ಭವಿಷ್ಯ

ನಿಮ್ಗೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಬೇಕು ಅಂದ್ರೆ ಸಂಬಳ ಬಂದ ತಕ್ಷಣ ತಪ್ಪದೆ ಹೀಗೆ ಮಾಡಿ

ನಿಮ್ಮ ತಿಂಗಳ ಸಂಬಳ ಬಂದ ತಕ್ಷಣ ಉಪ್ಪಿನಿಂದ ಉಪ್ಪನ್ನು ಖರೀದಿಸಿ ಹೀಗೆ ಮಾಡಿದರೆ ಧನ ಪ್ರಾಪ್ತಿಯಾಗುತ್ತದೆ.
ಧನಂ ಮೂಲಂ ಇದಂ ಜಗತ್ ಎಂದು ಹೇಳುತ್ತಾರೆ. ಅದಕ್ಕಾಗಿಯೇ ನಾವು ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೊಸ್ಕರ ಹೆಚ್ಚಾಗಿ ಪ್ರಯತ್ನಿಸುತ್ತಿರುತ್ತೇವೆ. ಈ ದೇವಿಯ ಅನುಗ್ರಹ ಇದ್ದರೆ ಯಾರು ಬೇಕಾದರೂ ಕುಬೇರರಾಗುತ್ತಾರೆ ಎಂದು ಹಿರಿಯರು ಯಾವಾಗಲೂ ಹೇಳುತ್ತಿರುತ್ತಾರೆ. ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳಿಂದ ಕೆಲವು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.ಮನೆಯಲ್ಲಿರುವ ಆ ನಕಾರಾತ್ಮಕತೆಯ ಶಕ್ತಿಗಳಿಂದ ಕೆಲವೊಂದು ಬಾರಿ ಮಾತ್ರ ಸಮಸ್ಯೆಗಳು ತೀವ್ರವಾಗಿರುತ್ತವೆ. ಇದರಿಂದ ಹೇಗೆ ಹೊರ ಬರಬಹುದು ಎಂದು ಈಗ ನಾವು ತಿಳಿದುಕೊಳ್ಳೋಣ.

 

 

 

ತುಂಬಾ ಜನರು ಉಪ್ಪು ಶನಿದೇವನ ಸಂಕೇತ ಎಂದು ಅಂದುಕೊಳ್ಳುತ್ತಾರೆ. ಆದರೆ ಉಪ್ಪು ತುಂಬಾ ಒಳ್ಳೆಯದು ಎಂದು ಶಾಸ್ತ್ರಗಳು ಹೇಳುತ್ತವೆ. ನಾವು ಕಲ್ಲು ಉಪ್ಪನ್ನು ಸರಿಯಾದ ವಿಧಾನದಲ್ಲಿ ಉಪಯೋಗಿಸಿದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ಆರ್ಥಿಕ ಕಷ್ಟಗಳು ದೂರವಾಗುತ್ತದೆ ಎಂದು ವಾಸ್ತು ಶಾಸ್ತ್ರಗಳು ಹೇಳುತ್ತವೆ.ಮೊದಲಿಗೆ ಸ್ವಲ್ಪ ಕಲ್ಲು ಉಪ್ಪನ್ನು ತೆಗೆದುಕೊಳ್ಳಬೇಕು ನಂತರ ಒಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಈ ಕಲ್ಲು ಉಪ್ಪನ್ನು ಮೂಟೆ ಕಟ್ಟಬೇಕು. ಇದನ್ನು ದೇವರ ಮನೆಯಲ್ಲಿಟ್ಟು ಸಂಕಲ್ಪ ಮಾಡಿಕೊಂಡು ಪೂಜೆ ಮಾಡಬೇಕು. ಬಳಿಕ ಇದನ್ನು ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ದೃಷ್ಟಿ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗುತ್ತವೆ. ಕೆಂಪು ಬಣ್ಣದ ಬಟ್ಟೆಯಲ್ಲಿ ಮೂಟೆ ಕಟ್ಟಿದ ಉಪ್ಪನ್ನು ಮನೆಯ ಮುಖ್ಯದ್ವಾರದಲ್ಲಿ ಇಡುವುದರಿಂದ ಯಾವುದಾದರೂ ಶಾಪಗಳ ಇದ್ದರೆ ಅದು ಕೂಡ ದೂರವಾಗುತ್ತದೆ. ಯಾವುದಾದರೂ ಡೈನಿಂಗ್ ಹಾಲ್ ನಲ್ಲಿ ಒಂದು ಚಿಕ್ಕ ಗಾಜಿನ ಡಬ್ಬದಲ್ಲಿ ಕಲ್ಲು ಉಪ್ಪನ್ನು ಇಡುವುದರಿಂದ ಮನೆಯಲ್ಲಿ ಧನಾಕರ್ಷಣೆ ಆಗುತ್ತದೆ.

ನಾವು ಪ್ರತಿದಿನ ಸ್ನಾನವನ್ನು ಮಾಡುವಾಗ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಬೆರೆಸಿ ಸ್ನಾನ ಮಾಡಬೇಕು. ಹೀಗೆ ಇದರಿಂದ ಸ್ನಾನ ಮಾಡುವುದರಿಂದ ನಮ್ಮ ದೇಹದಲ್ಲಿರುವ ನಿರುತ್ಸಾಹ ದೂರವಾಗುತ್ತದೆ. ಹಾಗೆಯೇ ನಮ್ಮಲ್ಲಿರುವ ನಕಾರಾತ್ಮಕತೆಯು ಸಹ ದೂರವಾಗಿ ಸಕಾರಾತ್ಮಕತೆ ಹೆಚ್ಚಾಗುತ್ತದೆ.ತಿಂಗಳ ಸಂಪಾದನೆ ಬಂದ ತಕ್ಷಣ ಮೊದಲಿಗೆ ಉಪ್ಪನ್ನು ಖರೀದಿಸುವುದರಿಂದ ಮನೆಯಲ್ಲಿ ಖರ್ಚುಗಳು ಕಡಿಮೆಯಾಗಿ ಆದಾಯ ಹೆಚ್ಚಾಗುತ್ತದೆ. ಮನೆಯಲ್ಲಿ ನೀವು ಮನೆಯನ್ನು ಸ್ವಚ್ಛಗೊಳಿಸುವಾಗ ನೀರಿನಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ಬೆರೆಸಿ ನೆಲವನ್ನು ಸಾರಿಸಿದರೆ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಕಲ್ಲು ಉಪ್ಪಿನಿಂದ ಹೀಗೆ ಈ ಪರಿಹಾರಗಳನ್ನು ಮಾಡಿದರೆ ಕೆಟ್ಟ ದೃಷ್ಟಿ, ನಕಾರಾತ್ಮಕ ಶಕ್ತಿ ದೂರವಾಗುವುದಿಲ್ಲದೆ ಶ್ರೀ ಮಹಾಲಕ್ಷ್ಮಿ ದೇವಿಯ ಅನುಗ್ರಹ ಸಹ ದೊರೆಯುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top