ಮನೋರಂಜನೆ

ದುನಿಯಾ ವಿಜಿ ಪುತ್ರಿ ಮೇಲೆ ಹಲ್ಲೆ ಪ್ರಕರಣ- ಆಸ್ಪತ್ರೆಯಿಂದ ಡಿಸ್ಚಾರ್ಜ್​ ಬಳಿಕ ಮೋನಿಕಾ ಹೇಳಿದ್ದೇನು?

“ತನ್ನನ್ನು ತೀರಾ ಅವಾಚ್ಯ ಶಬ್ಧಗಳಿಂದ ಬೈದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾಗಿದ್ದರು” ಎಂದು ಆರೋಪಿಸಿ, ಗಿರಿನಗರ ಪೊಲೀಸ್​ ಠಾಣೆಯಲ್ಲಿ ಮೋನಿಕಾ ದೂರು ದಾಖಲಿಸಿದ್ದಾರೆ. ತಂದೆ ದುನಿಯಾ ವಿಜಯ್, ವಿಜಿಯ ಎರಡನೇ ಪತ್ನಿ(?) ಕೀರ್ತಿ ಗೌಡ ಹಾಗೂ ವಿಜಿ ಕಾರ್ ಡ್ರೈವರ್ ಸೇರಿದಂತೆ ಒಟ್ಟು ಐದು ಜನರ ವಿರುದ್ಧ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ 148,147, 341, 324,323,504 ಅಡಿ ದೂರು ದಾಖಲಾಗಿತ್ತು.

ತಮ್ಮ ಬಟ್ಟೆಗಳನ್ನ ಎತ್ತಿಕೊಂಡು ಬರಲು ಮೋನಿಕಾ ಅವ್ರು ನೆನ್ನೆ ದುನಿಯಾ ವಿಜಿ ಮತ್ತು ಕೀರ್ತಿ ಗೌಡ ವಾಸವಿರುವ ಮನೆಗೆ ಹೋಗಿದ್ದರಂತೆ. ಮೋನಿಕಾ ಅವರು ಮನೆಯೊಳಗೇ ಹೋಗುತ್ತಿದ್ದಂತೆ ಕೀರ್ತಿಗೌಡ ಹಾಗೂ ವಿಜಯ್ ಮತ್ತು ಕೆಲವರು ಮೋನಿಕಾ ಮೇಲೆ ಹಲ್ಲೆ ಮಾಡಿದ್ದಾರೆ, ಬಾಯಿಗೆ ಬಂದಂತೆ ಬೈದಿದ್ದಾರೆ ಅಂತಾ ಆರೋಪಿಸಲಾಗಿದೆ.. “ಮಾರಕಾಸ್ತ್ರಗಳನ್ನ ತೋರಿಸಿ ಹೆದರಿಸಿದರು ಎಂದು ದುನಿಯಾ ವಿಜಿ ಪುತ್ರಿ ಮೋನಿಕಾ ಆರೋಪಿಸಿದ್ದಾರೆ. ಮೋನಿಕಾ ಬಲಗೈ ಗೆ ಪೆಟ್ಟಾಗಿದ್ದು, ನೆನ್ನೆ ಅವರು ಆಸ್ಪತ್ರೆಯಲ್ಲಿ ಮೋನಿಕಾ ಚಿಕಿತ್ಸೆ ಪಡೆಯುತ್ತಿದ್ದರು ಈಗ ಡಿಸ್ಚಾರ್ಜ್ ಆಗಿದ್ದಾರೆ.

ಡಿಸ್ಚಾರ್ಜ್ ಬಳಿಕ ಮೋನಿಕಾ ಹೇಳಿದ್ದಿಷ್ಟು:

“ನಮ್ಮ ಮೇಲೆ ಹಲ್ಲೆ ಆಗಲು ಕೀರ್ತಿ ವಿಚಾರವೇ ಕಾರಣ. ನಾವು ಆ ಮನೆಯಲ್ಲಿ ಇರಬಾರದು ಎಂದು ಪ್ಲಾನ್ ಮಾಡಿಕೊಂಡು ನನಗೆ ಮೊದಲಿನಿಂದಲೂ ಹಿಂಸೆ ನೀಡುತ್ತಿದ್ದರು. ಮನೆಗೆ ಹೋದಾಗ ಬಾಗಿಲು ಹಾಕಿ ಕೀರ್ತಿ ಪರ ಮಾತಾಡು ಅಂತ ಹೇಳಿ ಬೆದರಿಸಿದರು. ನಿಮ್ಮ ಅಮ್ಮನ ವಿರುದ್ಧ ಕಂಪ್ಲೇಂಟ್ ಕೊಡು ಅಂದ್ರು. ಅಪ್ಪ, ಕೀರ್ತಿ ಸೇರಿನೇ ಗಲಾಟೆ ಶುರು ಮಾಡಿದ್ದು. ಮನೆಯಲ್ಲಿ ಐದು ಜನ ಸೇರಿ ನನ್ನ ಹೊಡೆದ್ರು. ನಂತರ ಹೊರಗೆ ಹಾಕಿ, ಬಾಗಿಲು ಹಾಕಿಕೊಂಡ್ರು. ಆಗ ನನ್ನ ನಾನು ನನ್ನ ಕೋಪವನ್ನ ಮನೆ ಬಾಗಿಲಿನ ಮೇಲೆ ತೋರಿಸಿದೆ.. ಮನೆ ಬಿಟ್ಟು ಹೋಗಿ ಅಂತ ಹೇಳಿದ್ದರೆ ನಾವೇ ಬಿಟ್ಟು ಬರುತ್ತಿದ್ದೆವು, ಆದ್ರೆ ಅವ್ರು ಇಷ್ಟೆಲ್ಲಾ ಡ್ರಾಮಾ ಮಾಡ್ತಿದ್ದಾರೆ” ಎಂದು ಮೋನಿಕಾ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top