ಉಪ್ಪಯುತ್ತ ಮಾಹಿತಿ

ಅಡುಗೆ ಉಪ್ಪು ಬಳಸಿ ನಿಮ್ಮ ಮುಖದತ್ವಚೆ ಹಾಲಿನಂತೆ ಹೊಳೆಯುತ್ತದೆ

ಅಡುಗೆ ಮನೆಯಲ್ಲಿರುವ ಉಪ್ಪಿನಿಂದ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಸುಂದರವಾಗಿ ಮಾಡಬಹುದು, ಉಪ್ಪಿನಿಂದ ಸೌಂಧರ್ಯ ವೃದ್ಧಿ ಹೇಗಾಗುತ್ತೆ ಎನ್ನುವುದನ್ನು ನಿಮಗೆ ಕೆಲವು ಟಿಪ್ಸ್’ಗಳು ತಿಳಿಸಿಕೊಡುತ್ತೇವೆ…ಈ ಟಿಪ್ಸನ್ನು ಬಳಸಿ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.ಉಪ್ಪು ಚರ್ಮದಲ್ಲಿರುವ ಮಲಿನವನ್ನು ದೂಳನ್ನು ಸಕ್ರಿಯವಾಗಿ ಕೆಲಸ ಮಾಡುತ್ತದೆ, ಇನ್ನು ಚರ್ಮದಲ್ಲಿರುವ ಬ್ಲಾಕ್’ಹೆಡ್ಸ್ ಮತ್ತು ವೈಟ್’ಹೆಡ್ಸ್ ಗಳನ್ನ ಹೊರ ಹಾಕುತ್ತತೆ. ಉಪ್ಪು ಚರ್ಮದಲ್ಲಿರುವ ಕಪ್ಪು ಕಲೆಯನ್ನು ಬಹುಬೇಗ ನೀವಾರಿಸುತ್ತದೆ ಜೊತೆಯಲ್ಲಿ ಬ್ಯಾಕ್ಟೀರಿಯಾ ಮತ್ತು ಚರ್ಮದ ಅಲರ್ಜಿಗಳನ್ನ ನೀವಾರಿಸುತ್ತದೆ ಹಾಗೂ ಮೊಡವೆಗಳ ಸಮಸ್ಯೆಗಳನ್ನು ಕೂಡ ಕ್ಲೀಯರ್ ಮಾಡುತ್ತದೆ.

 

 

 

ಟ್ಯಾನ್ ಮತ್ತು ಚರ್ಮದಲ್ಲಿನ ಕಪ್ಪನ್ನು ತೊಲಗಿಸಲು ಉಪ್ಪು ಒಳ್ಳೆಯ ಮನೆ ಮದ್ದು ಇದಾಗಿದೆ. ಒಂದು ಟೀ ಸ್ಪೂನ್’ಗೆ ಜೇನುತುಪ್ಪದೊಂದಿಗೆ ಒಂದು ಚಮಚ ಉಪ್ಪನ್ನು ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಬೇಕು, ನಂತರ ತಣ್ಣಿರಿನಿಂದ ತೊಳೆಯಬೇಕು, ಹೀಗೆ ಎರಡುವಾರ ಮಾಡಿದರೆ ಕಂಡಿತ ಇದರಿಂದ ಸನ್ ಟ್ಯಾನ್ ಮತ್ತು ಕಲೆಗಳು ಬಹುಬೇಗನೆ ಕ್ಲೀಯರಾಗುತ್ತದೆ. ಕಾಂತಿಯುಕ್ತವಾಗುತ್ತದೆ. ಮೊಡವೆಗಳು ನಿವಾರಣೆಯಾಗುತ್ತದೆ.ಮೊಡವೆಗಳ ಕಲೆಗಳು ಬಹುಬೇಗ ತೊಲಗಲು ಎರಡು ಟೀ ಸ್ಪೂನ್ ನಿಂಬೆ ರಸದಲ್ಲಿ ಒಂದು ಚಮಮ ಉಪನ್ನು ಬೆರೆಸಿ ಮುಕ್ಕೆ ಹಚ್ಚಬೇಕು ಸ್ವಲ್ಪ ಸಮಯಬಿಟ್ಟು ನಂತರ ಮೃದುವಾಗಿ ಮಸಾಜ್ ಮಾಡಿ ತೊಳೆಯಬೇಕು, ಹೀಗೆ 2 ವಾರಗಳು ಮಾಡಬೇಕು ಇದು ಜಿಡ್ಡು ಚರ್ಮ ಹೊಂದಿರುವವರು ಮಾತ್ರ ಮಾಡಬೇಕು. ಇದರಿಂದ ಬ್ಯಾಕ್ಟೀರಿಯಾ ಕಪ್ಪುಕಲೆ ನಿವಾರಣೆಯಾಗುತ್ತದೆ.

ಬ್ಲಾಕ್’ಹೆಡ್ಸ್ ಮತ್ತು ವೈಟ್’ಹೆಡ್ಸ್ ನಿವಾರಣೆಗಾಗಿ ಮೊದಲು ಹಸಿ ಹಾಲನ್ನು ಅಪ್ಲೆ ಮಾಡಬೇಕು ಅದು ಸಂಪೂರ್ಣ ಒಣಗಿದ ನಂತರ ಸ್ವಲ್ಪ ಉಪ್ಪನ್ನು ಹಚ್ಚಿ ರಬ್ಬ್ ಮಾಡಿ ಈ ಮಿಲ್ಕ ಫೇಸ್ ಪ್ಯಾಕ್ ಅನ್ನು ಹೊಗಲಾಡಿಸಬೇಕು. ಹೀಗೆ ಮಾಡುವುದರಿಂದ ಚರ್ಮದಲ್ಲಿನ ಕೊಳೆ ಮತ್ತು ಡೆಡ್ ಸೆಲ್ಸ್ ನಿವಾರಣೆಯಾಗುತ್ತದೆ ಹಾಗೂ ಸುಂದರವಾಗಿ ಕಾಂತಿಯುತವಾಗಿ ಹೊಳೆಯುತ್ತದೆ ಇದನ್ನು ವಾರದಲ್ಲಿ ಎರಡುಬಾರಿ ಮಾಡಬೇಕು.ಡ್ರೈ ಸ್ಕಿನ್ ನವರು ಒಂದು ಚಮಚ ಉಪ್ಪು ಸ್ವಲ್ಪ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಮಸಾಜ್ ಮಾಡುವುದರಿಂದ ನಿಮ್ಮ ಮುಖ ಸಂಪೂರ್ಣ ಕ್ಲೀಯರಾಗುತ್ತದೆ.ಉಪ್ಪನ್ನು ಬಳಸುವಾಗ ಕಣ್ಣಿಗೆ ತಾಕದಂತೆ ನೋಡಿಕೊಳ್ಳಬೇಕು ಹಾಗೂ ಸೂಕ್ಷ್ಮ ಚರ್ಮದವರು ಈ ಟಿಪ್ಸನ್ನು ಬಳಸದಿರುವುದು ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top