ಮನೋರಂಜನೆ

ಅಪಪ್ರಚಾರ ಮಾಡಿದರೂ ಇತಿಹಾಸ ನಿರ್ಮಿಸಿದ ‘ದಿ ವಿಲನ್’- ನಾಲ್ಕೇ ದಿನಕ್ಕೆ 58 ಕೋಟಿ ಗ್ರಾಸ್.

ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಇದೇ ವಾರ ದೇಶಾದ್ಯಂತ ತೆರೆಕಂಡಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸ್ಯಾಂಡಲ್​ವುಡ್​ನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ‘ದಿ ವಿಲನ್’ ಸಿನಿಮಾ ಧೂಳೀಪಟ ಮಾಡಿದೆ. ಸ್ಯಾಂಡಲ್​ವುಡ್​​ನ ಇಬ್ಬರು ಘಟಾನುಘಟಿ ಸ್ಟಾರ್​​ ನಟರು ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯಿಸಿದ್ದಾರೆ. ಕನ್ನಡ ಸಿನಿಮಾವೊಂದು ಈ ಪಾಟಿ ಕಲೆಕ್ಷನ್ ಮಾಡಿರುವುದು ನಿಜಕ್ಕೂ ಸಂತೋಷ.

ಹಾಗೆ ನೋಡಿದರೆ ಇತ್ತೀಚೆಗೆ ವಿಲನ್ ಸಿನಿಮಾ ಬಗ್ಗೆ ಆದ ಅಪಪ್ರಚಾರ ಯಾವ ಸಿನಿಮಾಗೂ ಆಗಿರಲಿಲ್ಲ! ವಿಪರ್ಯಾಸ ಎಂದರೆ ವಿಲನ್ ಗೆ ಆಗಿರುವಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಯಾವ ಸಿನಿಮಾಗೂ ಆಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲಸಿಲ್ಲದ ಕೆಲವು ಕಿಡಿಗೇಡಿಗಳು ಸಿನಿಮಾ ಬಗ್ಗೆ ಕೆಟ್ಟದಾಗಿ ಬಿಂಬಿಸಿ ವಿಕೃತಿ ಮೆರೆದಿದ್ದರು. ಅಂತವರೆಲ್ಲಾ ದಿ ವಿಲನ್ ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡು ಇದೀಗ ಬುಡಕ್ಕೆ ಬೆಂಕಿ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ.

ಮೊದಲ ದಿನ 20.5ಕೋಟಿ ಗಳಿಕೆ:
‘ದಿ ವಿಲನ್​’ ಚಿತ್ರ ಪ್ರೇಕ್ಷಕರ ಮನವನ್ನು ಗೆದ್ದಿದೆ. ಅದಕ್ಕೆ ಸಾಕ್ಷಿಯೆಂಬಂತೆ ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 20.5 ಕೋಟಿ ರೂ ಬಾಚಿಕೊಂಡಿದೆ.. ಹಾಗಂತ ಇದು ಯಾರೋ ಕೆಲಸಿಲ್ಲದವರು ಸೋಷಿಯಲ್ ಮೀಡಿಯಾದಲ್ಲಿ ಹರಡಿಸಿರುವ ಸುಳ್ಳು ಸುದ್ದಿ ಎಂದು ಭಾವಿಸಬೇಡಿ ಏಕೆಂದರೆ ಚಿತ್ರದ ಮೊದಲ ದಿನ 20.5 ಕೋಟಿ ರೂ ಗಳಿಸಿದೆ ಎಂದು ಸ್ವತಃ ನಿರ್ದೇಶಕ ಪ್ರೇಮ್ ಅವರೇ ಹೇಳಿದ್ದಾರೆ.

ನಾಲ್ಕೇ ದಿನಕ್ಕೆ 58 ಕೋಟಿ ರೂ ಗಳಿಕೆ..
ಮೊದಲ ದಿನವೇ ಬರೋಬ್ಬರಿ ಇಪ್ಪತ್ತು ಕೋಟಿ ಬಾಚಿಕೊಂಡಿದ್ದ ವಿಲನ್ ಎರಡು ಮತ್ತು ಮೂರನೇ ದಿನದಲ್ಲೂ ಮ್ಯಾಜಿಕ್ ಮಾಡಿದೆ. ನಾಲ್ಕೇ ದಿನಕ್ಕೆ ಬರೋಬರಿ 58(gross) ಕೋಟಿ ರೂಗಳನ್ನ ಲೂಟಿ ಮಾಡಿದೆ. ನಾಲ್ಕೇ ದಿನಗಳಲ್ಲಿ ಹಾಕಿದ್ದ ಮೊತ್ತ ವಿತರಕರಿಗೆ ವಾಪಾಸ್ ಬಂದಿದ್ದು ತೆರೆಗೆ, ಬಾಡಿಗೆ ಮತ್ತು ಕಮಿಷನ್ ಹಣವನ್ನೆಲ್ಲಾ ಕಳೆದ ನಿರ್ಮಾಪಕನ ಕೈಗೆ 30 ಕೋಟಿ ರೂ ಸೇರಿಕೊಂಡಿದೆ..

ಬಾಕ್ಸ್ ಆಫೀಸ್ ನಲ್ಲಿ ಈ ಪರಿ ಹಣ ಗಳಿಕಗೆ ಮುಖ್ಯ ಕಾರಣ, ಒಂದು ಎಲ್ಲ ಥಿಯೇಟರ್ ಗಳಲ್ಲು ಹೌಸ್ ಫುಲ್ ಆಗಿರೋದು.. ಮತ್ತೊಂದು ಟಿಕೆಟ್ ರೇಟ್ ಜಾಸ್ತಿ ಮಾಡಿರೋದು.. ಜೊತೆಗೆ ವಿಲನ್ ಸಿನಿಮಾ ಮೊದಲ ದಿನದ ಅತಿ ಹೆಚ್ಚು ಶೋ ಕಂಡಿದೆ.. ಎಂದು ವಿತರಕರು ಹೇಳಿದ್ದಾರೆ

ಇದೇ ರೀತಿಯಲ್ಲಿ ಇನ್ನೇರಡು ಮೂರು ದಿನ ಕಲೆಕ್ಷನ್ ಮುಂದುವರೆದರೆ 100 ಕೋಟಿ ಕ್ಲಬ್ ಪ್ರವೇಶಿಸುವ ಸಾಧ್ಯತೆ ಇದೆ ಎಂದು ವಿತರಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರೇಮ್ ನಿರ್ದೇಶನದ ‘ ದಿ ವಿಲನ್ ಹೊರ ರಾಜ್ಯಗಳಲ್ಲಿಯೂ ಬಿಡುಗಡೆಯಾಗಿದ್ದು, ಹೈದರಾಬಾದ್ ಮತ್ತಿತರ ಕಡೆಗಳಲ್ಲಿ ಪ್ರದರ್ಶನ ಹೆಚ್ಚಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಸಿಡ್ನಿ, ಮತ್ತಿತರ ಕಡೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top