ಮನೋರಂಜನೆ

ಗಾಂಜಾ ಸೇದ್ಕೊಂಡು ಸ್ಟಾರ್​​​​ ಜೊತೆ ಚಕ್ಕಂದ ಆಡೋವಾಗ ಎಲ್ಲೋಗಿತ್ತು #MeToo?- ಹೊಸ ಬಾಂಬ್ ಸಿಡಿಸಿದ ನಟಿ ಹರ್ಷಿಕಾ ಪೂಣಚ್ಚ.

ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಶ್ರುತಿ ಪರ ಧ್ವನಿಯೆತ್ತಿದರೆ, ಕೆಲವರು ಅರ್ಜುನ್ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಸಹ ಅರ್ಜುನ್ ಸರ್ಜಾ ಪರ ತಮ್ಮ ವಾದ ಮಂಡಿಸಿದ್ದಾರೆ. ಇಂದು ಟ್ವೀಟ್ ಮೂಲಕ ನಟ ಅರ್ಜುನ್ ಸರ್ಜಾಗೆ ಬೆಂಬಲ ವ್ಯಕ್ತಪಡಿಸಿರುವ ಹರ್ಷಿಕಾ​ ಪೂಣಚ್ಚ ಅವರು, ಸದ್ಯದ ಎಲ್ಲ ಬೆಳವಣಿಗೆಗಳನ್ನು ನಾನು ನೋಡುತ್ತಿದ್ದೇನೆ. ನಾನು ಹತ್ತಿರದಿಂದ ನಮ್ಮ ಇಂಡಸ್ಟ್ರಿಯನ್ನು ಗಮನಿಸಿದ್ದೇನೆ. ಇಲ್ಲಿ ಎಲ್ಲರೂ ಎಲ್ಲರಿಗೂ ಗೌರವ ಕೊಡುತ್ತಾರೆ ಎಂದಿದ್ದಾರೆ.

 

 

ಹಲವು ವರ್ಷಗಳಿಂದ ಸಿನಿಮಾ ಉದ್ಯಮದಲ್ಲಿರುವ ನಾನು ಬಹಳ ಹತ್ತಿರದಿಂದ ಎಲ್ಲವನ್ನೂ ಗಮನಿಸಿದ್ದೇನೆ. ಮಹಿಳೆಯರಿಗೆ ಅಗೌರವ ತೋರುವುದು ಅಥವಾ ಅವರ ಇಚ್ಛೆಗೆ ವಿರುದ್ಧವಾದ ಕೆಲಸ ಮಾಡಿಸುವುದು ನನಗೆ ಇಷ್ಟವಾಗುವುದಿಲ್ಲ. ಆದರೆ ಕೆಲ ನಟಿಯರು ‘ನಾನೊಂದು ಹೆಣ್ಣು’ ಎನ್ನುವುದನ್ನೇ ಆಯುಧವಾಗಿ ಬಳಸಿಕೊಂಡು ಜನಪ್ರಿಯತೆ ಗಿಟ್ಟಿಸಿಕೊಳ್ಳುವುದನ್ನು ನೋಡಿದಾಗ ಅಸಹ್ಯ ಎನಿಸುತ್ತದೆ.

