ಮನೋರಂಜನೆ

“ಸಂಜನಾಗೆ ಕೋಟಿ ಕೋಟಿ ಹಣ, ದುಬಾರಿ ಕಾರುಗಳು ಎಲ್ಲಿಂದ ಬಂತು” ಗಂಡ ಹೆಂಡತಿ ನಿರ್ದೇಶಕ ರವಿ ಶ್ರೀವತ್ಸ ಪ್ರಶ್ನೆ

ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯಂತೆ ಎದ್ದಿರುವ #MeToo ಅಭಿಯಾನ ವಿವಾದದ ಕೇಂದ್ರ ಬಿಂದುವಾಗುತ್ತಿವೆ. ಇತ್ತೀಚೆಗಷ್ಟೆ ನಟಿ ಸಂಜನಾ ಗಲ್ರಾಣಿ ಅವರು ನಿರ್ದೇಶಕ ರವಿ ಶ್ರೀವತ್ಸ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ‘ಗಂಡ ಹೆಂಡತಿ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಿರ್ದೇಶಕ ತನಗೆ ಮುಜುಗರವಾಗುವಂತೆ ಚುಂಬನ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಲು ತನ್ನ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ವಿರೋಧಿಸಿದಕ್ಕೆ ಅವರು ತನಗೆ ಬೆದರಿಕೆ ಹಾಕಿ 50ಕ್ಕೂ ಹೆಚ್ಚು ಚುಂಬನದ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಅದು ಅವರ ಮೊದಲ ಸಿನಿಮಾ, ಆಗ ಅವರಿಗೆ 16 ವರ್ಷವಾಗಿದ್ದ ಕಾರಣ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಇದ್ದರು ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಿರ್ದೇಶಕ ರವಿ ಶ್ರೀವತ್ಸ “ನಟಿ ಸಂಜನಾ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. 12 ವರ್ಷಗಳ ನಂತರ ಸುಮ್ಮನೆ ಆರೋಪ ಮಾಡುತ್ತಿದ್ದಾರೆ.” ಎಂದು ಫೇಸ್ಬುಕ್ ಮೂಲಕ ಹೇಳಿಕೊಂಡಿದ್ದರು. ಅಲ್ಲದೇ ಇಂದು ಸುದ್ದಿಗೋಷ್ಠಿ ನಡೆಸಿ ರವಿ ಶ್ರೀವತ್ಸ ಅವರು ನಟಿ ಸಂಜನಾ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದರು.

ಸಂಜನಾ ಅವರ ಹತ್ತಿರ ಈಗ ಕೋಟಿ ರೂ. ಆಸ್ತಿ ಇದೆ. ಅದಕ್ಕೆಲ್ಲಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ. ಅವರು ಈಗ ಜಾಗ್ವಾರ್ ಕಾರಿನಲ್ಲಿ ಓಡಾಡುತ್ತಾರೆ. ನಾನು ಈಗ ಮಾರುತಿ ಬೆಲೆನೋ ಕಾರಿನಲ್ಲಿ ಓಡಾಡುತ್ತಿದ್ದೇನೆ. ಅವರು ಐಶಾರಾಮಿ ಮನೆಯಲ್ಲಿ ಇರುತ್ತಾರೆ. ನಾನು 8 ಸಾವಿರ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ಈಗ ಅವರು ತಮಿಳು, ತೆಲುಗು, ಮಲೆಯಾಳಂ ಎಲ್ಲ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಆದರೂ ಅವರನ್ನು ಗಂಡ- ಹೆಂಡತಿ ಸಂಜನಾ ಎಂದು ಗುರುತಿಸುತ್ತಾರೆ. ‘ಅವತ್ತು ನಿಮಗೆ ಅನ್ನ ಕೊಟ್ಟಿದ್ದು ಸಿನಿಮಾ. ಅದರ ಬಗ್ಗೆ ಏಕೆ ಕೆಟ್ಟದಾಗಿ ಮಾತನಾಡುತ್ತೀರಾ? ಎಂದು ರವಿ ಶ್ರೀವತ್ಸ ಪ್ರಶ್ನಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top