fbpx
ಮನೋರಂಜನೆ

#MeToo – ಸಂಜನಾ ವಿರುದ್ಧ ಗುಡಗಿದ ‘ಗಂಡ-ಹೆಂಡತಿ’ ನಿರ್ದೇಶಕ ರವಿ ಶ್ರೀವತ್ಸ.

ಬಾಲಿವುಡ್​ ಸೇರಿದಂತೆ ಎಲ್ಲಾ ಕಡೆ ಸಂಚಲನ ಮೂಡಿಸುತ್ತಿರುವ #MeToo ಅಭಿಯಾನ ವಿವಾದದ ಕೇಂದ್ರ ಬಿಂದುವಾಗುತ್ತಿವೆ. ಇತ್ತೀಚೆಗಷ್ಟೆ ನಟಿ ಸಂಜನಾ ಗಲ್ರಾಣಿ ಅವರು ನಿರ್ದೇಶಕ ರವಿ ಶ್ರೀವತ್ಸ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ‘ಗಂಡ ಹೆಂಡತಿ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಿರ್ದೇಶಕ ತನಗೆ ಮುಜುಗರವಾಗುವಂತೆ ಚುಂಬನ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಲು ತನ್ನ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ವಿರೋಧಿಸಿದಕ್ಕೆ ಅವರು ತನಗೆ ಬೆದರಿಕೆ ಹಾಕಿ 50ಕ್ಕೂ ಹೆಚ್ಚು ಚುಂಬನದ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಅದು ಅವರ ಮೊದಲ ಸಿನಿಮಾ, ಆಗ ಅವರಿಗೆ 16 ವರ್ಷವಾಗಿದ್ದ ಕಾರಣ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಇದ್ದರು ಆರೋಪಿಸಿದ್ದರು.

ನಟಿ ಸಂಜನಾ ಮಾಡಿರುವ ಆರೋಪಕ್ಕೆ ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ನಿರ್ದೇಶಕ ರವಿ ಶ್ರೀವತ್ಸ ಕೆಲವೊಂದು ಆಪಾದನೆ, ಆರೋಪ, ನಿಂದನೆಗಳು ಬಂದಾಗ ಅವುಗಳಿಗೆ ಉತ್ತರ ಕೊಡದೇ ಸುಮ್ಮನಿರುವುದೇ ಸರಿ ಅಂದುಕೊಂಡಿದ್ದೆ ಆದರೆ ಅದು ತಪ್ಪು ಎಂದು ನನಗೆ ಈಗ ಅರ್ಥವಾಗಿದ್ದು ಡೆಡ್ಲಿ ಈಸ್ ಮಿಸ್ಟರ್ ಪರ್ಫೆಕ್ಟ್ ಎಂದು ನಿರೂಪಿಸುತ್ತೇನೆ ಎಂದು ಹೇಳಿದ್ದಾರೆ. ರವಿ ಶ್ರೀವತ್ಸ ಅವರು ಪೋಸ್ಟ್ ಮಾಡಿರುವ ಲೇಖನ ಈ ಕೆಳಗಿನಂತಿದೆ.

ರವಿಶ್ರೀವತ್ಸ ಫೇಸ್ಬುಕ್ ಪೋಸ್ಟ್:

೧೭ರ ಅಕ್ಟೋಬರ್ ಸಂಜೆ ೭ರ ವೇಳೇಗೆ ಟಿವಿ ಮಾಧ್ಯಮದಲ್ಲಿರುವ ನನ್ನ ಸಂಬಂಧಿಯಿಂದ ನನಗೊಂದು call ಬರುತ್ತೇ.. “ಯಾರೋ ಒಬ್ಬ ನಟಿ ಈ ರೀತಿ ನಿಮ್ಮ ಮೇಲೆ ಆರೋಪ ಮಾಡಿದ್ದಾರೆ, ಅವರ ಆರೋಪಗಳಿಗೆ ನಿಮ್ಮ ಉತ್ತರ ಏನೂ?”
ನಾನು ಆಶ್ಚರ್ಯಕರವಾಗಿ ಹನ್ನೆರಡು ವರುಷಗಳ ನಂತರ ಅದೂ ಈಗ ಈ ರೀತಿ ಹೇಳಿಕೇನಾ? ಇದೆಲ್ಲ ಅಸಹ್ಯ! ಹೋಗಲಿ ಬಿಟ್ಟು ಬಿಡೂ ಅಣ್ಣಯ್ಯ, ಆರೋಪ, ಆಪಾದನೆ, ನಿಂದನೆ ಇವುಗಳಿಗೆ ತಿರಸ್ಕಾರವೇ ಮದ್ದು ಎಂದು ಹೇಳುತ್ತಾ ಕರೆ ಕೊನೆಗಳಿಸಿದೆ.

