fbpx
ಮನೋರಂಜನೆ

ದುನಿಯಾ ರಶ್ಮಿ ಮನೆಯಲ್ಲಿ ಯುವಕನ ಸಾವು

ಸೂರಿ ನಿರ್ದೇಶನದಲ್ಲಿ ಮೂಡಿಬಂದಿದ್ದ ದುನಿಯಾ ಸಿನಿಮಾದಿಂದ ಖ್ಯಾತಿ ಗಳಿಸಿದ್ದಾಕೆ ರಶ್ಮಿ ಅಲಿಯಾಸ್ ದುನಿಯಾ ರಶ್ಮಿ.. ಮೊದಲನೇ ಚಿತ್ರದಲ್ಲೆ ತಾನು ತೋರಿದ್ದ ನಟನಾ ಖದರಿನ ಮೂಲಕವೇ ಸಿನಿಮಾ ಕತೃರುಗಳ ಗಮನಸೆಳೆದು ಒಂದೆರೆಡು ಅವಕಾಶಗಳನ್ನ ಪಡೆದರಾದರೂ ಅದೃಷ್ಟ ಕೈಕೊಟ್ಟ ಕಾರಣವೋ ಏನೋ ಆ ನಂತರ ಅವರಿಗೆ ಹೇಳಿಕೊಳ್ಳುವಂತ ಗೆಲುವು ದಾಖಲಿಸಲು ಸಾಧ್ಯವಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಂತೂ ರಶ್ಮಿ ಸಂಪೂರ್ಣವಾಗಿ ತೆರೆಮರೆಗೆ ಸರಿದುಬಿಟ್ಟು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು.ಚಿತ್ರನಟಿ ದುನಿಯಾ ರಶ್ಮಿ ಕನ್ನಡ ಸಿನಿಮಾ ರಂಗಕ್ಕೆ ಅಡಿಯಿಟ್ಟು ಬರೋಬ್ಬರಿ ಒಂದು ದಶಕವೇ ಕಳೆದಿದೆ. ಈ 10 ವರ್ಷಗಳಲ್ಲಿ ರಶ್ಮಿ ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು.

 

 

 

ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಲೇ ಬಂದ ರಶ್ಮಿ, ಪ್ರಾರಂಭದ ಕೆಲವು ವರ್ಷಗಳಲ್ಲಂತೂ ಸ್ವಲ್ಪ ಬ್ಯುಸಿ ಇದ್ದದ್ದು ನಿಜ. ಆದ್ರೆ ಅದೇನಾಯ್ತೋ ಏನೋ, ಇದ್ದಕ್ಕಿದ್ದಂತೆಯೇ ರಶ್ಮಿ ಸ್ಯಾಂಡಲ್ ವುಡ್ ನಿಂದ ಸ್ವಲ್ಪ ದೂರವೇ ಇದ್ದರು.ಈಗ ಮತ್ತೆ ಪ್ರತಿಭಾನ್ವಿತ ನಟಿ ರಶ್ಮಿ ಅವರು ಸ್ಯಾಂಡಲ್ ವುಡ್ ನಲ್ಲಿ ಕಾರ್ನಿ’ ಮೂಲಕ ಮತ್ತೆ ಅಭಿನಯದತ್ತ ಮುಖ ಮಾಡಿದ್ರು .

ದುನಿಯಾ ರಶ್ಮಿ ಆ ಮನೆಯಲ್ಲಿ ನಡೆಯ ಬಾರದ ಘಟನೆ ಒಂದು ನಡೆದಿದ್ದೇ ,ರಶ್ಮಿ ಮನೆ ಮೇಲಿಂದ ಬಿದ್ದು ಯುವಕ ಸಾವನಪ್ಪಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.ಸತ್ತ ಆ ಹುಡುಗನ ಹೆಸರು ಪ್ರತೀಕ್ ಆತ ವೃತ್ತಿಯಲ್ಲಿ ಫೋಟೋಗ್ರಾಫರ್ ,ರಶ್ಮಿ ಸಹೋದರ ಅರುಣ್ ಹಾಗೂ ಪ್ರತೀಕ್ ಒಳ್ಳೆಯ ಗೆಳೆಯರಾಗಿದ್ದರು,ಪ್ರತೀಕ್ ಭಾನುವಾರ ರಾತ್ರಿ ರಶ್ಮಿ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಹಾಗೂ ಅವರೇ ಆ ಪಾರ್ಟಿಯ ಫೋಟೋಶೂಟ್ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ,ರಶ್ಮಿ ತಮ್ಮ ಅರುಣ್ ಹಾಗೂ ಪ್ರತೀಕ್ ಟೆರೆಸ್ ಮೇಲೆ ಹೋಗಿ ಮದ್ಯಪಾನ ಪಾರ್ಟಿ ಮಾಡಿದ್ದಾರೆ.ಈ ವೇಳೆ ಎಣ್ಣೆ ಮತ್ತಿನಲ್ಲಿ ಪ್ರತೀಕ್ ಮನೆ ಮೇಲಿಂದ ಬಿದ್ದಿದ್ದಾನೆ. ತಕ್ಷಣ ಅವನನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲಿ ಪ್ರತೀಕ್ ಸಾವನ್ನಪ್ಪಿದ್ದಾನೆ. ಈ ಘಟನೆ ಸಂಬಂಧ ಪ್ರತೀಕ್ ಪೋಷಕರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ರಶ್ಮಿ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ.ಪೊಲೀಸರು ಘಟನೆ ನಡೆದ ಸ್ಥಳದ ಮರು ಸೃಷ್ಟಿ ಮಾಡಿ ತನಿಖೆ ಆರಂಭಿಸಿದ್ದಾರೆ. ನಾನು ಊಟ ತರುವುದಕ್ಕೆ ಕೆಳಗೆ ಹೋದಾಗ ಪ್ರತೀಕ್ ಕೆಳಗೆ ಬಿದ್ದಿದ್ದಾನೆ ಅಂತ ಪ್ರಾಥಮಿಕ ತನಿಖೆ ವೇಳೆ ಅರುಣ್ ಹೇಳಿಕೆ ನೀಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top