fbpx
ಸಮಾಚಾರ

ಜೀವನದಲ್ಲಿ ಬೆಳೆಯಬೇಕು ಎಂದರೆ ಈ ಒಂದನ್ನು ಈ ದಿನವೇ ತ್ಯಾಗ ಮಾಡಿ ಬಿಡಿ. ಆ ಕುರಿತ ಈ ಅರ್ಥಪೂರ್ಣ ಕಥೆಯನ್ನು ತಪ್ಪದೆ ಓದಿ

ಈ ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಯಶಸ್ಸು ಗಳಿಸಬೇಕೆಂದು ಆಶಿಸುತ್ತಾರೆ. ಜೀವನದಲ್ಲಿ ಪ್ರತಿಯೊಬ್ಬರೂ ಒಳ್ಳೆಯ ವ್ಯಕ್ತಿಯಾಗಬೇಕೆಂದು ಆಸೆ ಪಡುತ್ತಾರೆ. ಆದರೆ ಯಶಸ್ಸು ಎನ್ನುವುದು ಅಷ್ಟು ಸುಲಭವಾಗಿ ಎಲ್ಲರಿಗೂ ಸಿಗುವುದಿಲ್ಲ. ಈ ಪ್ರಪಂಚದಲ್ಲಿ ತುಂಬಾ ಮಂದಿ ಯಶಸ್ಸನ್ನು ಯಾಕೆ ಗಳಿಸಲು ಆಗುತ್ತಿಲ್ಲ ಎಂದು ಈ ಕಥೆಯ ಮೂಲಕ ತಿಳಿದುಕೊಳ್ಳಿ.

ಒಬ್ಬ ಗುರುಗಳು ತನ್ನ ಶಿಷ್ಯರೊಂದಿಗೆ ಸೇರಿ ಎಲ್ಲಿಗೋ ಹೋಗುತ್ತಿರುತ್ತಾರೆ. ಹಾಗೆ ಹೋಗುತ್ತಾ, ಹೋಗುತ್ತಾ ಅವರಿಬ್ಬರೂ ಒಂದು ತೋಟದ ಬಳಿ ನಿಲ್ಲುತ್ತಾರೆ. ಇಬ್ಬರಿಗೂ ತುಂಬಾ ಬಾಯಾರಿಕೆ ಯಾಗಿದ್ದರಿಂದ ತೋಟದಲ್ಲಿದ್ದ ಒಂದು ಹಾಳಾದ ಮನೆಗೆ ಹೋಗುತ್ತಾರೆ. ಆ ತೋಟ ನೋಡುವುದಕ್ಕೆ ಚೆನ್ನಾಗಿ ಕಾಣಿಸುತ್ತದೆ. ಆದರೆ ಆ ತೋಟದ ಪರಿಸ್ಥಿತಿ ನೋಡಿದರೆ ಮಾತ್ರ ಅದರ ಯಜಮಾನ ತೋಟದ ಮೇಲೆ ಗಮನ ಹರಿಸುತ್ತಿಲ್ಲ ಎಂದು ಅರ್ಥವಾಗುತ್ತದೆ .ಅಷ್ಟರಲ್ಲಿ ಆ ಮನೆಯಿಂದ ಒಬ್ಬ ವ್ಯಕ್ತಿಯೂ ಹೊರಗಡೆ ಬರುತ್ತಾನೆ. ಆತನಿಗೆ ಆತನ ಹೆಂಡತಿ ಮತ್ತು ಮೂರು ಜನ ಮಕ್ಕಳು ಕೂಡ ಇದ್ದಾರೆ. ಅವರು ಆ ಹಾಳಾದ ಹಳೆ ಬಟ್ಟೆಗಳನ್ನು ಧರಿಸಿ ಕೊಂಡಿರುತ್ತಾರೆ. ಆ ಗುರುಗಳು ಆತನೊಂದಿಗೆ ಕುಡಿಯುವುದಕ್ಕೆ ನೀರು ಸಿಗುತ್ತದೆಯೇ ಎಂದು ಕೇಳುತ್ತಾನೆ. ಆಗ ಅವರು ಕುಡಿಯಲು ನೀರನ್ನು ಕೊಡುತ್ತಾರೆ. ನಂತರ ಗುರುಗಳು ಹೀಗೆ ಹೇಳುತ್ತಾರೆ. ನಿಮ್ಮ ತೋಟ ನೋಡುವುದಕ್ಕೆ ವಿಶಾಲವಾಗಿ ಫಲವತ್ತತೆಯಿಂದ ಕೂಡಿದ ಹಾಗೆ ಕಾಣಿಸುತ್ತದೆ. ಆದರೆ ಈ ತೋಟದಲ್ಲಿ ಯಾವುದೇ ರೀತಿಯ ಬೆಳೆಯನ್ನು ಹಾಕಿಲ್ಲ. ಆದರೆ ನಿಮಗೆ ಹಣ ಎಲ್ಲಿಂದ ಬರುತ್ತದೆ. ನೀವು ಜೀವನವನ್ನು ಹೇಗೆ ಸಾಗಿಸುತ್ತಿದ್ದೀರ ಎಂದು ಕೇಳುತ್ತಾರೆ. ಆಗ ಅವರು ನಮ್ಮ ಬಳಿ ಒಂದು ಹಸು ಇದೆ. ಅದು ಸಾಕಷ್ಟು ಹಾಲು ಕೊಡುತ್ತದೆ. ಆ ಹಾಲನ್ನು ಮಾರಿದರೆ ಸ್ವಲ್ಪ ಹಣ ಬರುತ್ತದೆ ಮತ್ತು ಉಳಿದ ಹಾಲನ್ನು ಕುಡಿದು ನಮ್ಮ ಜೀವನವನ್ನು ಕಳೆಯುತ್ತೇವೆ ಎಂದು ಹೇಳುತ್ತಾರೆ.

