುತ್ತದೆ . ಈ ಮೇಲಿನ ಚಿತ್ರದಲ್ಲಿ ಇರುವ ಹಾಗೆ ಇದ್ದರೆ ಇಂತಹ ಜನರು ಕರ್ಮ ಮಾಡಿರುವವರಾಗಿರುತ್ತಾರೆ. ಆದರೆ ಸಮಯದ ಮಹತ್ವವನ್ನು ಇವರು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಜೀವನದಲ್ಲಿ ಸೋಮಾರಿಗಳಾಗಿರುತ್ತಾರೆ. ಆದರೆ ಈ ರೀತಿಯ ಅಂಗಾಲನ್ನು ಹೊಂದಿರುವವರು ಸೋಮಾರಿತನವನ್ನು ಬಿಟ್ಟು ತಮ್ಮ ಕೆಲಸಕ್ಕೆ ಪ್ರಾಮುಖ್ಯತೆ ನೀಡಿದಾಗ, ಮಾತ್ರ ಅವರ ಜೀವನದಲ್ಲಿ ಎಲ್ಲಾ ರೀತಿಯ ಬೌದ್ಧಿಕ ಸುಖವು ಸಹ ಪ್ರಾಪ್ತಿಯಾಗುತ್ತದೆ. ಇವರಿಗೆ ಇವರ ಕಷ್ಟದ ಅನುಸಾರ ಜೀವನದಲ್ಲಿ ಫಲವು ದೊರೆಯುತ್ತದೆ.28 ವರ್ಷಗಳ ನಂತರ ಇವರ ಭಾಗ್ಯೋದಯವಾಗುತ್ತದೆ. ಇವರ ಜೀವನದಲ್ಲಿ ಆಗ ಅದೃಷ್ಟದ ಬಾಗಿಲು ತೆರೆಯುತ್ತದೆ. 28 ವರ್ಷಗಳ ನಂತರ ಇವರಿಗೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ.

 

 

 

ಈ  ಚಿತ್ರದಲ್ಲಿ ಇರುವ ಹಾಗೆ ಇದ್ದರೆ ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ. ಇವರು ತುಂಬಾ ಭಾಗ್ಯಶಾಲಿಯಾಗಿದ್ದಾರೆ. ಈ ರೀತಿಯ ಅಂಗಾಲಿನ ಚಿತ್ರವನ್ನು ಹೊಂದಿರುವವರು ಯಶಸ್ಸು, ಪ್ರತಿಷ್ಠೆ, ಕೀರ್ತಿ, ಸಮ್ಮಾನ, ಗೌರವವನ್ನು ಸಮಾಜದಲ್ಲಿ, ಪರಿವಾರದಲ್ಲಿ, ವೃತ್ತಿಯಲ್ಲಿ ಕೂಡ ಪಡೆಯುತ್ತಾರೆ. ಇವರಿಗೆ ಒಳ ಪರ್ಯಾಪ್ತ ಜ್ಞಾನವಿರುತ್ತದೆ. ಈ ಜನರು ಆರ್ಥಿಕ ರೂಪದಲ್ಲಿ ಸಕ್ಷಮರಾಗಿರುತ್ತಾರೆ. ಇವರ ಸ್ವಭಾವ ಮತ್ತು ಮಾತನಾಡುವ ಶೈಲಿ ಜನರನ್ನು ಇವರತ್ತ ಆಕರ್ಷಿತರನ್ನಾಗಿ ಮಾಡುತ್ತದೆ. ಇವರು ಜೀವನದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಇವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಸಹ ಆ ಕ್ಷೇತ್ರದಲ್ಲಿ ಇವರಿಗೆ ಯಶಸ್ಸು ಪ್ರಾಪ್ತಿಯಾಗುತ್ತದೆ. ದನ ಮತ್ತು ಬೌದ್ಧಿಕ ಸುಖವು ಈ ಜನರಿಗೆ ಜೀವನದಲ್ಲಿ ಅವಶ್ಯವಾಗಿ ಸಿಗುತ್ತದೆ. ಈ ಪ್ರೀತಿಯ ಅಂಗಾಲನ್ನು ಮುಂದಿರುವವರು ಜೀವನದಲ್ಲಿ ಸ್ವಯಂ ಅವರೇ ಕಷ್ಟಪಟ್ಟು ತಮ್ಮ ದುಡಿಮೆಯಿಂದಲೇ ಯಶಸ್ಸನ್ನು ಗಳಿಸಿ ಮೇಲೆ ಬರುತ್ತಾರೆ. ಇದು ಅವರ ಕನಸು ಕೂಡ ಆಗಿರುತ್ತದೆ. ಗೆಲ್ಲಲು ಸಾಧ್ಯ ಎಂದು ಅಂದರೆ “everything is possible” ಎನ್ನುವ ವಾಕ್ಯ ಪರಿಪಾಲಕರು ಇವರಾಗಿರುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top