fbpx
ಭವಿಷ್ಯ

25 ಅಕ್ಟೋಬರ್: ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಗುರುವಾರ, ೨೫ ಅಕ್ಟೋಬರ್ ೨೦೧೮
ಸೂರ್ಯೋದಯ : ೦೬:೪೧
ಸೂರ್ಯಾಸ್ತ : ೧೮:೦೩
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಆಶ್ವಯುಜ

ಪಕ್ಷ : ಕೃಷ್ಣ ಪಕ್ಷ
ತಿಥಿ : ಪಾಡ್ಯ – ೨೧:೨೩ ವರೆಗೆ
ನಕ್ಷತ್ರ : ಅಶ್ವಿನಿ – ೦೯:೨೬ ವರೆಗೆ
ಯೋಗ : ವಜ್ರ – ೦೭:೫೭ ವರೆಗೆ
ಸೂರ್ಯ ರಾಶಿ : ತುಲಾ

ಅಭಿಜಿತ್ ಮುಹುರ್ತ:೧೧:೫೯ – ೧೨:೪೫
ಅಮೃತಕಾಲ : ೨೮:೨೦+ – ೨೯:೫೪+
ರಾಹು ಕಾಲ:೧೩:೪೭ – ೧೫:೧೨
ಗುಳಿಕ ಕಾಲ:೦೯:೩೧ – ೧೦:೫೭
ಯಮಗಂಡ:೦೬:೪೧ – ೦೮:೦೬

ಅತಿಯಾದ ಆತ್ಮವಿಶ್ವಾಸ ನಿಮ್ಮನ್ನು ಅವಮಾನಗೊಳಿಸುವ ಸಾಧ್ಯತೆ ಇರುತ್ತದೆ. ವ್ಯವಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ನಿರ್ಧಾರ ತಳೆಯಿರಿ. ಹಮ್ಮಿಕೊಂಡ ಉತ್ತಮ ಕಾರ್ಯಗಳು ಗುರು-ಹಿರಿಯರ ಆಶೀರ್ವಾದದಿಂದ ಶುಭವಾಗುವುದು.

ಅತಿಯಾದ ಸಂಕೋಚದ ಸ್ವಭಾವದಿಂದಾಗಿ ಕೆಲಸ ಕಾರ್ಯಗಳಲ್ಲಿ ಭಾರಿ ಹಿನ್ನಡೆ ಆಗುವುದು. ಪಾಲುದಾರರಿಂದಲೇ ಮೋಸ ಹೋಗುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಬಿಗಿಹಿಡಿತ ಇರಲಿ.

ಅಂದುಕೊಂಡಿದ್ದನ್ನು ಸಾಧಿಸಿ ತೋರುವಿರಿ. ನೂತನ ಕಾರ್ಯಭಾರಗಳು ನಿಮ್ಮನ್ನು ಅರಸಿ ಬರುವುದು. ಸಂಗಾತಿಯ ಎಚ್ಚರಿಕೆ ಮಾತುಗಳನ್ನು ಆಲಿಸಿದಲ್ಲಿ ಮಾಡುವ ಕೆಲಸದಲ್ಲಿ ದ್ವಿಗುಣಲಾಭ ಹೊಂದುವಿರಿ.

ಇಂದಿನ ನಿಮ್ಮ ತಾಳ್ಮೆ ನಿಮ್ಮನ್ನು ಕ್ಲಿಷ್ಟಕರ ಸನ್ನಿವೇಶದಿಂದ ಪಾರು ಮಾಡುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಆರ್ಥಿಕ ಸ್ಥಿತಿ ಸದೃಢವಾಗಿರುವುದು.

 

ಹಿಂದಿನ ದಿನದ ನಿರ್ಧಾರಗಳನ್ನು ಇಂದು ಪರಾಮರ್ಶೆಗೆ ಒಳಪಡಿಸುವಿರಿ. ಭೂತದ ಅಡಿಪಾಯದಲ್ಲಿ ಭವಿಷ್ಯ ನೋಡುವುದು ಸರಿಯಾದದ್ದೆ. ಆದರೆ ತಪ್ಪು ನಿರ್ಧಾರಗಳ ಬಗ್ಗೆ ಕೊರಗುತ್ತ ಕೂಡುವುದು ಉತ್ತಮವಲ್ಲ.

