ಮನೋರಂಜನೆ

‘ದಿ ವಿಲನ್’ ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ವಿಶೇಷವಾಗಿ ಥ್ಯಾಂಕ್ಸ್ ಹೇಳಿದ ಕಿಚ್ಚ ಸುದೀಪ.

ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಕೇವಲ ನಾಲ್ಕೇ ದಿನದಲ್ಲಿ ಬರೋಬ್ಬರಿ 58ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಸ್ಯಾಂಡಲ್​ವುಡ್​ನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ‘ದಿ ವಿಲನ್’ ಸಿನಿಮಾ ಧೂಳೀಪಟ ಮಾಡಿದ್ದು ಇಬ್ಬರು ಘಟಾನುಘಟಿ ಸ್ಟಾರ್​​ ನಟರು ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯಿಸಿದ್ದಾರೆ. ಹಾಗೆ ನೋಡಿದರೆ ಇತ್ತೀಚೆಗೆ ವಿಲನ್ ಸಿನಿಮಾ ಬಗ್ಗೆ ಆದ ಅಪಪ್ರಚಾರ ಯಾವ ಸಿನಿಮಾಗೂ ಆಗಿರಲಿಲ್ಲ! ವಿಪರ್ಯಾಸ ಎಂದರೆ ವಿಲನ್ ಗೆ ಆಗಿರುವಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಯಾವ ಸಿನಿಮಾಗೂ ಆಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲಸಿಲ್ಲದ ಕೆಲವು ಕಿಡಿಗೇಡಿಗಳು ಸಿನಿಮಾ ಬಗ್ಗೆ ಕೆಟ್ಟದಾಗಿ ಬಿಂಬಿಸಿ ವಿಕೃತಿ ಮೆರೆದಿದ್ದರು. ಅಂತವರೆಲ್ಲಾ ದಿ ವಿಲನ್ ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡು ಮನಸಿನಲ್ಲೇ ಮರುಗುತ್ತಿದ್ದಾರೆ..

‘ದಿ ವಿಲನ್’ ಚಿತ್ರದ ಯಶಸ್ಸಿನ ಖುಷಿಯನ್ನು ಕಿಚ್ಚ ಸುದೀಪ ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ.ಕಿಚ್ಚ ಸುದೀಪ್ ದಿ-ವಿಲನ್ ಸಿನಿಮಾ ನೋಡಿದ ಅಭಿಮಾನಿಗಳಿಗೆ ತಮ್ಮ ಗೂಗಲ್ ಪ್ಲಸ್ ಪತ್ರವನ್ನು ಬರೆದು ಟ್ವಿಟ್ಟರಿನಲ್ಲಿ ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಕಿಚ್ಚ ಸುದೀಪ್ ಅವ್ರು ಬರೆದಿರುವ ಕೃತಜ್ಞತಾ ಪತ್ರ ಈ ರೀತಿ ಇದೆ.

ನನ್ನ ಎಲ್ಲ ಅಭಿಮಾನಿ ಸ್ನೇಹಿತರೆ, ಅಭಿಮಾನಿ ಸಂಘಗಳ ಸದಸ್ಯರು ಹಾಗೂ ಮುಖ್ಯಸ್ಥರೇ, ನಿಮ್ಮೆಲ್ಲರಿಗೂ ನನ್ನ ಪ್ರೀತಿಯ ಅಪ್ಪುಗೆ.

ಇದು ನೀವೆಲ್ಲರೂ “ದಿ ವಿಲನ್” ಚಿತ್ರವನ್ನು ಉದಾರವಾಗಿ ಬರಮಾಡಿಕೊಂಡಿದಕ್ಕೆ, ಶಿವಣ್ಣ ಹಾಗೂ ಪ್ರೇಮ್ ರವರ ಮೇಲೆ ತೋರಿಸಿದ ಪ್ರೀತಿಗಾಗಿ, ಚಿತ್ರದ ಎರಡೂ ನಾಯಕ ನಟರ ಮೇಲೆ ಸಮನಾದ ಆದರ ವ್ಯಕ್ತಪಡಿಸಿದ್ದಕ್ಕೆ ಮತ್ತು ಚಿತ್ರಮಂದಿರಗಳಲ್ಲಿ ಶಾಂತಿಯನ್ನು ಕಾಪಾಡಿಕೊಂಡಿದ್ದಕ್ಕೆ.

ನಾನು ನಿಮ್ಮೆಲ್ಲರ ಮನಸಿನಲ್ಲಿ ನೆಲಸಿದ್ದೇನೆ. ಆದ್ದರಿಂದಲೇ ನೀವು ಈ ಚಿತ್ರಕ್ಕೆ ಸ್ಪಂದಿಸಿದ ರೀತಿಯಲ್ಲಿ ನನ್ನದೇ ಪ್ರತಿಬಿಂಬ ಕಾಣುತಿದ್ದೇನೆ. ನನ್ನನು ಹೆಮ್ಮೆಪಡುವಂತೆ ಮಾಡಿದ ನನ್ನ ಕುಟುಂಬದ ಸದಸ್ಯರೇ ಆದ ನಿಮ್ಮ ಪ್ರತಿಯೊಬ್ಬರಿಗೂ ನಾನು ಎಂದೆಂದಿಗೂ ಚಿರಋಣಿ.

ನಿಮ್ಮ ಕಿಚ್ಚ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top