fbpx
ಸಮಾಚಾರ

ದಕ್ಷಿಣ ಗಂಗೆ ಎಂದೇ ಖ್ಯಾತಿಯಾಗಿರುವ ಕಾವೇರಿ ನದಿಯ ಬಗ್ಗೆ ನಿಮಗೆಷ್ಟು ಗೊತ್ತು,ಈ ವಿಷಯಗಳು ನಿಮ್ಗೆ ಗೊತ್ತಾ

ನಮ್ಮ ಕರ್ನಾಟಕದ ಕಾವೇರಿ ನದಿಯ ಬಗ್ಗೆ ನಿಮಗೆಷ್ಟು ಗೊತ್ತು ?
ದಕ್ಷಿಣ ಗಂಗೆ ಎಂದೇ ಖ್ಯಾತಿಯಾಗಿರುವ ಮತ್ತು ಅನೇಕ ಮುಖ್ಯ ನದಿಗಳಲ್ಲಿ ದಕ್ಷಿಣ ಗಂಗೆಯೆಂದು ಕಾವೇರಿಯನ್ನು ಕರೆಯುತ್ತಿದ್ದರು. ಆದರೆ ನದಿಯ ಪವಿತ್ರತೆ , ವ್ಯಾಪಕತೆ, ಭವ್ಯತೆ ಮತ್ತು ಉಪಯುಕ್ತಗಳ ಸಮಗ್ರ ದೃಷ್ಟಿಯಿಂದ ಕಾವೇರಿ ಎನ್ನುವ ಹೆಸರು ಪಡೆದುಕೊಂಡಿದೆ. ಗಂಗೆಯಂತೆ ಕಾವೇರಿ ಕೂಡ ಪಾವನೇ. ತನ್ನ ಜಲ ಸರ್ವಸ್ವವನ್ನು ವಿವಿಧ ಪರೋಪಕಾರಿ ಕಾರ್ಯಗಳಿಗೆ ಅರ್ಪಿಸಿದ ನದಿಯಾಗಿದೆ. ನಮ್ಮ ಕರ್ನಾಟಕದ ಜೀವ ನದಿಗಳಲ್ಲಿ ಒಂದಾಗಿ ತನ್ನ ಜನ್ಮಸ್ಥಳವಾದ ಕೊಡಗಿನ ಅಧಿದೇವತೆ ಎನಿಸಿದೆ. ಆದ್ದರಿಂದಲೇ ಕೊಡಗಿನ ಜನರನ್ನು ಕಾವೇರಿ ಪುತ್ರರು ಎಂದು ಕರೆಯುತ್ತಾರೆ. ಈ ಕಾವೇರಿ ನದಿಯು ಕರ್ನಾಟಕದಲ್ಲಿ 360 ಕಿಲೋಮೀಟರ್ ದೂರ ಸಾಗುವ ನದಿಯಾಗಿದೆ. ಉಳಿದ ಭಾಗ ತಮಿಳುನಾಡಿನ ಕಡೆ ಹರಿಯುತ್ತದೆ. ಈ ಎರಡು ರಾಜ್ಯಗಳಿಗೂ ವರದಾನ ಎನಿಸಿದ ನಮ್ಮ ಕಾವೇರಿ, ಈ ರಾಜ್ಯಗಳ ಚಾರಿತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗಳ ಭವ್ಯ ನೆನಪುಗಳಾದ ಚಿರಾಸ್ತಿಯಾದ ಜಲ ದಾರೆಯಾಗಿದೆ.

 

 

 