 

ಸಕಾರಾತ್ಮಕ ಚಿಂತನೆಯಲ್ಲೇ ನಿಮ್ಮ ಶಕ್ತಿ ಅಡಗಿದೆ. ಹಾಗಾಗಿ ನೀವು ಮಾಡುವ ಎಲ್ಲಾ ಕೆಲಸಗಳು ತ್ವರಿತವಾಗಿ ಮತ್ತು ಜನಮೆಚ್ಚುವಂತಹ ರೀತಿಯಲ್ಲಿರುತ್ತದೆ. ಶಿಸ್ತುಳ್ಳ ಮನುಜಂಗೆ ಶಿವನೂ ತಲೆಗಾಗುತ್ತಾನೆ ಎನ್ನುವರು ಹಿರಿಯರು.

 

ಎಷ್ಟೇ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿದರೂ ತಪ್ಪುಗಳು ನುಸುಳುವ ಸಾಧ್ಯತೆಯಿದೆ. ಮನೆಯ ಸಮಸ್ಯೆಯನ್ನು ಕಚೇರಿಗೂ, ಕಚೇರಿಯ ಸಮಸ್ಯೆಯನ್ನು ಮನೆಗೆ ಕೊಂಡೊಯ್ಯುವುದು ಸೂಕ್ತವಲ್ಲ. ಕುಲದೇವತಾ ಪ್ರಾರ್ಥನೆ ಮಾಡಿರಿ.

 

ವೈಯಕ್ತಿಕವಾಗಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವುದು. ಸಹನೆ ಇದ್ದರೆ ಅವನ್ನು ಪರಿಹರಿಸಿಕೊಳ್ಳುವುದು ಕಷ್ಟವೇನಲ್ಲ. ನಿಮ್ಮ ಔದಾರ್ಯವನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಯತ್ನಿಸುವ ಸಾಧ್ಯತೆ. ಈ ಬಗ್ಗೆ ಎಚ್ಚರ ಅಗತ್ಯ.

 

ಒತ್ತಡದಿಂದಾಗಿ ಕೆಲಸದ ಬಗ್ಗೆ ಗಮನ ಕೊಡಲು ಸಾಧ್ಯವಾಗದೆ ಇರಬಹುದು. ಆದರೆ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ನಿಮಗೆ ಇಂದು ಗೋಚರಕ್ಕೆ ಬರುವುದು. ಇದರಿಂದ ಮನಸ್ಸಿಗೆ ಸಮಾಧಾನ ಆಗುವುದು.

ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸುಸಮಯ. ನಿಮ್ಮ ಪ್ರಯತ್ನಗಳಿಗೆ ತಕ್ಕ ಪ್ರತಿಫಲ ದೊರೆಯುವುದು. ಸಹೋದರ -ಸಹೋದರಿಯರಿಗೆ ನೆರವು ನೀಡಬೇಕಾಗುವುದು. ಆರ್ಥಿಕ ಸಮಸ್ಯೆ ಇರುವುದಿಲ್ಲ.

 

ನಿಮ್ಮ ಪ್ರಾಮಾಣಿಕ ಕಾರ್ಯನಿರ್ವಹಣೆಗೆ ಅನಿರೀಕ್ಷಿತ ಮತ್ತು ಅಚ್ಚರಿಯ ಪ್ರತಿಫಲ ಕಾದಿದೆ. ಆದರೆ ಆರ್ಥಿಕ ವಿಷಯದಲ್ಲಿ ದುಡುಕಬೇಡಿ. ಹಿರಿಯರ ಸಲಹೆ ಇಲ್ಲದೆ ಹೂಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳಬೇಡಿ.

ಆಶಾವಾದವು ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತದೆ. ಮಿತ್ರರು ಬೆಂಬಲ ನೀಡುವರು. ಈದಿನ ಶುಭವಾರ್ತೆಯನ್ನು ಕೇಳುವಿರಿ. ಬಂಧುಭಗಿನಿಯರ ಸೌಖ್ಯ, ಭಾಗ್ಯ ವೃದ್ಧಿ. ಆಂಜನೇಯ ಸ್ತೋತ್ರ ಪಠಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top