fbpx
ಮನೋರಂಜನೆ

ಚೀಪ್ ಪುಟಗೋಸಿ ಪಬ್ಲಿಸಿಟಿ ನನಗೆ ಬೇಕಾಗಿಲ್ಲ- ಟೀಕಿಸಿದವರಿಗೆ ಸಂಜನಾ ತಿರುಗೇಟು.

ಬಾಲಿವುಡ್​ ಸೇರಿದಂತೆ ಎಲ್ಲಾ ಕಡೆ ಸಂಚಲನ ಮೂಡಿಸುತ್ತಿರುವ #MeToo ಅಭಿಯಾನ ವಿವಾದದ ಕೇಂದ್ರ ಬಿಂದುವಾಗುತ್ತಿವೆ. ಇತ್ತೀಚೆಗಷ್ಟೆ ನಟಿ ಸಂಜನಾ ಗಲ್ರಾಣಿ ಅವರು ನಿರ್ದೇಶಕ ರವಿ ಶ್ರೀವತ್ಸ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ‘ಗಂಡ ಹೆಂಡತಿ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಿರ್ದೇಶಕ ತನಗೆ ಮುಜುಗರವಾಗುವಂತೆ ಚುಂಬನ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಲು ತನ್ನ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ವಿರೋಧಿಸಿದಕ್ಕೆ ಅವರು ತನಗೆ ಬೆದರಿಕೆ ಹಾಕಿ 50ಕ್ಕೂ ಹೆಚ್ಚು ಚುಂಬನದ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಅದು ಅವರ ಮೊದಲ ಸಿನಿಮಾ, ಆಗ ಅವರಿಗೆ 16 ವರ್ಷವಾಗಿದ್ದ ಕಾರಣ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಇದ್ದರು ಆರೋಪಿಸಿದ್ದರು.

ನಟಿ ಸಂಜನಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ನೆಟ್ಟಿಗರು ಅವಕಾಶಗಳಿಲ್ಲದ ಕಾರಣಕ್ಕೆ ಪಬ್ಲಿಸಿಟಿಗಾಗಿ ಈ ಮಾತನಾಡುತ್ತಿದ್ದೀಯಾ ಎಂದು ಕೆಣಕಿದ್ದರು. ಹಾಗೆ ಕೆಣಕಿದವರಿಗೆಲ್ಲ ಸಂಜನಾ ಫೇಸ್ಬುಕ್ ಮೂಲಕ ಉತ್ತರ ಕೊಟ್ಟಿದ್ದಾರೆ..

ನಿಮ್ಮ ಕಾಮೆಂಟ್ಸ್ ನೋಡಿ ನನಗೇ ಆಶ್ಚರ್ಯ ಆಗುತ್ತಿದೆ, ದಂಡುಪಾಳ್ಯದಲ್ಲಿ ನಾನು ಬ್ಯಾಕ್‍ಲೆಸ್ ಆಗಿ ನಟಿಸಿದ್ದು ಅದು ಒಂದು ವಾರ ಹೆಡ್‍ಲೈನ್ ಆಗಿತ್ತು. ನಾನು ಆ ದೃಶ್ಯವನ್ನು ಸ್ಕರ್ಟ್ ಮತ್ತು ಟಾಪ್ ಹಾಕಿಕೊಂಡೆ ನಟಿಸಿದ್ದೆ. ಅದನ್ನು ಡಿಜಿಟಲ್ ನಲ್ಲಿ ಬ್ಲರ್ ಆಗಿ ತೋರಿಸಲಾಗಿತ್ತು. ಇದು ಪಬ್ಲಿಸಿಟಿಗೆ ಅಲ್ಲ, ಸಿನಿಮಾದಲ್ಲಿಯೇ ರೆಕಾರ್ಡೆಡ್‌ ದಾಖಲೆಗಳಿವೆ, ನಮಗೆ ಆಗಿರುವ ನೋವನ್ನು ಹೇಳಿಕೊಳ್ಳುತ್ತಿದ್ದೇವೆ.

ನೀವು ನನಗೆ ಅವಕಾಶ ಇಲ್ಲ ಎಂದು ಹೇಳುತ್ತಿದ್ದೀರಿ ನಿಮಗೆ ಗೊತ್ತಾ? ನಾನು ಬಾಹುಬಲಿ ಚಿತ್ರ ನಿರ್ಮಾಪಕರ ಜತೆ ಕೆಲಸ ಮಾಡುತ್ತಿದ್ದೇನೆ. 4 ಭಾಷೆಗಳಲ್ಲಿ ಬರುತ್ತಿರುವ ಮೆಗಾ ಬಜೆಟ್ ಶೋನಲ್ಲಿ ನಟಿಸುತ್ತಿದ್ದೇನೆ. ತೆಲುಗಿನಲ್ಲಿ ಸ್ವರ್ಣಖಡ್ಗಂ, ತಮಿಳಿನಲ್ಲಿ ಇಳಯತಳಪತಿ, ಬೆಂಗಾಲಿಯಲ್ಲಿ ಶೋನಾ ತಲ್ವಾರ್, ಒಡಿಯಾದಲ್ಲಿ ಸ್ವರ್ಣಖಡ್ಗ. ಅದರಲ್ಲಿನನ್ನದು ವೀರರಾಣಿಯ ಪಾತ್ರ.

ನಾನು ಪ್ರಭಾಸ್, ಮೋಹನ್‍ಲಾಲ್, ಮಮ್ಮೂಟಿ, ಶಿವಣ್ಣ, ದರ್ಶನ್ ಸರ್, ಪವನ್ ಕಲ್ಯಾಣ್ ಸರ್ ಮುಂತಾದ ದೊಡ್ಡ ನಟರ ಜೊತೆ ನಟಿಸಿದ್ದೇನೆ. ನಾನು ಸದ್ಯ 45ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನನಗೆ ಇಂತಹ ಚೀಪ್ ಪುಟಗೋಸಿ ಪಬ್ಲಿಸಿಟಿಯ ಅವಶ್ಯಕತೆ ಇಲ್ಲ. ಚಲನಚಿತ್ರೋದ್ಯಮವು ಉತ್ತಮ ಸ್ಥಳವಾಗಿದೆ, ನನ್ನ 45 ಚಿತ್ರಗಳಲ್ಲಿ ಕೇವಲ ಒಂದು ಚಿತ್ರದಲ್ಲಿ ಮಾತ್ರ ಕೆಟ್ಟ ಅನುಭವವಾಗಿದೆ – ಹಾಗಾಗಿ ನನ್ನ ಅನುಭವವನ್ನು # ಮೀಟೂ ಅಭಿಯಾನದಲ್ಲಿ ಬಹಿರಂಗಪಡಿಸಿದ್ದೇನೆ” ಎಂದು ಸಂಜನಾ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top