 

ಆಗಲೇ ಕತ್ತಲಾಗಿದ್ದರಿಂದ ಆ ಗುರು ಶಿಷ್ಯರು ಇಬ್ಬರೂ ಕೂಡ ಆ ದಿನ ರಾತ್ರಿ ಇಬ್ಬರೂ ಅಲ್ಲೇ ಉಳಿದು ಕೊಳ್ಳುತ್ತಾರೆ. ಮಧ್ಯರಾತ್ರಿ ಆ ಗುರುಗಳು ಶಿಷ್ಯನನ್ನು ನಿದ್ದೆಯಿಂದ ಎಬ್ಬಿಸಿ ನಾವು ಇಲ್ಲಿಂದ ಕೂಡಲೇ ಹೋರಡಬೇಕು ಮತ್ತು ನಾವು ಹೋಗುವಾಗ ಕೂಡಲೇ ಅವರ ಹಸುವನ್ನು ಬೆಟ್ಟದಿಂದ ತಳ್ಳಿ ಹಾಕಿ ಸಾಯಿಸಬೇಕು ಎಂದು ಹೇಳುತ್ತಾರೆ. ಆ ಗುರುಗಳು ಹೇಳಿದ ಮಾತು ಶಿಷ್ಯನಿಗೆ ಇಷ್ಟವಾಗುವುದಿಲ್ಲ. ಆದರೆ ಗುರುವಿನ ಮಾತಿಗೆ ಬೆಲೆ ಕೊಟ್ಟು ಆವರಿಬ್ಬರು ಆ ಹಸುವನ್ನು ಸಾಯಿಸಿ ರಾತ್ರಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ . ಈ ಘಟನೆ ಆ ಶಿಷ್ಯನ ತಲೆಯಲ್ಲಿ ಅವಿಸ್ಮರಣೀಯವಾಗಿ ಉಳಿದುಬಿಡುತ್ತದೆ.ಇದರಿಂದ ಕೆಲವು ವರ್ಷಗಳ ನಂತರ ಶಿಷ್ಯ ತನ್ನ ಜೀವನದಲ್ಲಿ ಯಶಸ್ವಿಯಾದ ನಂತರ ಒಂದು ದಿನ ಹೀಗೆ ಆಲೋಚನೆ ಮಾಡುತ್ತಾನೆ. ಆ ದಿನ ನಾವು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದರೆ ಆ ವ್ಯಕ್ತಿಯನ್ನು ಭೇಟಿ ಮಾಡಿ ಆತನಿಗೆ ತುಂಬಾ ಸಹಾಯ ಮಾಡಬೇಕೆಂದು ಅಂದುಕೊಳ್ಳುತ್ತಾನೆ. ಮುಂದಿನ ದಿವಸ ಶಿಷ್ಯನು ಕಾರಿನಲ್ಲಿ ಆ ತೋಟದ ಹತ್ತಿರ ಹೋಗುತ್ತಾನೆ. ಕಾಣೆಯಾಗಿ ಬಿದ್ದಿದ್ದ ಆ ತೋಟ ಈಗ ಹಣ್ಣಿನ ತೋಟವಾಗಿ ಬದಲಾಗಿರುವುದನ್ನು ಗಮನಿಸುತ್ತಾನೆ. ಆ ದಿನ ಆ ಹಸು ಮರಣಿಸಿದ ನಂತರ ತನ್ನ ತೋಟವನ್ನು ಯಾರಿಗಾದರೂ ಮಾರಿ ಎಲ್ಲಿಗಾದರೂ ಹೊರಟು ಹೋಗಿದ್ದಾರೆಯೇ ಎಂದು ಅಂದುಕೊಳ್ಳುತ್ತಾನೆ.

