ದೇವರು

ಈ ಮಹಿಮಯುತ ದೇವಸ್ಥಾನಕ್ಕೂ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರಿಗೂ ಇರುವ ಸಂಬಂಧವೇನು,ಈ ದೇವಸ್ಥಾನದ ರಹಸ್ಯಕಾರಿ ಇತಿಹಾಸ ಏನು ,ನೀವೇ ನೋಡಿ

ಚಾಮರಾಜೇಶ್ವರ ದೇವಾಲಯ ಕಟ್ಟಿಸಿದವರು ಯಾರು ?ಇದರ ಇತಿಹಾಸ ಏನು ?ಈ ದೇವಾಲಯಕ್ಕೂ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೂ ಇರುವ ಸಂಭಂಧವೇನು.ನಿಮಗೆ ಗೊತ್ತಾ ?
ಚಾಮರಾಜನಗರದಲ್ಲಿರುವ ಇತಿಹಾಸ ಪ್ರಸಿದ್ಧ ದೇವಾಲಯಕ್ಕೂ ಮೈಸೂರು ರಾಜರಿಗೂ ಇದೆ ಅವಿನಾಭಾವ ಸಂಬಂಧವಿದೆ.ಮೈಸೂರಿನ ರಾಜರುಗಳ ಕಾಲದಲ್ಲಿ ಕಟ್ಟಲಾದ ಈ ದೇವಾಲಯ ಇಂದೂ ಧರ್ಮೀಯರ ಪವಿತ್ರ ಭಕ್ತಿ ಕೇಂದ್ರಗಳಲ್ಲಿ ಒಂದು. ನೊಂದವರ ಬಾಳಿನ ನಂದಾ ದೀಪವಾಗಿರುವ ಚಾಮರಾಜೇಶ್ವರ ದೇವಾಲಯದ ವಿಶೇಷತೆ ಏನು ಬನ್ನಿ ತಿಳಿದುಕೊಳ್ಳೋಣ.

ಚಾಮರಾಜ ನಗರದ ಹೃದಯ ಭಾಗದಲ್ಲಿರುವ ಈ ದೇವಾಲಯ 1750 ರಲ್ಲಿ ಚಾಮರಾಜೇಂದ್ರ ಒಡೆಯರ್ ಮಕ್ಕಳಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ಈ ಚಾಮ ರಾಜೇಶ್ವರ ದೇವಾಲಯವನ್ನೂ ಸ್ಥಾಪಿಸಿದ್ದಾರೆ. ಈ ಹಿಂದೆ ಚಾಮರಾಜನಗರ ಜಿಲ್ಲೆಗೆ ಹರಿಕುಟಾರ ಎಂಬ ಹೆಸರು ಇತ್ತು. ನಂತರದ ದಿನಗಳಲ್ಲಿ ಈ ಸ್ಥಳದಲ್ಲಿ ಚಾಮರಾಜನಗರ ಒಡೆಯರ್ ಅವರು ಜನಿಸಿದ್ದರಿಂದ ಈ ಜಿಲ್ಲೆಗೆ ಚಾಮರಾಜನಗರ ಎಂದು ನಾಮಕರಣ ಮಾಡಿದ್ದರಂತೆ.
ಚಾಮರಾಜ ಒಡೆಯರ್ ಅವರು ಮೃತಪಟ್ಟ ನಂತರ ಇವರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರು ತಂದೆಯ ಜ್ಞಾಪಕಾರ್ಥವಾಗಿ ಈ ಚಾಮರಾಜೇಶ್ವರ ದೇವಾಲಯವನ್ನು ಕಟ್ಟಿಸಿದರು. ಶಿವಲಿಂಗವನ್ನು ಸ್ಥಾಪಿಸಲು ಕೃಷ್ಣರಾಜ ಒಡೆಯರ್ ಕಾಶಿಗೆ ತೆರಳಿ ಅಲ್ಲಿನ ಗುರುಗಳನ್ನು ಭೇಟಿಯಾಗಿ ಅವರ ಬಳಿ ಚಾಮರಾಜನಗರದಲ್ಲಿ ಈಶ್ವರಲಿಂಗ ಸ್ಥಾಪಿಸಿ ದೇವಾಲಯ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದ್ದರಂತೆ. ಆನಂತರ ಅಲ್ಲಿನ ಗುರುಗಳು ತಮ್ಮ ಬಳಿ ಇದ್ದ ಈಶ್ವರನ ಲಿಂಗವನ್ನು ಇವರಿಗೆ ನೀಡಿ ಈಶ್ವರ ಮತ್ತು ರಾಜತ್ವ ಸೇರಿ ಚಾಮರಾಜೇಶ್ವರ ಎಂದು ಹೆಸರು ಇಟ್ಟರಂತೆ.ಈ ಲಿಂಗವನ್ನು ಸ್ಥಾಪಿಸುವ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತದೆ ಎಂದು ಹೇಳಿ ಈ ಲಿಂಗವನ್ನು ನೀಡಿದ್ದರಂತೆ. ಅಲ್ಲಿಂದ ಲಿಂಗವನ್ನು ಕೃಷ್ಣರಾಜ ಒಡೆಯರ್ ಚಾಮರಾಜನಗರದಲ್ಲಿ ಪ್ರತಿಷ್ಠಾಪಿಸಿ ಚಾಮರಾಜೇಶ್ವರ ಎಂದು ದೇವಾಲಯಕ್ಕೆ ನಾಮಕರಣ ಮಾಡುತ್ತಾರೆ.

