fbpx
ಮನೋರಂಜನೆ

ದುನಿಯಾ ವಿಜಯ್ ವಿರುದ್ಧ ರೊಚ್ಚಿಗೆದ್ದು ಎಫ್‍ಐಆರ್ ದಾಖಲಿಸಿದ ವಿಜಿ ಮಗಳು ,ಅದಕ್ಕೆ ಕಾರಣ ಏನ್ ಗೊತ್ತಾ

ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವವರ ಮೇಲೆ ಹಲ್ಲೆ ಮತ್ತೆ ಕಿಡ್ನಾಪ್ ಪ್ರಕರಣಕ್ಕೆ ಸಂಭಂದಿಸಿದಂತೆ ಬಂಧಿತರಾಗಿದ್ದ ನಟ ದುನಿಯಾ ವಿಜಯ್ ಅವರಿಗೆ ಕೊನೆಗೂ ಜಾಮೀನು ಮಂಜೂರಾಗಿಜೈಲಿನಿಂದ ಹೊರಬಂದು .ಸುದ್ದಿಗೋಷ್ಠಿ ನಡೆಸಿ ಮೊದಲ ಪತ್ನಿ ನಾಗರತ್ನ ರವರ ಆರೋಪ ಮಾಡಿ ಅದು ಅನೇಕ ತಿರುವುಗಳನ್ನು ಪಡೆದುಕೊಂಡಿತ್ತು .

ತಂದೆ ದುನಿಯಾ ವಿಜಿಯನ್ನು ತೊರೆದು ಅಮ್ಮನ ಮಡಿಲು ಸೇರಿದ ಮೋನಿಕಾ:
ಆ ಬೆನ್ನಲೇ ದುನಿಯಾ ವಿಜಿಯ ಮೊದಲ ಪತ್ನಿಯ ಪುತ್ರಿ ತಂದೆಯ ಮನೆಯಿಂದ ಅಮ್ಮ ನಾಗರತ್ನ ಮನೆಗೆ ತೆರಳಿದರು ..ಕಳೆದ 2 ವರ್ಷಗಳಿಂದ ಕೀರ್ತಿ ಹಾಗೂ ದುನಿಯಾ ವಿಜಯ್ ಅವರೊಂದಿಗೆ ವಾಸವಿದ್ದ ಮಗಳು ಸದ್ಯ ಅಮ್ಮನ ಮನೆಗೆ ತೆರಳಿದರು. ವಿಜಯ್, 2ನೇ ಪತ್ನಿ ಹಾಗೂ ನನ್ನ ಮಕ್ಕಳಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೇ ನನ್ನ ಮಗಳಿಗೆ 18 ವರ್ಷ ಪೂರ್ತಿಯಾಗಿದೆ, ಮತ್ತೊಬ್ಬ ಮಗಳಿಗೆ 18 ಪೂರ್ತಿಯಾಗಬೇಕಿದೆ. ಅವರ ಇಚ್ಛೆಯಂತೆ ಸ್ವತಂತ್ರ್ಯವಾಗಿ ಜೀವಿಸಲು ಅವರು ಅರ್ಹರು ಎಂದು ಹೇಳಿಕೆ ಕೊಟ್ಟಿದ್ದರು .ನನ್ನ ಮೊದಲ ಪತ್ನಿಗೆ ಪತಿಯಾಗಿ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನ ನೀಡಿದ್ದೇನೆ. ಇಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ನನ್ನ ತಂದೆ ತಾಯಿಗೆ ಅನ್ಯಾಯ ಮಾಡಿದ್ದರಿಂದ ನಾನು ಆಕೆಯ ಮೇಲೆ ಆರೋಪ ಮಾಡಿದ್ದೆ. ಆದರೆ ಆ ವೇಳೆಯೂ ನನ್ನ ವಿರುದ್ಧ ಕೆಟ್ಟ ಪ್ರಚಾರ ಮಾಡಲಾಗಿತ್ತು. ನಾಗರತ್ನ ಹಾಗೂ ನನ್ನ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದ್ದೇನೆ. ನನ್ನ ಮೊದಲ ಪತ್ನಿಗೆ ಮನೆ ಕೂಡ ನೀಡಿದ್ದು, ನಾನು ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಈ ಕುರಿತು ವಕೀಲರ ಮೂಲಕವೇ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದರು ವಿಜಿ .