 

 

 

ಇದರಿಂದ ಆ ಶಿಷ್ಯ ಹಿಂದಕ್ಕೆ ಹೊರಡುತ್ತಾನೆ. ಆಗಲೇ ಆ ಶಿಷ್ಯ ಆ ವ್ಯಕ್ತಿಯನ್ನು ನೋಡುತ್ತಾನೆ. ಆಗ ಆ ಶಿಷ್ಯ ಆತನ ಬಳಿ ಹೋಗಿ ನೀವು ನನ್ನನ್ನು ಗುರುತಿಸದೇ ಇರಬಹುದು. ನಾನು ಕೆಲವು ವರ್ಷಗಳ ಹಿಂದೆ ನಿಮ್ಮನ್ನು ಭೇಟಿ ಮಾಡಿದ್ದೆ ಎಂದು ಹೇಳುತ್ತಾನೆ. ಆಗ ಆ ವ್ಯಕ್ತಿ ಹೌದು ನಾನು ಆ ದಿನವನ್ನು ಹೇಗೆ ಮರೆಯಲು ಸಾಧ್ಯ. ನೀವು ಕನಿಷ್ಠ ಪಕ್ಷ ನನಗೆ ಹೇಳದೆ ಹೊರಟು ಹೋದಿರಿ. ಅದೇ ದಿನ ಅದು ಹೇಗೋ ಗೊತ್ತಿಲ್ಲ. ನಮ್ಮ ಹಸು ಬೆಟ್ಟದ ಮೇಲಿಂದ ಬಿದ್ದು ಸತ್ತು ಹೋಯಿತು ನಂತರ ಕೆಲವು ದಿನಗಳ ಮಟ್ಟಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಆದರೆ ಬದುಕುವುದಕ್ಕೆ ಏನೋ ಒಂದು ಮಾಡಬೇಕು. ಅಲ್ಲವೇ ಆದ್ದರಿಂದ ಸೌದೆಗಳನ್ನು ಸೀಳಿ ಮಾರಲು ಪ್ರಾರಂಭಿಸಿದೆ. ಅದರಿಂದ ಸ್ವಲ್ಪ ಹಣವನ್ನು ಸಂಗ್ರಹಿಸಿ ನನ್ನ ತೋಟದಲ್ಲಿ ಬೆಳೆ ಹಾಕಿದೆ.ಬೆಲೆ5 ಚೆನ್ನಾಗಿ ಬರುತ್ತಿದೆ. ಆದರೆ ಬಂದ ಹಣದಿಂದ ನನ್ನ ತೋಟದಲ್ಲಿ ಹಣ್ಣಿನ ಗಿಡಗಳನ್ನು ನೆಡುತ್ತೇನೆ .ಈ ಕೆಲಸ ತುಂಬಾ ಚೆನ್ನಾಗಿದೆ.
ಈಗ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಲ್ಲರಿಗಿಂತಲೂ ದೊಡ್ಡ ಹಣ್ಣಿನ ವ್ಯಾಪಾರಿ ನಾನು. ಒಂದು ವೇಳೆ ಆ ದಿನ ನನ್ನ ಹಸು ಮರಣಿಸದಿದ್ದರೆ ಇದೆಲ್ಲಾ ನಡೆಯುತ್ತಿರಲಿಲ್ಲವೇನೋ ? ಅಷ್ಟರಲ್ಲಿ ಆ ಶಿಷ್ಯನು ಹೀಗೆ ಹೇಳುತ್ತಾನೆ ? ಆದರೆ ಈ ಕೆಲಸವನ್ನು ನೀವು ಮುಂಚೆಯೂ ಕೂಡ ಮಾಡಬಹುದಿತ್ತು ಅಲ್ಲವೇ ? ಆಗ ಅವರು ಹೌದು, ಮಾಡಬಹುದಿತ್ತು. ಆದರೆ ಆ ಸಮಯದಲ್ಲಿ ಅಷ್ಟು ಕಷ್ಟ ಬೀಳುವ ಅಗತ್ಯವಿಲ್ಲದೇ ನಮ್ಮ ಜೀವನ ಕಳೆಯುತ್ತಿತ್ತು. ಇಷ್ಟೊಂದು ಸಾಮರ್ಥ್ಯ ಇದೆ ಎಂದು ನನಗೆ ಯಾವತ್ತೂ ಅನಿಸಿರಲಿಲ್ಲ. ಆದ್ದರಿಂದಲೇ ಯಾವಾಗಲೂ ಪ್ರಯತ್ನ ಮಾಡಲಿಲ್ಲ. ಯಾವಾಗ ನನ್ನ ಹಸು ಮರಣಿಸುತ್ತದೆ,ಆಗ ಮೈಬಗ್ಗಿಸಿ ಕೆಲಸ ಮಾಡಬೇಕಾಯಿತು, ಅದರ ಫಲಿತಾಂಶವೇ ಇದು ಎಂದು ಹೇಳುತ್ತಾನೆ.