ಆದರೆ ಅದರ ನಂತರ ನನ್ನ ಫೋನ್ ನಿರಂತರವಾಗಿ ಒಂದಲ್ಲ ಒಂದು ಕರೆ ಹೊತ್ತು ತರಲಿಕ್ಕೆ ಶುರುಮಾಡಿತು.. ಕರೆ ಮಾಡಿದ ಪ್ರತಿಯೊಬ್ಬ ಮಿತ್ರರೂ, “ನೀವು ಯಾಕೆ ಮಾತಾಡ್ತಿಲ್ಲಾ? ಯಾಕೆ ಸುಮ್ಮನೆ ಆರೋಪ ಹೊತ್ತು ಕೂರ್ತಾಇದ್ದೀರೀ?? ಸತ್ಯಾ ಅಸತ್ಯತೆಗಳೇನು” ಅಂತ ಕೇಳಿಕ್ಕೆ ಶುರುಮಾಡಿದರು. ಮೌನವಾಗೇ ಇದ್ದೇ ಆದರೇ..

ನನ್ನ ಮೌನಕ್ಕೆ ತಪ್ಪಾದ ಅರ್ಥ ಹೊರಹೊಮ್ಮಲಿಕ್ಕೆ ಶುರುವಾಗಿತ್ತು,
“ಹೆಣ್ಣು ಮಗಳು” ಮಾತಿಗೆ ಮಾತು ಬೇಡಾ, ಅದೂ ನನ್ನ ಸಿನಿಮಾ ಕುಟುಂಬದ ಸಂಬಂಧಗಳನ್ನ ಹಾಳುಮಾಡುತ್ತೆ ಅಂತ ಸುಮ್ಮನಾಗಿದ್ದೆ..

But it was an issue of my Credentials! Life!! Career!!! Above all the Film n Other Films which has given Name Fame Bread n Butter everything to me!!!!

ಮೌನವನ್ನ ಮುರಿಯದಿದ್ದಲ್ಲಿ ಸುಳ್ಳಿನ ಆರೋಪಗಳಿಗೆ ನಾನೆ ನೀರೆರೆದೂ ಆಕೆಯನ್ನ ಮತ್ತಷ್ಟು ಬೆಳೆಸಿದಂತಾಗುತ್ತದೆಂದೂ ಭಾವಿಸಿದೆ.

Well, ನನಗೆ ಜನುಮ ಕೊಟ್ಟವರು ಒಂದು ಹೆಣ್ಣು! ತಾಯಿ!! ನಾನು ಪ್ರತಿಯೊಬ್ಬ ಹೆಣ್ಣುಮಗಳನ್ನು ಗೌರವಿಸುತ್ತೇನೆ. ಅದು ಎಷ್ಟರಮಟ್ಟಿಗೆ ಸರೀ ಎಂಬುದೂ ನನ್ನೊಟ್ಟಿಗೆ ಇರುವವರಿಗೆ ಗೊತ್ತು, ಬಲ್ಲವರಿಗೆ ಗೊತ್ತು, ಇಲ್ಲಿರುವ ನನ್ನ ಅಕ್ಕ ತಂಗಿಯರಿಗೂ ಗೊತ್ತು.

ನಟಿಯೆಂದು ಕರೆಸಿಕೊಳ್ಳುವ ಆ ಹೆಣ್ಣು ಮಗಳ ಮಾತಿನ ಹಿಂದಿರುವ ಉದ್ದೇಶಗಳೇನೂ ನನಗೆ ಗೊತ್ತಿಲ್ಲ..