ಇವರು ಜನಪ್ರಿಯತೆ ಪಡೆದುಕೊಳ್ಳಲು ಒಬ್ಬ ವ್ಯಕ್ತಿಯ ಕುಟುಂಬ ಹಾಳು ಮಾಡುವುದು, ಅವನ ಹೆಂಡತಿ ಮಕ್ಕಳಿಗೆ ಅವಮಾನ ಮಾಡುವುದು, ವರ್ಷಗಟ್ಟಲೆ ಪರಿಶ್ರಮದಿಂದ ಕಟ್ಟಿಕೊಂಡ ವೃತ್ತಿಬದುಕನ್ನು ಕೇವಲ ಒಂದು ಹೇಳಿಕೆಯಿಂದ ಹಾಳು ಮಾಡುವುದು ಎಷ್ಟರಮಟ್ಟಿಗೆ ಸರಿ. ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಶೃತಿ ಪ್ರಚಾರಕ್ಕಾಗಿ ಅರ್ಜನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮಹಾನ್ ಚಳವಳಿಕಾರ್ತಿಯರು ಎನ್ನಿಸಿಕೊಂಡ ಹಲವು ನಟಿಯರು ಗಾಂಜಾ ಸೇದುವುದನ್ನು, ಖ್ಯಾತ ಪುರುಷರ ಮೈಮೇಲೆ ಬೇಕುಬೇಕಾಗಿಯೇ ಬೀಳುವುದನ್ನು ಕಣ್ಣಾರೆ ಕಂಡಿದ್ದೇನೆ. (ಮಲೇಷ್ಯಾ, ದುಬೈ, ಸಿಂಗಪೂರ ಮುಂತಾದ ಕಡೆ ನಡೆಯುವ ಬಿಗ್ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಬೇರೆ ಚಿತ್ರರಂಗದ ನಟರು, ನಿರ್ಮಾಪಕರು, ರಿಯಲ್ ಎಸ್ಟೇಟ್ ಕುಳಗಳನ್ನು ಬಳಸಿಕೊಳ್ಳುತ್ತಾರೆ). ಇನ್ನೂ ಏನೇನೋ ಮಾಡುತ್ತಾರೆ, ಅದೆಲ್ಲವನ್ನೂ ಇಲ್ಲಿ ಹೇಳಲು ಇಷ್ಟವಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ನಾನು ಇವತ್ತು ಹೇಳುವುದನ್ನ ವಿರೋಧಿಸುವ ಕೆಲವರೂ ಇರಬಹುದು. ಆದ್ರೆ ಇದೇ ಸತ್ಯ ಮತ್ತು ಇದು ಯಾವಾಗಲೂ ಹೀಗೆಯೇ ಇರುತ್ತದೆ. ಕೆಲವು ಗಂಡಸರು ಕೆಟ್ಟವರಿದ್ದಾರೆ ಮತ್ತು ಮಹಿಳೆಯರಿಗೆ ಕೆಲಸ ಕೊಡಲು ತಮ್ಮ ಅನುಕೂಲಗಳಿಗೆ ಒಪ್ಪಿಕೊಳ್ಳುವಂತೆ ಒತ್ತಾಯಿಸುತ್ತಾರೆ. ಆದ್ರೆ ಯಾರೂ ನೀವು ಇಷ್ಟ ಪಡದ ಕೆಲಸವನ್ನ ಮಾಡಿಸಲು ನಿಮ್ಮ ಮೇಲೆ ಹಲ್ಲೆ ಮಾಡಲ್ಲ. ನಿಮ್ಮನ್ನ ರೇಪ್ ಮಾಡಲ್ಲ..!! ಯಾವಾಗಲೂ ನೀವು ಗಟ್ಟಿಯಾಗಿ ‘‘ಆಗಲ್ಲ’’ ಅಂತ ಹೇಳಿ ಅಲ್ಲಿಂದ ಹೊರಟು ಹೋಗಬಹುದು..!! ಎರಡೂ ಕೈಗಳಿಂದ ತಟ್ಟಿದರಷ್ಟೇ ಚಪ್ಪಾಳೆ ಆಗುತ್ತದೆ.

ನನ್ನ ಜೊತೆಯ ನಟಿಯರ ಬಗ್ಗೆ ಮಾತನಾಡುವುದು ಸರಿಯೇ ತಪ್ಪೇ ಎಂದು ಯೋಚಿಸುತ್ತಾ ಇಷ್ಟು ದಿನ ಸುಮ್ಮನಿದ್ದೆ. ಆದರೆ ನಮಗೆ ಅನ್ನಕೊಟ್ಟ ಉದ್ಯಮದ ಬಗ್ಗೆ ಮತ್ತು ಇತರ ನಟಿಯರ ಬಗ್ಗೆ ಅಣಕ ಮಾಡುವುದು ನನಗೆ ಸರಿಕಾಣುವುದಿಲ್ಲ. ಜೈ ಕರ್ನಾಟಕ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top