 

 

 

ಈ ಚಾಮರಾಜೇಶ್ವರ ದೇವಾಲಯದ ಸುತ್ತಲೂ ಶಿವನ ವಿವಿಧ ಅವತಾರಗಳ ವಿಗ್ರಹಗಳನ್ನು ಕೆತ್ತಲಾಗಿದ್ದು,ಈ ದೇವಸ್ಥಾನದ ಸುತ್ತಲೂ ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಹಿಂಭಾಗದಲ್ಲಿ ಅಂದಿನ ಕಾಲದಲ್ಲಿ ಅಂದರೆ ಚಾಮರಾಜ ಒಡೆಯರ್ ಜೀವಿತಾವಧಿಯಲ್ಲಿ ಇದ್ದ ಮಹಾನ್ ದೈವ ಭಕ್ತರ ವಿಗ್ರಹಗಳನ್ನು ಕೆತ್ತಲಾಗಿದೆ. ಇವರು ಶಿವನ ಪರಮ ಭಕ್ತರು ಎಂದು ಹೇಳಲಾಗುತ್ತದೆ.ಈ ದೇವಾಲಯದ ಉತ್ತರ ಭಾಗದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಗಣಪತಿಯ ವಿವಿಧ ಲೀಲಾವತಿ ವಿಗ್ರಹಗಳನ್ನು ನಿಲ್ಲಿಸಲಾಗಿದೆ.ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲೆ ಮಂಡಕ ಹಳ್ಳಿಯಲ್ಲಿ ಅಂದರೆ ಈಗಿನ ವಿಮಾನ ನಿಲ್ದಾಣವಿರುವ ಜಾಗದಲ್ಲಿ ನಾಲ್ಕು ಅಡಿ ಎತ್ತರದ ಪಾರ್ವತಿ ವಿಗ್ರಹವಿದೆ . ಪಾರ್ವತಿ ದೇವಿಯು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕನಸಿನಲ್ಲಿ ಬಂದು ಚಾಮರಾಜನಗರದಲ್ಲಿ ಈಶ್ವರನ ದೇವಾಲಯ ನಿರ್ಮಿಸಿದ ಹಾಗೆಯೇ ಈಶ್ವರನ ಪತ್ನಿ ನನ್ನನ್ನು ಈ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಹಾಗೆ ಕನಸಿನಲ್ಲಿ ಹೇಳಿದ್ದರಂತೆ.

ಇದನ್ನು ನೆರವೇರಿಸಲು ಮಹಾರಾಜ ಮಂಡಕ ಹಳ್ಳಿಯಿಂದ ಪಾರ್ವತಿ ದೇವಿಯ ವಿಗ್ರಹವನ್ನು ತಂದು, ಸಂಪ್ರೋಕ್ಷಣೆ ಮಾಡಿ, ಯಜ್ಞ ಯಾಗಾದಿಗಳಿಗೆ ಮಾಡಿ ಚಾಮರಾಜೇಶ್ವರ ದೇವರ ಎಡಭಾಗದಲ್ಲಿ ದೇವಾಲಯದ ಒಳಗಡೆ ಪಾರ್ವತಿ ದೇವಿಯನ್ನು ಪ್ರತಿಷ್ಠಾಪಿಸುತ್ತಾರೆ. ಆಗ ಈ ದೇವಿಗೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪ ನಂಜಾಂಬಾ ಎಂಬ ಹೆಸರನ್ನು ನಾಮಕರಣ ಮಾಡಿ ಕೆಂಪ ನಂಜಾಂಬಾ ದೇವಾಲಯ ಎಂದು ಕರೆಯುತ್ತಾರೆ.
ಮದುವೆಯಾಗದವರಿಗೆ ಕಂಕಣ ಭಾಗ್ಯ, ವಿದ್ಯಾಭ್ಯಾಸ, ನೌಕರಿ ಮತ್ತು ಇನ್ನಿತರ ಕಷ್ಟಕಾರ್ಪಣ್ಯಗಳು ಬಂದಾಗ ಈ ಚಾಮರಾಜೇಶ್ವರ ದೇವಾಲಯದಲ್ಲಿ ಹರಕೆ ಹೊತ್ತಿದರೆ ಅಂತಹ ಹರಕೆಗಳು ಈಡೇರುತ್ತವೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಕಾರ್ತಿಕ ಮಾಸದ ದೀಪಾವಳಿ ಮತ್ತು ಆಶಾಡ ಮಾಸದಲ್ಲಿ ಚಾಮರಾಜೇಶ್ವರನಿಗೆ ವಿಶೇಷ ಪೂಜೆಗಳು ನೆರವೇರುತ್ತವೆ. ಆಶಾಡ ಮಾಸದಲ್ಲಿ ಪ್ರತಿ ವರ್ಷಕ್ಕೊಮ್ಮೆ ದೇವರ ರಥೋತ್ಸವ ನಡೆಯುತ್ತದೆ. ರಥವನ್ನು ಮತ್ತು ಬಣ್ಣದ ಬಾವುಟಗಳಿಂದ ಶೃಂಗರಿಸಿ ಚಾಮರಾಜೇಶ್ವರ ಮೂರ್ತಿಯನ್ನು ರಥದಲ್ಲಿ ಇರಿಸಿ ನಗರದ ರಥಬೀದಿಯಲ್ಲಿ ರಥವನ್ನು ಎಳೆಯಲಾಗುತ್ತದೆ.

