fbpx
ದೇವರು

ಇಂದು ಅಶ್ವಯುಜ ಮಾಸದ ಸೀಗೆ ಹುಣ್ಣಿಮೆ ಈ ದಿನ ಭೂತಾಯಿಗೆ ಇದನ್ನು ಅರ್ಪಿಸಿದರೆ ಅಷ್ಟ ಐಶ್ವರ್ಯ ಯೋಗ ಪ್ರಾಪ್ತಿಯಾಗುತ್ತಂತೆ.

ಇಂದು ಸೀಗೆ ಹುಣ್ಣಿಮೆ, ಅಶ್ವಯುಜ ಮಾಸದಲ್ಲಿ ಬರುವ ಈ ಸೀಗಿ ಹುಣ್ಣಿಮೆ ಶ್ರೇಷ್ಠ, ಈ ದಿನ ಭೂತಾಯಿಗೆ ನೈವೇದ್ಯವನ್ನು ಅರ್ಪಿಸಿದರೆ ಅಷ್ಟ ಐಶ್ವರ್ಯ ಯೋಗ ಪ್ರಾಪ್ತಿ.
ಇಂದು ಸೀಗೆ ಹುಣ್ಣಿಮೆ. ಅದರಲ್ಲೂ ಹುಣ್ಣಿಮೆ ಎಂದರೆ ವಿಶೇಷ. ಈ ಸೀಗೆ ಹುಣ್ಣಿಮೆ ಇನ್ನು ವಿಶೇಷವಾದದ್ದು. ಈ ಹುಣ್ಣಿಮೆಯನ್ನು ಯಾವ ರೀತಿ ಆಚರಣೆ ಮಾಡಬೇಕು ? ಏನೆಲ್ಲಾ ಫಲಗಳು ಸಿದ್ಧಿಸುತ್ತವೆ ? ಜೊತೆಗೆ ಯಾವೆಲ್ಲಾ ದೋಷಗಳಿಂದ ಮುಕ್ತಿ ಹೊಂದಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲು ಸೀಗೆ ಹುಣ್ಣಿಮೆ ಎಂದರೆ ನಾವು ಬಿತ್ತಿರುವ ಭೂಮಿಯಲ್ಲಿ, ಬಿತ್ತನೆ ಮಾಡಿರುವ ಭೂಮಿಯಲ್ಲಿ ಬೆಳೆ ಬಂದಿರುತ್ತದೆ, ಆ ಭೂಮಿಯನ್ನು ಜ್ಞಾಪಕ ಮಾಡಿಕೊಂಡು ಅದರ ಜ್ಞಾಪಕಾರ್ಥವಾಗಿ, ಭೂಮಿ ತಾಯಿಗೆ ನಮಸ್ಕಾರವನ್ನು ಮಾಡಿ ಬಂದಿರುವ ಬೆಳೆಗೆ ನಮಸ್ಕಾರ ಮಾಡುವ ಸಂಪ್ರದಾಯ ನಮ್ಮ ಹಿಂದಿನ ಕಾಲದಿಂದಲೂ ಕೂಡ ರೂಢಿಯಲ್ಲಿ ಬಂದಿದೆ. ಆದರೆ ಈ ಸೀಗಿ ಹುಣ್ಣಿಮೆಯಲ್ಲಿ ಇನ್ನೂ ಒಂದು ವಿಶೇಷ ಇದೆ.ಪ್ರತಿನಿತ್ಯ ನಾವು ಬಹಳಷ್ಟು ಅನೇಕ ಸಮಸ್ಯೆಗಳು, ಶತ್ರುಗಳ ಕಾಟ, ತೊಂದರೆಗಳು ಇವೆ ಎಂದು ಹೇಳುತ್ತಾರೆ. ಆದರೆ ಹುಣ್ಣಿಮೆಯ ದಿನ ವ್ಯವಸ್ಥಿತವಾಗಿ ನೀವು ಮಾಡಬೇಕಾಗಿರುವ ಕೆಲಸ ಏನೆಂದರೆ ಶುಚಿರ್ಭೂತವಾಗಿರುವ ನದಿ ನೀರಿನಲ್ಲಿ ಸ್ನಾನವನ್ನು ಮಾಡಿ ಯಾವುದಾದರೂ ಒಂದು ನದಿಯಾದರೂ ಪರವಾಗಿಲ್ಲ, ಗಂಗಾ, ನರ್ಮದಾ, ಸಿಂಧು ಕಾವೇರಿ, ಗೋದಾವರಿ ಯಾವುದೋ ಒಂದು ನದಿಯಲ್ಲಿ ಸ್ನಾನ ಮಾಡಿ ಅಲ್ಲಿರುವ ಕ್ಷೇತ್ರ ಪಾಲಕನಿಗೆ ನಮಸ್ಕಾರವನ್ನು ಮಾಡಿದಾಗ ನಿಮ್ಮಲ್ಲಿರುವ ಮಾಟ ,ಮಂತ್ರ, ದೋಷಗಳು ನಿವಾರಣೆಯಾಗುತ್ತವೆ.

