fbpx
ಮನೋರಂಜನೆ

ನವರಸ ನಾಯಕ ಜಗ್ಗೇಶ್ ಶೃತಿ ಹರಿಹರನ್,ಪ್ರಕಾಶ್​​ ರೈ ಹಾಗೂ ಅರ್ಜುನ್ ಸರ್ಜಾ ಬಗ್ಗೆ ಹೀಗೆಲ್ಲಾ ಹೇಳೋದಾ

ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ನಟಿಯರನೇಕರು ತಮಗಾದ ಲೈಂಗಿಕ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಇದೀಗ ನಟ ಅರ್ಜುನ್‌ ಸರ್ಜಾ ವಿರುದ್ಧ ಯುವ ನಟಿ ಶೃತಿ ಹರಿಹರನ್‌ ಕಿರುಕುಳ ನೀಡಿದ್ದ ಆಪಾದನೆ ಮಾಡಿದ್ದಾರೆ.

ನಟಿ ಶ್ರುತಿ ಹರಿಹರನ್​ ಸಹ ಖ್ಯಾತ ನಟ ಅರ್ಜುನ್ ಸರ್ಜಾ ಅವರಿದ ತಮಗಾದ ಅನುಭವದ ಕುರಿತು ಹೇಳಿಕೊಂಡಿದ್ದಾರೆ. ತಮಿಳಿನ ವಿಸ್ಮಯ ಸಿನಿಮಾದಲ್ಲಿ ಶೃತಿಹರಿಹರನ್​​ ಹಾಗೂ ಅರ್ಜುನ್​​ ಸರ್ಜಾ ಒಂದೇ ಸಿನಿಮಾದಲ್ಲಿ ನಟಿಸಿದ್ರು. ಈ ಸಿನಿಮಾ ಶೂಟಿಂಗ್​​ ವೇಳೆಯಲ್ಲಿ ಅರ್ಜುನ್​​ ಸರ್ಜಾ ನನ್ನೊಂದಿಗೆ ಅಸಹಜವಾಗಿ ವರ್ತಿಸುತ್ತಿದ್ರು” ಎಂದು ಹೇಳಿಕೆ ನೀಡಿದ್ದಾರೆ.ಈ ಹೇಳಿಕೆ ಈಗ ದಿನಕ್ಕೆ ಒಂದೊಂದು ರೂಪ ಪಡೆದು ಕೊಂಡು ಜನರ ಬಾಯಿಗೆ ಆಹಾರವಾಗಿದೆ ,ಕೆಲವರು ಅರ್ಜುನ್ ಸರ್ಜಾ ಪರ ಧ್ವನಿ ಎತ್ತಿದ್ದಾರೆ ಇನ್ನೂ ಕೆಲವರು ಶ್ರುತಿ ಹರಿಹರನ್ ಗೆ ಸಪೋರ್ಟ್ ಮಾಡುತ್ತಿದ್ದಾರೆ .

 

 

 

ಈ ವಿಚಾರ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ನವರಸ ನಾಯಕ ಜಗ್ಗೇಶ್ ಹೇಳಿದ್ದು ಏನ್ ಗೊತ್ತಾ?
“ಶೃತಿ ಹರಿಹರನ್ ತಕ್ಷಣ ಪ್ರತಿಕ್ರಿಯೆ ಮಾಡಬೇಕಿತ್ತು. ಅರ್ಜುನ್ ವಿಚಾರದಲ್ಲಿ ಶೃತಿ ಹರಿಹರನ್ ತಪ್ಪು ಮಾಡಿದ್ದಾರೆ ಎಂದು ಹೇಳಿದ್ದಾರೆ.ಇದು ಆಂದೋಲನ ಮಟ್ಟಕ್ಕೆ ಹೋಗಿದೆ, ಈ ಪ್ರಕರಣದಲ್ಲಿ ಏನೋ ಇದೆ. ಇದು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ ಎಂದು ಹೇಳಿದರು”.ಅರ್ಜುನ್ ಸರ್ಜಾ ಮಹಾನ್ ಸಾದ್ವಿ, ಸುಸಂಸ್ಕೃತ ವ್ಯಕ್ತಿ. ಅವರು ಏಕವಚನ ಮಾತನಾಡುವ ವ್ಯಕ್ತಿ ಅಲ್ಲ. ಡಾ.ರಾಜ್, ಡಾ.ವಿಷ್ಣು ಬಿಟ್ಟರೆ ಸರಳತೆ ಮೈಗೂಡಿಸಿಕೊಂಡಿರುವ ಜಂಟಲ್ ಮನ್.ಅರ್ಜುನ್ ಅವರ 35 ವರ್ಷದ ಸಿನಿಮಾ ಕೃಷಿಯನ್ನ ಶೃತಿ ಒಂದೇ ದಿನಕ್ಕೆ ಹಾಳು ಮಾಡಿದ್ದಾರೆ.ಇದು ಅರ್ಜುನ್ ರನ್ನು ಕೊಲೆ ಮಾಡಿದ ಹಾಗೆ ಎಂದು ಆರೋಪಿಸಿದ್ದಾರೆ”.

