ಮನೋರಂಜನೆ

ದುನಿಯಾ ವಿಜಿ ವಿರುದ್ಧವೇ ದೂರು ದಾಖಲಿಸಿದ ಪುತ್ರಿ ಮೋನಿಕಾ- ವಿಜಿ ಪತ್ನಿ ನಾಗರತ್ನ ಹೇಳಿದ್ದೇನು ಗೊತ್ತಾ?

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಒಂದು ವಾರ ಜೈಲಿನಲ್ಲಿಯೇ ಕಾಲ ಕಳೆದು ಜಾಮೀನಿನ ಮೇಲೆ ಹೊರಬಂದಿರುವ ದುನಿಯಾ ವಿಜಯ್ ಮೇಲೆ ಮತ್ತೊಂದು ದೂರು ದಾಖಲಾಗಿದೆ.. ವಿಜಿ ಮನೆಯ ಕುಟುಂಬದ ವ್ಯಾಜ್ಯ ಈಗ ಮತ್ತೊಮ್ಮೆ ಶುರುವಾಗಿದ್ದು ದುನಿಯಾ ವಿಜಿ ಪುತ್ರಿ ಮೋನಿಕಾ ವಿಜಯ್ ಅವರೇ ಸ್ವತಃ ತಮ್ಮ ತಂದೆ ವಿರುದ್ಧವೇ ದೂರು ನೀಡಿದ್ದಾರೆ.

“ತನ್ನನ್ನು ತೀರಾ ಅವಾಚ್ಯ ಶಬ್ಧಗಳಿಂದ ಬೈದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದರು” ಎಂದು ಆರೋಪಿಸಿ, ಗಿರಿನಗರ ಪೊಲೀಸ್​ ಠಾಣೆಯಲ್ಲಿ ಮೋನಿಕಾ ದೂರು ದಾಖಲಿಸಿದ್ದಾರೆ. ತಂದೆ ದುನಿಯಾ ವಿಜಯ್, ವಿಜಿಯ ಎರಡನೇ ಪತ್ನಿ(?) ಕೀರ್ತಿ ಗೌಡ ಹಾಗೂ ವಿಜಿ ಕಾರ್ ಡ್ರೈವರ್ ಸೇರಿದಂತೆ ಒಟ್ಟು ಐದು ಜನರ ವಿರುದ್ಧ ದೂರು ದಾಖಲಾಗಿದೆ. ಐಪಿಸಿ ಸೆಕ್ಷನ್ 148,147, 341, 324,323,504 ಅಡಿ ದೂರು ದಾಖಲಾಗಿದೆ.

ನಾಗರತ್ನ ಹೇಳಿದ್ದೇನು?
ಇನ್ನು ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ದುನಿಯಾ ವಿಜಯ್ ಅವರ ಪತ್ನಿ ಮತ್ತು ಮೋನಿಕಾ ಅವರ ತಾಯಿ “ನನ್ನ ಮಗಳಿಗೆ ಕಾಲಿನಿಂದ ಒದ್ದಿದ್ದಾರೆ” ಎಂದು ಆರೋಪಿಸಿದ್ದಾರೆ. “ನೆನ್ನೆ ರಾತ್ರಿ ನನ್ನ ಮಗಳು ಬಟ್ಟೆ ತರಲು ನಮ್ ಯಜಮಾನ್ರು ಮತ್ತು ಕೀರ್ತಿಗೌಡ ವಾಸವಿರುವ ಮನೆಗೆ ಹೋಗಿದ್ದಾಳೆ. ಆದರೆ ಮೋನಿಕಾ ಮನೆಯೊಳಕ್ಕೆ ಕಾಲಿಡುತ್ತಿದ್ದಂತೆ ಆಕೆಯ ಮೇಲೆ ಹಲ್ಲೆ ಮಾಡಿ ಕಾಲಿನಿಂದ ಒದ್ದಿದ್ದಾರೆ. ಹೊಡೆತದ ರಭಸಕ್ಕೆ ಮೋನಿಕಾ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಸದ್ಯ ಮೋನಿಕಾಗೆ ಮೆಡಿಕಲ್ ಟೆಸ್ಟ್ ಮಾಡಿಸಿದ್ದು ಈ ಘಟನೆ ಕುರಿತಾಗಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ’ ಎಂದು ನಾಗರತ್ನ ಹೇಳಿದ್ದಾರೆ.,

ತಮ್ಮ ಬಟ್ಟೆಗಳನ್ನ ಎತ್ತಿಕೊಂಡು ಬರಲು ಮೋನಿಕಾ ಅವ್ರು ನೆನ್ನೆ ದುನಿಯಾ ವಿಜಿ ಮತ್ತು ಕೀರ್ತಿ ಗೌಡ ವಾಸವಿರುವ ಮನೆಗೆ ಹೋಗಿದ್ದರಂತೆ. ಮೋನಿಕಾ ಅವರು ಮನೆಯೊಳಗೇ ಹೋಗುತ್ತಿದ್ದಂತೆ ಕೀರ್ತಿಗೌಡ ಹಾಗೂ ವಿಜಯ್ ಮತ್ತು ಕೆಲವರು ಮೋನಿಕಾ ಮೇಲೆ ಹಲ್ಲೆ ಮಾಡಿದ್ದಾರೆ, ಬಾಯಿಗೆ ಬಂದಂತೆ ಬೈದಿದ್ದಾರೆ ಅಂತಾ ಆರೋಪಿಸಲಾಗಿದೆ.. “ಮಾರಕಾಸ್ತ್ರಗಳನ್ನ ತೋರಿಸಿ ಹೆದರಿಸಿದರು ಎಂದು ದುನಿಯಾ ವಿಜಿ ಪುತ್ರಿ ಮೋನಿಕಾ ಆರೋಪಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top