 

ನೀವು ಪ್ರಸ್ತುತ ಜೀವಿಸುತ್ತಿರುವ ಈ ಜೀವನವನ್ನು ಇನ್ನೂ ಉತ್ತಮವಾಗಿ ಅಭಿವೃದ್ಧಿ ಮಾಡಿಕೊಳ್ಳದೇ, ನಿಮ್ಮಲ್ಲಿ ಕೂಡ ಇಂತಹ ಉದಾಹರಣೆಯಾದ ಹಸು ನಿಮ್ಮನ್ನು ತಡೆಯುತ್ತಿಲ್ಲತ್ತಾನೆ. ಸ್ವಲ್ಪ ಆಲೋಚನೆ ಮಾಡಿ, ನಿಮಗೂ ಕೂಡ ಹಾಗೆ ಅನಿಸಿದರೆ ಜೀವನದಲ್ಲಿ ಮುಂದೆ ಸಾಗಿ. ದೈರ್ಯ ಮಾಡಿ ನಿಮ್ಮನ್ನು ಮುಂದೆ ಹೋಗಿಸದ, ಗಟ್ಟಿಯಾಗಿಸಿದ ಮನಸ್ಥಿತಿಯನ್ನು ಕೂಡಲೇ ತ್ಯಜಿಸಿ. ಸ್ವತಂತ್ರವಾಗಿ ಆಲೋಚನೆ ಮಾಡಿ, ನಿಮ್ಮ ಬಳಿ ಕಳೆದುಕೊಳ್ಳುವುದಕ್ಕೆ ಸ್ವಲ್ಪವೇ ಇದೆ. ಆದರೆ ಈ ಪ್ರಪಂಚದಲ್ಲಿ ನೀವು ಗೆಲ್ಲುವುದಕ್ಕೆ ತುಂಬಾನೇ ಇದೆ.ಈಗ ನಿಮ್ಮಲ್ಲಿ ತುಂಬಾ ಮಂದಿ ಹೀಗೆ ಆಲೋಚನೆ ಮಾಡುತ್ತಿರಬಹುದು. ಉಪನ್ಯಾಸ ನೀಡುವುದು ತುಂಬಾ ಸುಲಭ, ಆದರೆ ಅದನ್ನು ಮಾಡಲು ತುಂಬಾ ಕಷ್ಟ ಎಂದು. ನೀವು ಆಲೋಚನೆ ಮಾಡುವುದು ನಿಜ. ಆದರೆ ಇದು ಕೂಡ ಅಷ್ಟೇ ನಿಜ. ನೀವು ಮಾಡುವುದು ಕಷ್ಟವೇ ಆದರೂ ಅದು ಅಸಾಧ್ಯವಲ್ಲ. ಒಂದು ವೇಳೆ ದೀರುಬಾಯಿ ಅಂಬಾನಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಬಿಡದಿದ್ದರೆ ಈ ದಿನ ಅವನು ಅಂತಹ ಒಂದು ರಿಲಯನ್ಸ್ ಕಂಪನಿ ಇರುತ್ತಿರಲಿಲ್ಲ. ನಾರಾಯಣ ಮೂರ್ತಿಯವರು ಪಬ್ಲಿಕ್ ಕಂಪ್ಯೂಟರ್ನಲ್ಲಿ ಕೆಲಸವನ್ನು ಬಿಡದೆ ಹೋಗಿದ್ದರೆ, ಈ ದಿನ ಇನ್ಫೋಸಿಸ್ ಕಂಪನಿ ಇರುತ್ತಿರಲಿಲ್ಲ. ಅಮಿತಾ ಬಚ್ಚನ್ ಕೂಡ ಒಂದು ಸಾಮಾನ್ಯ ಸಣ್ಣ ಉದ್ಯೋಗ ಮಾಡುತ್ತಿದ್ದರೂ ಅವರು ಮನಸ್ಸು ಹೇಳಿದ ಮಾತನ್ನು ಕೇಳಿದ್ದರೆ ಈ ದಿನ ದೊಡ್ಡ ನಟನಾಗುತ್ತಿರಲಿಲ್ಲ.

