ಮನೋರಂಜನೆ

ರವಿ ಚನ್ನಣ್ಣನವರ್ ಅವರನ್ನು ಪ್ರೇಮ್ ಭೇಟಿಯಾಗಿದ್ದು ಯಾಕೆ? ಕೆಟ್ಟ ಕಾಮೆಂಟ್ ಮಾಡಿದವರಿಗೆ ಆಪತ್ತು.

ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಇದೇ ವಾರ ದೇಶಾದ್ಯಂತ ತೆರೆಕಂಡಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕೇವಲ ನಾಲ್ಕೇ ದಿನದಲ್ಲಿ ಬರೋಬ್ಬರಿ 58ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಸ್ಯಾಂಡಲ್​ವುಡ್​ನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ‘ದಿ ವಿಲನ್’ ಸಿನಿಮಾ ಧೂಳೀಪಟ ಮಾಡಿದ್ದು ಇಬ್ಬರು ಘಟಾನುಘಟಿ ಸ್ಟಾರ್​​ ನಟರು ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯಿಸಿದ್ದಾರೆ. ಕನ್ನಡ ಸಿನಿಮಾವೊಂದು ಈ ಪಾಟಿ ಕಲೆಕ್ಷನ್ ಮಾಡಿರುವುದು ನಿಜಕ್ಕೂ ಸಂತೋಷ.

ಹಾಗೆ ನೋಡಿದರೆ ಇತ್ತೀಚೆಗೆ ವಿಲನ್ ಸಿನಿಮಾ ಬಗ್ಗೆ ಆದ ಅಪಪ್ರಚಾರ ಯಾವ ಸಿನಿಮಾಗೂ ಆಗಿರಲಿಲ್ಲ! ವಿಪರ್ಯಾಸ ಎಂದರೆ ವಿಲನ್ ಗೆ ಆಗಿರುವಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಯಾವ ಸಿನಿಮಾಗೂ ಆಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲಸಿಲ್ಲದ ಕೆಲವು ಕಿಡಿಗೇಡಿಗಳು ಸಿನಿಮಾ ಬಗ್ಗೆ ಕೆಟ್ಟದಾಗಿ ಬಿಂಬಿಸಿ ವಿಕೃತಿ ಮೆರೆದಿದ್ದರು. ಅಂತವರೆಲ್ಲಾ ದಿ ವಿಲನ್ ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡು ಇದೀಗ ಬುಡಕ್ಕೆ ಬೆಂಕಿ ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ..

 

 

ಒಂದು ಸಿನಿಮಾ ರಿಲೀಸ್ ಆದಾಗ ಒಳ್ಳೆಯ ಮತ್ತು ಕೆಟ್ಟ ಪ್ರತಿಕ್ರಿಯೆಗಳು ಬರುವುದು ಮಾಮೂಲು..ಎಂಥಾ ಒಳ್ಳೆಯ ಸಿನಿಮಾವಾಗಿದ್ದರೂ ಎಲ್ಲರಿಗೂ ಇಷ್ಟವಾಗಬೇಕು ಎಂತೇನಿಲ್ಲ, ಕೇವರಿಗೆ ಇಷ್ಟವಾಗುತ್ತೆ ಇನ್ನೂ ಕೆಲವರಿಗೆ ಇಷ್ಟವಾಗೋದಿಲ್ಲ ಅದನ್ನು ಒಪ್ಪಿಕೊಳ್ಳೋಣ. ಒಂದು ಸಿನಿಮಾ ಬಗ್ಗೆ ಟೀಕೆ-ಟಿಪ್ಪಣಿ ಮಾಡಲು ಎಲ್ಲರೂ ಸ್ವತಂತ್ರರು, ಆದರೇ ‘ದಿ ವಿಲನ್’ ವಿಚಾರದಲ್ಲಿ ಆಗಿದ್ದೆ ಬೇರೆ.. ಸಿನಿಮಾ ನೋಡಿಲ್ಲದ ಅಪಾಪೋಲಿಗಳೆಲ್ಲಾ ಸಿನಿಮಾ ಬಗ್ಗೆ ಕೆಟ್ಟದಾಗಿ ಪೋಸ್ಟ್ ಹಾಕಿ ವಿಕೃತಿ ಮೆರೆದಿದ್ದರು.

ಕೆಲವು ನೀಚ ಮನಸಿನ ಕಿಡಿಗೇಡಿಗಳು ‘ದಿ ವಿಲನ್’ ಟೀಕಿಸುವ ಭರದಲ್ಲಿ ಪ್ರೇಮ್ ಅವರನ್ನು ವೈಯಕ್ತಿಕವಾಗಿ ಏಕವಚನದಲ್ಲಿ ತೇಜೋವಧೆ ಮಾಡಿದ್ದರು. ಪ್ರೇಮ್ ಬಗ್ಗೆ, ಪ್ರೇಮ್ ಫ್ಯಾಮಿಲಿ ಬಗ್ಗೆ ತೀರಾ ಕೆಳ ಮಟ್ಟದಲ್ಲಿ ಮಾತನಾಡಿದ್ದಾರೆ, ತುಂಬಾ ವಿಕೃತವಾಗಿ ಕಾಮೆಂಟ್ ಮಾಡಿದ್ದಾರೆ. ಸಿನಿಮಾ ಬಿಟ್ಟು ವೈಯುಕ್ತಿಕವಾಗಿ ಮಾತಾಡೋದು ಎಷ್ಟು ಸರಿ? ಹಾಗಾಗಿ ಕೆಟ್ಟ ಕಾಮೆಂಟ್ ಮಾಡಿದ ಇಂಥಾ ಕೆಟ್ಟ ಹುಳುಗಳ ವಿರುದ್ಧ ರೊಚ್ಚಿಗೆದ್ದಿರುವ ಪ್ರೇಮ್ ಅವನ್ನು ಒಸಾಕಾಕುವ ಸಲುವಾಗಿ ಕಾನೂನು ಸಮರ ಸಾರಿದ್ದಾರೆ.

ಮಂಗಳವಾರ ಬೆಳಗ್ಗೆ ಉಪ್ಪಾರಪೇಟೆ ಪೊಲೀಸ್​ ಠಾಣೆಗೆ ಆಗಮಿಸಿದ ಪ್ರೇಮ್​, ‘ದಿ ವಿಲನ್’ ಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೆಲ ಪುಡಾರಿಗಳಿಂದ ನೋವು ಉಂಟಾಗಿದೆ. ಸಿನಿಮಾವನ್ನು ಸಿನಿಮಾ ತರ ನೋಡದೇ ವೈಯಕ್ತಿಕ ವಾಗಿ ತೆಗೆದುಕೊಂಡಿರುವುದೇ ಇದಕ್ಕೆ ಕಾರಣ. ಜಾಲತಾಣದಲ್ಲಿ ನೋವುಂಟು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪ್ರೇಮ್​ ದೂರು ನೀಡಿದರು. ದೂರಿನ ಜೊತೆಗೆ ಒಂದಷ್ಟು ವಿಡಿಯೋ ದಾಖಲೆಗಳನ್ನು ಪ್ರೇಮ್ ಸಲ್ಲಿಸಿದರು. ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್​ ಅವರನ್ನು ಭೇಟಿ ಮಾಡಿ, ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top