 

 

 

ತಿರುಗಿ ಬಿದ್ದ ಹೆಣ್ಣುಮಕ್ಕಳು:
ಹಿಂದೆ ಜೈಲಿನಿಂದ ಬೇಲ್ ಪಡೆದು ಬಿಡುಗಡೆಯಾಗಿ ನಗರದ ಕತ್ರಿಗುಪ್ಪೆ ನಿವಾಸಕ್ಕೆ ಆಗಮಿಸಿದ ತಂದೆ ದುನಿಯಾ ವಿಜಯ್ ವಿರುದ್ಧ ಪುತ್ರಿ ಮೋನಿಕಾ ಅಸಮಾಧಾನ ಹೊರ ಹಾಕಿದ್ದು, ತಂದೆಯೊಂದಿಗೆ ಜಗಳ ಮಾಡಿದರು ಬಳಿಕ ವಿಜಯ್ ಅವರ ಬಳಿ ಅಮ್ಮನ ಮನೆಗೆ ತೆರಳುವುದಾಗಿ ಪುತ್ರಿ ಹಠ ಹಿಡಿದಿದ್ದರು. ಸ್ವಲ್ಪ ಸಮಯದ ಬಳಿಕ ವಿಜಯ್ ಅವರು ಮಗಳಿಗೆ ಬ್ಯಾಗ್ ನೀಡಿ ಮನೆ ಹಿಂಬಾಗಿಲಿನಿಂದ ಪುತ್ರಿಯನ್ನು ಕಳುಹಿಸಿಕೊಟ್ಟಿದ್ದರು ಆ ನಂತರ ವಿಜಯ್ ಮನೆಯಲ್ಲಿ ಫುಲ್ ಫ್ಯಾಮಿಲಿ ಹೈ ಡ್ರಾಮಾನೇ ನಡೆದಿತ್ತು .

ಎಫ್‍ಐಆರ್ ದಾಖಲಿಸಿದ ವಿಜಿ ಮೊದಲ ಪುತ್ರಿ:
ಇಷ್ಟು ದಿನ ತಣ್ಣಗಿದ್ದ ವಿಜಿ ಪ್ರಕರಣ ಈಗ ಹೊಸ ರೂಪ ಪಡೆದುಕೊಂಡಿದೆ ,ದುನಿಯಾ ವಿಜಿ ವಿರುದ್ಧ ಅವರ ಮಗಳೇ ಈಗ ದೂರು ನೀಡಿದ್ದು ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.ನೆನ್ನೆ ವಿಜಿ ಮೊದಲ ಪುತ್ರಿ ಮೋನಿಕಾ ಸುಮಾರು 10- 11 ಗಂಟೆಗೆ ತನ್ನ ತಂದೆ ವಿಜಿ ಮನೆಗೆ ಕೆಲವು ವೈಯಕ್ತಿಕ ವಸ್ತುಗಳನ್ನು ಹಾಗೂ ಕಾರಿನ ದಾಖಲಾತಿಗಳನ್ನು ತೆಗೆದುಕೊಳ್ಳಲು ಹೋಗಿದ್ದರಂತೆ ,ಆಗ ತಾನು ಮನೆಯ ಒಳಗೆ ಹೋಗುವಾಗ ತನ್ನ ತಂದೆ ವಿಜಿ, ಕೀರ್ತಿಗೌಡ, ಹೇಮಂತ್, ವಿನೋದ್ ಹಾಗೂ ಕಾರ್ ಡ್ರೈವರ್ ಮಹಮ್ಮದ್ ಸೇರಿ ತನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ,ಅಷ್ಟೇ ಅಲ್ಲದೆ ಬೈದು ಕಾಲಿನಿಂದ ಹಾಗೂ ಕೆಲವು ಮಾರಕಸ್ತ್ರಾಗಳಿಂದ ಹೊಡೆದು ಗೋಡೆಗೆ ನನ್ನ ತಲೆಯನ್ನು ಹಿಡಿದು ಹೊಡೆದಿದ್ದಾರೆ.ಈ ಕಾರಣದಿಂದ ಮೊನಿಕಾಗೆ ಹಣೆ ಹಾಗೂ ಬಲಗೈಗೆ ಗಾಯವಾಗಿದ್ದು, ಮೀನಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನಗೇ ತನ್ನ ಕಾರಿನ ಕೀ ಹಾಗೂ ದಾಖಲಾತಿಗಳನ್ನು ಕೊಡಿಸಿ ಹಾಗೂ ತನ್ನ ಮೇಲೆ ಹಲ್ಲೆ ಮಾಡಿರುವವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆರೋಪಿಗಳ ವಿರುದ್ಧ ವಿರುದ್ಧ ಐಪಿಸಿ ಸೆಕ್ಷನ್ 341, 34, 324, 323, 504 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮೋನಿಕಾ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top