“ಹೆಣ್ಣು ಮಕ್ಕಳು ಸಿನಿಮಾಗೆ ಬಂದ್ರೆ ಸಾರ್ವಜನಿಕ ವಾಗಿ ನಟನೆ ಮಾಡಬೇಕು.ಸಿನಿಮಾ ಅನ್ನೋದು ಗಂಧರ್ವ ವಿದ್ಯೆ ತರ.ಬಹುಭಾಷ ನಟ ಪ್ರಕಾಶ್ ರೈ ಒಬ್ಬ ಜಂಟಲ್ ಮನ್. ದೇಶದ ಮಹಾನ್ ನಾಯಕ, ಜನ ನೊಂದರೆ ಅವರ ಸಮಸ್ಯೆಗೆ ಬರ್ತಾರೆ.ಆದರೆ ಸರ್ಜಾ ಸ್ಲಂ ನಿಂದ ಬಂದಿರೋರು, ರೈ ದೇವಲೋಕದಿಂದ ಬಂದಿರೋದಾ, ಎಂದು ವ್ಯಂಗ್ಯವಾಡಿದ್ದಾರೆ.

ಸಿಕ್ಕಿದ್ದೆ ಚಾನ್ಸ್ ಅಂತ ಬಾಯಿಗೆ ಬಂದಂಗೆ ಮಾತಾಡೋದು ತಪ್ಪು ಎಂದು ಪ್ರಕಾಶ್ ರೈ ಕಾಲೆಳೆದಿದ್ದಾರೆ. ದುಡ್ಡಿರೋರೆಲ್ಲಾ ಹೀರೋಗಳಾದರೆ ಚಿತ್ರರಂಗದ ಘನತೆ ಹಾಳಾಗುತ್ತೆ.ಚಿತ್ರರಂಗ ಗಂಧರ್ವ ವಿದ್ಯೆ, ಕಳ್ಳ, ವೇಶ್ಯೆ ಹೀಗೆ ನಾನಾ ಪಾತ್ರ ಮಾಡಬೇಕು. ಪರಕಾಯ ಪ್ರವೇಶ ಮಾಡಬೇಕು. ಚಿತ್ರರಂಗದಲ್ಲಿ ಹೆಣ್ಣು ಮಕ್ಕಳಿಗೆ ಹಿಂಸೆ ಕೊಟ್ಟರೆ ಮೊಬೈಲ್ ನಲ್ಲಿ ಆನ್ ಲೈನ್ ಲೈವ್ ಮಾಡಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳನ್ನ ಟ್ಯಾಗ್ ಮಾಡಿ,ಇಲ್ಲಾ ಚಲನಚಿತ್ರ ವಾಣಿಜ್ಯ ಮಂಡಳಿಗಾದರೂ ದೂರು ಕೊಡಿ ಎಂದು ಸಲಹೆ ನೀಡಿದರು. ಘಟನೆ ನಡೆದಾಗ ಪ್ರತಿಕ್ರಿಯೆ ಮಾಡದೇ ಈಗ ಮಾಡೋದು ಸರೀನಾ? ಎಂದು ಕೊನೆಯದಾಗಿ ಪ್ರಶ್ನಿಸಿದ್ದಾರೆ”.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top