 

 

 

ಜಾತಿ ಮತ ಎಂಬ ಬೇಧಭಾವವಿಲ್ಲದೇ ಈ ಊರಿನ ಜನರೆಲ್ಲಾ ಸೇರಿ ಶ್ರದ್ಧೆ-ಭಕ್ತಿಯಿಂದ ಚಾಮರಾಜೇಶ್ವರ ರಥವನ್ನು ಎಳೆಯುತ್ತಾರೆ. ಈ ಅಭೂತಪೂರ್ವ ಸಂದರ್ಭದಲ್ಲಿ ಮದುವೆಯಾದ ನವ ವಧು-ವರರು ಈ ರಥಕ್ಕೆ ಹಣ್ಣನ್ನು ಹಾಕಿಸಿದರೆ ಮುಂದಿನ ಜೀವನ ಸುಖಕರವಾಗಿರುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ.ಈ ಚಾಮರಾಜೇಶ್ವರ ದೇವಾಲಯದಲ್ಲಿ ಮೈಸೂರು ಮಹಾರಾಜರ ಕುಲದೇವತೆ ಚಾಮುಂಡೇಶ್ವರಿ ದೇವಿ ಕೂಡ ಇದ್ದಾಳೆ. ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ವಿಶೇಷವಾಗಿ ಧಾರವಾಡದಿಂದ ಶಿಲೆಯನ್ನು ತರಿಸಿ ಅಲ್ಲಿನ ಶಿಲ್ಪ ಕಲಾವಿದರಿಂದ ಕೆತ್ತಿಸಿ , ಚಾಮರಾಜೇಶ್ವರ ದೇವಾಲಯದ ಬಲಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಆವರಣದಲ್ಲಿ ಬಲಭಾಗದಲ್ಲಿ ಜಗನ್ಮಾತೆಯಾದ ಚಾಮುಂಡೇಶ್ವರಿ ದೇವಿಯ ದೇವಾಲಯವನ್ನು ನಿರ್ಮಿಸಲಾಗಿದೆ.

ಚಾಮರಾಜನಗರದ ಈ ಪುಣ್ಯ ಸ್ಥಳದಲ್ಲಿ ಶಿವಪಾರ್ವತಿಯರ ಅಲ್ಲದೆ, ಜಗನ್ಮಾತೆ ಚಾಮುಂಡೇಶ್ವರಿಯು ನೆಲೆಸಿರುವುದರಿಂದ ಭಕ್ತರು ಅಷ್ಟು ದೇವರುಗಳ ಕೃಪೆಗೆ ಪಾತ್ರರಾಗುತ್ತಾರೆ. ಚಾಮುಂಡೇಶ್ವರಿ ದೇವಿಯು ಹೆಣ್ಣುಮಕ್ಕಳ ಕಷ್ಟ ಕಾರ್ಪಣ್ಯಗಳನ್ನು ನಿವಾರಣೆ ಮಾಡುವ ಆದಿಶಕ್ತಿಯಾಗಿ ಇರುವುದರಿಂದ ಇಲ್ಲಿಗೆ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅಷ್ಟೇ ಅಲ್ಲದೇ ದೇವಿಗೆ ಪ್ರತಿವಾರ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ. ಅಪಾರ ಭಕ್ತರನ್ನು ಒಳಗೊಂಡಿರುವ ನಂಬಿಕೆಗೆ ಪಾತ್ರವಾಗಿರುವ ಚಾಮರಾಜೇಶ್ವರನ ದೇಗುಲದಲ್ಲಿ ಭಕ್ತಿ ಶ್ರದ್ಧೆಯಿಂದ ಪೂಜಿಸಿದರೆ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಿ ಆಸೆಗಳು ಈಡೇರುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top