ಮನೋರಂಜನೆ

ಅಪ್ಪನ ದುನಿಯಾ ವಿಜಯ್ ವಿರುದ್ಧವೇ ದೂರು ನೀಡಿದ ಮಗಳು ಮೋನಿಕಾ- ಕಾರಣವೇನು ಗೊತ್ತಾ?

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಒಂದು ವಾರ ಜೈಲಿನಲ್ಲಿಯೇ ಕಾಲ ಕಳೆದು ಜಾಮೀನಿನ ಮೇಲೆ ಹೊರಬಂದಿರುವ ದುನಿಯಾ ವಿಜಯ್ ಮೇಲೆ ಮತ್ತೊಂದು ದೂರು ದಾಖಲಾಗಿದೆ.. ವಿಜಿ ಮನೆಯ ಕುಟುಂಬದ ವ್ಯಾಜ್ಯ ಈಗ ಮತ್ತೊಮ್ಮೆ ಶುರುವಾಗಿದ್ದು ದುನಿಯಾ ವಿಜಿ ಪುತ್ರಿ ಮೋನಿಕಾ ವಿಜಯ್ ಅವರೇ ಸ್ವತಃ ತಮ್ಮ ತಂದೆ ವಿರುದ್ಧವೇ ದೂರು ನೀಡಿದ್ದಾರೆ.

“ತನ್ನನ್ನು ತೀರಾ ಅವಾಚ್ಯ ಶಬ್ಧಗಳಿಂದ ಬೈದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದರು” ಎಂದು ಆರೋಪಿಸಿ, ಗಿರಿನಗರ ಪೊಲೀಸ್​ ಠಾಣೆಯಲ್ಲಿ ಮೋನಿಕಾ ದೂರು ದಾಖಲಿಸಿದ್ದಾರೆ. ತಂದೆ ದುನಿಯಾ ವಿಜಯ್, ವಿಜಿಯ ಎರಡನೇ ಪತ್ನಿ(?) ಕೀರ್ತಿ ಗೌಡ ಹಾಗೂ ವಿಜಿ ಕಾರ್ ಡ್ರೈವರ್ ಸೇರಿದಂತೆ ಒಟ್ಟು ಐದು ಜನರ ವಿರುದ್ಧ ದೂರು ದಾಖಲಾಗಿದೆ. ಐಪಿಸಿ ಸೆಕ್ಷನ್ 148,147, 341, 324,323,504 ಅಡಿ ದೂರು ದಾಖಲಾಗಿದೆ.

ತಮ್ಮ ಬಟ್ಟೆಗಳನ್ನ ಎತ್ತಿಕೊಂಡು ಬರಲು ಮೋನಿಕಾ ಅವ್ರು ನೆನ್ನೆ ದುನಿಯಾ ವಿಜಿ ಮತ್ತು ಕೀರ್ತಿ ಗೌಡ ವಾಸವಿರುವ ಮನೆಗೆ ಹೋಗಿದ್ದರಂತೆ. ಮೋನಿಕಾ ಅವರು ಮನೆಯೊಳಗೇ ಹೋಗುತ್ತಿದ್ದಂತೆ ಕೀರ್ತಿಗೌಡ ಹಾಗೂ ವಿಜಯ್ ಮತ್ತು ಕೆಲವರು ಮೋನಿಕಾ ಮೇಲೆ ಹಲ್ಲೆ ಮಾಡಿದ್ದಾರೆ, ಬಾಯಿಗೆ ಬಂದಂತೆ ಬೈದಿದ್ದಾರೆ ಅಂತಾ ಆರೋಪಿಸಲಾಗಿದೆ.. “ಮಾರಕಾಸ್ತ್ರಗಳನ್ನ ತೋರಿಸಿ ಹೆದರಿಸಿದರು ಎಂದು ದುನಿಯಾ ವಿಜಿ ಪುತ್ರಿ ಮೋನಿಕಾ ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top