ತಮಿಳುನಾಡಿನ ಪೂರ್ವ ಕರಾವಳಿಯ ವಿಶಾಲವಾದ ಬಯಲು ಪ್ರದೇಶದಲ್ಲಿ ತನ್ನ ಪಲವತ್ತಾದ ಮೆಕ್ಕಲ್ಲು ಮಣ್ಣನ್ನು ಹರಿಸಿ ಅದನ್ನು ಬೆಳೆ ಸಮೃದ್ಧಿಯ ಬಂಗಾರದ ಬಟ್ಟಲನ್ನಾಗಿ ಮಾಡಿದ ನಮ್ಮ ಕಾವೇರಿ ನದಿಯನ್ನು ತಮಿಳುನಾಡಿನ ಜನರು ಪನ್ನಿ ಎಂದು ಗೌರವಿಸುತ್ತಾರೆ.ನಮ್ಮ ಕರ್ನಾಟಕಕ್ಕೂ ಇದರ ಉಪಕಾರ ಅಷ್ಟಿಷ್ಟಲ್ಲ. ನಮ್ಮ ಕಾವೇರಮ್ಮ ಉಳಿದೆಡೆಗಳಲ್ಲಿ ಕಾವೇರಿ ಮಾತೆಯಾಗಿರುವಳು. ಭಾರತದ ಪವಿತ್ರ ಸಪ್ತ ನದಿಗಳಲ್ಲಿ ನಮ್ಮ ಕಾವೇರಿ ನದಿಯು ಒಂದಾಗಿದೆ. ಕೊಡಗು ಜಿಲ್ಲೆಯ ಬ್ರಹ್ಮ ಗಿರಿ ಶ್ರೇಣಿಗೆ ಸೇರಿದ ವಾಯುವ್ಯದಂಚಿಗೆ ಸೇರಿದ ತಲಕಾವೇರಿ ಎಂಬಲ್ಲಿ ಸಮುದ್ರಮಟ್ಟಕ್ಕಿಂತ 1320 ಮೀಟರ್ ಎತ್ತರದ ಒಂದು ಗುಹೆ ಕಾವೇರಿ ನದಿಯ ಉಗಮ ಸ್ಥಳ. ಕಾವೇರಿಯನ್ನು ಗ್ರೀಕ್ ಭೌಗೋಳಿಕ ಶಾಸ್ತ್ರಜ್ಞರು “ಕುವೇರಿಸ್” ಎಂದು ಕರೆದಿದ್ದಾರೆ. ಕಾವೇರಿಯ ಪವಿತ್ರತೆ ಮತ್ತು ದೈವಿಕತೆಗಳ ಕುರಿತ ರಚನೆಯನ್ನು ಅಗ್ನಿ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಕಾವೇರಿ ಮಹಾತ್ಮೆಯ ಬಗ್ಗೆ ವಿವರಿಸಿದ್ದಾರೆ.
ಕಾವೇರಿ ನದಿಯು ಸಾಮಾನ್ಯವಾಗಿ ಪೂರ್ವಾಭಿಮುಖವಾಗಿ ತನ್ನ ಸಮುದ್ರದ ಸಂಗಮ ಪಯಣವನ್ನು ಮುಂದುವರೆಸುತ್ತದೆ. ಬೆಟ್ಟದ ಕಣಿವೆ ಮತ್ತು ಪೀಠ ಭೂಮಿ ಪ್ರವಾಹವಾಗಿ ನಮ್ಮ ಕರ್ನಾಟಕದ ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಸಾಗುತ್ತಾ ಅದಕ್ಕೆ ಅನೇಕ ಚಿಕ್ಕ ದೊಡ್ಡ ಉಪ ನದಿಗಳ ನೀರು ಸೇರುತ್ತದೆ. ಕಾವೇರಿ ನದಿಯ ಎಲ್ಲಾ ಜಲಪಾತಗಳು,ನದಿ ಮಧ್ಯದ ಮೂರು ದ್ವೀಪಗಳು ಅವುಗಳಲ್ಲಿ ಎರಡು ದ್ವೀಪಗಳು ನಮ್ಮ ಕರ್ನಾಟಕದ ಭಾಗದಲ್ಲಿ ಇದೆ.

ನಮ್ಮ ರಾಜ್ಯದ ಆಗ್ನೇಯ ಭಾಗದಲ್ಲಿ ಬಿಳಿಗಿರಿರಂಗನ ಬೆಟ್ಟವನ್ನು ಸೀಳುತ್ತಾ ಧುಮುಕುವಲ್ಲಿ ಒಂದು ತುಷಾರ ಶಿಲಾ ಜಲಪಾತದ ಹೊಗೇನಕಲ್ ನಿಂದ ತಮಿಳುನಾಡನ್ನು ಪ್ರವೇಶಿಸುತ್ತದೆ. ಅನಂತರ ಅದು ಬಯಲು ಪ್ರದೇಶದಲ್ಲಿ ಸಾಗಿ ತಿರುಚರಾಪಳ್ಳಿ ಸಮೀಪ ವಿಶಾಲವಾದ ಮುಖಜ ಭೂಮಿಯನ್ನು ರಚಿಸಿಕೊಂಡು ಮುಂದೆ ಹಲವು ಕವಲು ಹೊಳೆಯಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ನಮ್ಮ ತಲಕಾವೇರಿಯಿಂದ ಹೊಗೇನಕಲ್ ಜಲಪಾತದವರೆಗೂ ಇರುವ ನಮ್ಮ ಕರ್ನಾಟಕದ ಕಾವೇರಿಯ ಪ್ರವಾಹದ ರೀತಿ ಅತ್ಯಂತ ವೈಭವ ಮತ್ತು ವೈವಿಧ್ಯಮಯ. ಕಾವೇರಿ ಜನಜೀವನದ ಆಸರೆಯಾಗಿ ಕವಿ ಗಾಯಕರ ಸ್ಪೂರ್ತಿಯಾಗಿ ಜನಜೀವನದ ನೆಚ್ಚಿನ ನದಿಯಾಗಿದೆ ನಮ್ಮ ಕಾವೇರಿ.ನಮ್ಮ ಕರ್ನಾಟಕದಲ್ಲಿ ಕೆಲವೊಂದು ವಿಶೇಷಗಳಿಗೆ ಬೇರೆಬೇರೆ ರೀತಿಯಾಗಿ ಮಾತನಾಡಿಕೊಳ್ಳುವ ಜನ ಕಾವೇರಿ ಎನ್ನುವ ಹೆಸರು ಕೇಳಿದ ತಕ್ಷಣ ಎಲ್ಲರೂ ಒಂದಾಗಿ ಹೋರಾಟಕ್ಕೆ ಬರುತ್ತಾರೆ. ಇದು ನಮ್ಮ ಕರ್ನಾಟಕದಲ್ಲಿ ಕಾವೇರಿ ಎನ್ನುವ ಪದಕ್ಕೆ ಇರುವ ಶಕ್ತಿಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top