ಮನೋರಂಜನೆ

ಮಾಜಿ ಬಿಗ್ ಬಾಸ್ ಸ್ಪರ್ದಿ ಸುನಾಮಿ ಕಿಟ್ಟಿ ಬಂಧನ, ಬಿಡುಗಡೆ.

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ ಎಂಬುದು ಜನಪ್ರಿಯ ಗಾದೆ. ಆದರೆ ಅದ್ಯಾವುದೋ ರಿಯಾಲಿಟಿ ಶೋ ಗೆದ್ದು ಬಂದ ಸುನಾಮಿ ಕಿಟ್ಟಿ ಎಂಬಾತ ನಡು ಮಧ್ಯಾನ್ಹವೇ ಕೊಡೆಹಿಡಿದು ಹೊರಟು ವರ್ಷ ಕಳೆಯುತ್ತಾ ಬಂದಿದೆ. ಇಂಥಾ ಕಿಟ್ಟಿಯನ್ನು ಕೆಲವು ತಿಂಗಳ ಹಿಂದೆಯಷ್ಟೇ ಕಿಡ್ನ್ಯಾಪ್ ಕೇಸೊಂದರಲ್ಲಿ ಚೇಲಾಗಳ ಸಮೇತ ಪೊಲೀಸರು ಜೈಲಿಗಟ್ಟಿದ್ದರು. ನಂತರ ಈ ಕೇಸಿಗೆ ಸಂಬಂಧಿದಂತೆ ಜಾಮೀನು ಪಡೆದು ಆಚೆ ಓಡಾಡಿಕೊಂಡು ಇರುವ ಕಿಟ್ಟಿ ಇದೀಗ ಮತ್ತೊಮ್ಮೆ ದಾಂದಲೆ ಎಬ್ಬಿಸಿದ್ದಾನೆ.

ಬಿಗ್​ಬಾಸ್ ಶೋನ ಮಾಜಿ​ ಸ್ಪರ್ಧಿ ಹಾಗೂ ‘ಇಂಡಿಯನ್​’ ಮತ್ತು ‘ತಕಧಿಮಿತ ಡ್ಯಾನ್ಸಿಂಗ್​ ಸ್ಟಾರ್​’ ಎಂಬ ರಿಯಾಲಿಟಿ ಶೋಗಳ ವಿನ್ನರ್ ಆಗಿರುವ ಸುನಾಮಿ ಕಿಟ್ಟಿ ಕುಡಿದ ಅಮಲಿನಲ್ಲಿ ರೆಸ್ಟೋರೆಂಟ್​ನಲ್ಲಿ ಆಟಾಟೋಪ ಮೆರೆದ ಘಟನೆ ಭಾನುವಾರ ರಾತ್ರಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಕಿಟ್ಟಿ ರೆಸ್ಟೋರೆಂಟ್ ಸಿಬ್ಬಂದಿಗೆ ಹೊಡೆದಿದ್ದಾನೆ ಎಂದು ದೂರಲಾಗಿದೆ.

ಬೆಂಗಳೂರಿನ ಒರಾಯನ್ ಮಾಲ್​ನಲ್ಲಿರುವ ರೆಸ್ಟೋರೆಂಟ್​​ಗೆ ಭಾನುವಾರ ರಾತ್ರಿ ತನ್ನ ಚೇಲಗಳ ಸಮೇತ ಎಣ್ಣೆ ಕುಡಿಯಲು ಕಿಟ್ಟಿ ಬಂದಿದ್ದನು.. ಕುಡಿದ ಎಣ್ಣೆ ತಲೆಗೆ ಏರುಗಟ್ಟಲೆ ಕೊಬ್ಬಿಕೊಂಡ ಕಿಟ್ಟಿ ಚೇಷ್ಟೆ ಮಾಡಲು ಶುರುವಿಟ್ಟಿದ್ದನು. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ ಬಳಿ ಒಂದು​ ಸಿಗರೇಟ್ ಕೊಡುವಂತೆ ಕೇಳಿದ್ದಾನೆ ಆದರೆ ಅದು ದೊಡ್ಡ ರೆಸ್ಟೋರೆಂಟ್ ಆಗಿದ್ದ ಕಾರಣ ಒಂದು ಸಿಗರೇಟ್ ಸಿಗುವುದಿಲ್ಲ. ಬೇಕಾದರೆ ಫುಲ್ ಪ್ಯಾಕ್ ತೆಗೆದುಕೊಳ್ಳಿ ಎಂದು ಸಿಬ್ಬಂದಿ ಹೇಳಿದ್ದಾರೆ. ಇಷ್ಟಕ್ಕೆ ಪಿತ್ತ ನೆತ್ತಿಗೇರಿಸಿಕೊಂಡ ಕಿಟ್ಟಿ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ರೋಪು ಹಾಕಿ ಗಲಾಟೆ ಮಾಡಿದ್ದಾನೆ.,

ಈ ಸಂಭಂದ ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ಧಾಖಲಿಸಿಕೊಂಡಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸುನಾಮಿ ಕಿಟ್ಟಿಯನ್ನು ವಶಕ್ಕೆ ಪಡೆದಿದ್ದರು. ತದನಂತರ ಬಿಡುಗಡೆ ಮಾಡಿದ್ದಾರೆ. ಮತ್ತೊಮ್ಮೆ ಇಂತಹ ಪುಂಡಾಟ ಮಾಡದಂತೆ ವಾರ್ನಿಂಗ್ ನೀಡಿ, ಮುಚ್ಚಳಿಕೆ ಬರೆಸಿಕೊಂಡಿರುವ ಪೊಲೀಸರು ಕಿಟ್ಟಿಯನ್ನು ಬಿಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top