ಸಾಕ್ಷಿ ಪುರಾವೆಗಳಿಲ್ಲದೇ ಏಕಾಏಕಿ ಮಾಧ್ಯಮದ ಮುಂದೇ ಅವರಿವರಲ್ಲಿ, ಈ ಫೇಸ್ ಬುಕ್, ಟ್ವಿಟರ್, ಇನ್ಸ್ತಗ್ರಮ್ ಅಲ್ಲಿ ಇಲ್ಲಿ ಮಾತಾಡುವುದು, ಪ್ರಚಾರಕ್ಜೆ ಸುಖಾಸುಮ್ಮನೆ ಕೂರುವುದು ಸರಿ ಅಲ್ಲಾ, ಕಾರಣ…
ನಾನು ನಿರ್ದೇಶಕ ರವಿ ಶ್ರೀವತ್ಸ!! ಎಲ್ಲವನ್ನ ಇಟ್ಕೊಂಡೂ ಬೊಂಬೆ ಆಡ್ಸೊನು..

೨೪ ವರುಷದ ನನ್ನ ವೃತ್ತಿ ಜೀವನಕ್ಕೆ ಈಗ ಮತ್ತೊಂದು ತಿರುವು 😉😉😉
ಸ್ನೇಹಿತರೇ, ಇಲ್ಲಿಯವರೆಗೆ ನನ್ನ ಜೊತೆಯಾಗಿದ್ದರೀ, ನಡೆಸ್ಕೊಂಡು ಕರ್ಕೊಂಡು ಬಂದ್ರೀ, ನನ್ನ ಹೆಸರಿಗೆ ಒಂದು ಸ್ಥಾನ ಮಾನ ಗೌರವ ಸಿಗುವ ಹಾಗೆ ಮಾಡಿದ್ರೀ….
ಇದೆಲ್ಲ ನನ್ನ ತಂದೆ, ತಾಯಿ, ನನ್ನ ಯಜಮಾನ, ನನ್ನ ಗುರು ಹಿರಿಯರು, ಸ್ನೇಹಿತರು ಮತ್ತು ನೀವೆರಲ್ಲರು ಒಟ್ಟಾಗಿ ಒಂದುಗೂಡಿ ಕೊಟ್ಟಿರುವ ಭಿಕ್ಷೆ!!!

ಸತ್ಯದ ಗೆಲುವಿಗಾಗೀ ಅಸತ್ಯಾನ ಬೆತ್ತಲೆ ಮಾಡಿ ನಿಲ್ಲಸಲೇಬೇಕು ಇದು ಜಗದ ನಿಯಮ! ಹಾಲುಣಿಸಿದ ತಾಯಿಯನ್ನು ಸಮಾಜದ ನಡು ಬೀದಿಯಲ್ಲಿ ಬೆತ್ತಲೆ ಮಾಡಿ ನಿಲ್ಲಸುವ ಮಗ ನಾನಲ್ಲ!! ಇವತ್ತಿಗೂ, ಸಾಯುವ ಕೊನೆ ಘಳಿಗೆಯಲ್ಲಿ ಕೂಡ ನಾನು ಹೆಮ್ಮೆಯಿಂದ ಹೇಳುತ್ತೇನೆ “ಗಂಡ ಹೆಂಡತಿ” ಚಿತ್ರ ಅದು ನನಗೆ ಅನ್ನಕೊಟ್ಟ ತಾಯಿ!!!

😘😘😘 ನಿಮ್ಮೆಲ್ಲರ ಆಶೀರ್ವಾದ ಬೆಂಬಲಾನ ನಂಬಿ, ಬೊಂಬೆಯಾಟದ ಮೊದಲನೇ ಷೋ ಈಗ ಶುರು ಮಾಡ್ತಾ ಇದ್ದೇನೆ.. ಕೆಳಗೆ ಇರುವ ವೀಡಿಯೋ ಲಿಂಕ್ ನ ಒಮ್ಮೆ ಸಂಪೂರ್ಣವಾಗಿ ನೋಡಿ ಪ್ಲೀಸ್‌.

Deadly is Mr. Clean and Mr. Perfect ಅಂತ ಮತ್ತೆ ಪ್ರೂವ್ ಮಾಡಿ ತೋರುಸ್ತೀನಿ.
ನೆನಪಿರಲೀ….
ನಾವು “ಕನ್ನಡಿಗರು” ಮೊದಲು ಬಿಟ್ಟು ಆಮೇಲೆ ಹೊಡಿತೀವಿ!!!
ಧನ್ಯೋಸ್ಮಿ
ಡೆಡ್ಲಿ 🙏🏻

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top