ನಿಮ್ಮ ಜೀವನದಲ್ಲಿ ಇದೇ ದೊಡ್ಡ ಹಂತ. ಆದರೆ ಈ ಹಂತವನ್ನು ತಲುಪುವ ತುಂಬಾ ಕಷ್ಟ. ಯಾವ ವ್ಯಕ್ತಿ ಮನಸ್ಸಿನಲ್ಲಿ ಜೀವನದ ಬಗ್ಗೆ ದೊಡ್ಡ ಕನಸು ಕಾಣುತ್ತಾನೋ ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಕೋರಿಕೆ ಇರುತ್ತದೋ, ಅವರು ಮಾತ್ರವೇ ಈ ಹಂತವನ್ನು ತೆಗೆದುಕೊಳ್ಳಬಹುದು. ಅವರು ಅಕ್ಕಪಕ್ಕದವರು ಹೇಳುವಂತಹ ಮಾತನ್ನು ಲೆಕ್ಕಿಸುವುದಿಲ್ಲ. ಕೇವಲ ಅವರು ಮಾಡಬೇಕೆಂದು ಅಂದುಕೊಳ್ಳುವುದರ ಬಗ್ಗೆ ಗಮನ ವಹಿಸುತ್ತಾರೆ. ನೀವು ಈಗಲೂ ಒಂದು ಹೆಜ್ಜೆ ಮುಂದೆ ಹೋಗದೆ ಇದ್ದರೆ, ನಿಮ್ಮ ಸಹಜತ್ವದಿಂದ ಹೊರಗೆ ಬರದೆ ಇದ್ದರೆ ನಿಮ್ಮ ಜೀವನ ಪೂರ್ತಿ ಒಂದು ಸಾಧಾರಣವಾದ ಜೀವನವನ್ನು ಕಳೆಯಲು ಸಿದ್ದರಾಗಿ. ಇಲ್ಲವೆಂದರೆ ನಿಮ್ಮ ಮನಸ್ಸು ಹೇಳುವುದನ್ನು ಕೇಳಿ, ನಿಮ್ಮ ಕನಸುಗಳನ್ನು ನನಸುಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಿ. ನಿಮ್ಮ ಗುರಿಯನ್ನು ಸಾಧಿಸುವುದಕ್ಕೆ ಹಗಲು-ರಾತ್ರಿಯನ್ನು ಒಟ್ಟುಗೂಡಿಸಿ. ಈ ಪ್ರಪಂಚದಲ್ಲಿ ಯಾವುದೇ ಶಕ್ತಿಯು ಕೂಡ ನೀವು ಯಶಸ್ವಿಯಾಗುವುದು ತಡೆಯಲು ಸಾಧ್ಯವಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top