 

 

 

ಕೆಲವರು ಹೊಸ ಕೆಲಸ ಕಾರ್ಯಗಳಿಗೆ ಕೈ ಹಾಕುತ್ತಾರೆ. ಆದರೆ ಅದರಲ್ಲಿ ವಿಘ್ನಗಳು ಉಂಟಾಗುತ್ತವೆ, ಇನ್ನು ಕೆಲವರು ಹೇಳುತ್ತಾರೆ ನಾವು ಏನು ಮಾಡುವುದಕ್ಕೆ ಹೋದರು ನಷ್ಟ ಉಂಟಾಗುತ್ತದೆ, ಸಾಕಷ್ಟು ತೊಂದರೆಗಳಾಗುತ್ತವೆ.ಆದರೆ ಈ ದಿನ ಬಂದಿರುವ ವಿಶೇಷವಾದಂತಹ ಸೀಗಿ ಹುಣ್ಣಿಮೆಯನ್ನು ಸದುಪಯೋಗಪಡಿಸಿಕೊಳ್ಳಿ. ಭೂತಾಯಿಯ ಅನುಗ್ರಹ ನಮಗೆ ಬೇಕು, ಈ ಭೂಮಿಯ ಮೇಲೆ ಜೀವಿಸಲು ಭೂಮಿ ತಾಯಿಯ ಅನುಗ್ರಹ ಬೇಕೇ ಬೇಕು. ಅದಕ್ಕೆ ಗ್ರಾಮೀಣ ಭಾಷೆಯಲ್ಲಿ ಹೇಳುತ್ತಾರೆ “ಹೆಣ್ಣು-ಹೊನ್ನು-ಮಣ್ಣು” ಎಂದು ಈ ಮೂರನ್ನೂ ಅನುಭವಿಸಬೇಕು ಎಂದರೆ ವ್ಯವಸ್ಥಿತವಾಗಿ ಈ ಋಣ ಎನ್ನುವುದು ಬೇಕು. ಆ ಋಣವನ್ನು ಜ್ಯೋತಿಷ್ಯ ಭಾಗದಲ್ಲಿ “ಯೋಗ” ಎಂದು ಹೇಳುತ್ತಾರೆ.ಈ ಯೋಗ ಬರಬೇಕು ಎಂದರೆ ನಾವು ಮಾಡುವ ಕೆಲಸದಲ್ಲಿ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ಈ ಸೀಗೆ ಹುಣ್ಣಿಮೆಯನ್ನು ಆಚರಣೆ ಮಾಡಬೇಕು.ಅದರಲ್ಲೂ ಈ ದಿನ ಸೀಗೆ ಹುಣ್ಣಿಮೆಯ ಜೊತೆಗೆ ವಾಲ್ಮೀಕಿ ಜಯಂತಿಯೂ ಕೂಡ ಬಂದಿದೆ. ಆದ್ದರಿಂದ ನಮ್ಮ ಪವಿತ್ರ ರಾಮಾಯಣ ಗ್ರಂಥವನ್ನು ಬರೆದಿರುವ ವಾಲ್ಮೀಕಿ ಮಹರ್ಷಿಗಳಿಗೆ ನಮಸ್ಕಾರವನ್ನು ಮಾಡಬೇಕು.ಹಾಗೂ ಎಲ್ಲರೂ ಕೂಡ ಈ ದಿನ ನಮ್ಮ ನಾಡ ದೇವತೆಯಾದ ಜಗನ್ಮಾತೆಯಾದ ಚಾಮುಂಡೇಶ್ವರಿ ದೇವಿಗೆ ನಮನವನ್ನು ಸಲ್ಲಿಸಬೇಕು.

ಈ ಪ್ರಾಂತ್ಯದಲ್ಲಿರುವವವರು ಬೆಟ್ಟಕ್ಕೆ ಹೋಗಿ ಬೆಟ್ಟದ ತಾಯಿಯನ್ನು ವ್ಯವಸ್ಥಿತವಾಗಿ ಪ್ರಾರ್ಥನೆ ಮಾಡಿ, ನಮ್ಮಲ್ಲಿರುವ ದುಷ್ಟ ಶಕ್ತಿಗಳನ್ನು ನಿವಾರಣೆ ಮಾಡಿ, ಒಳ್ಳೆಯ ಸದ್ಬುದ್ಧಿ ಮತ್ತು ಜೀವನದಲ್ಲಿ ಅನುಕೂಲಗಳನ್ನು ಕೊಡು, ಐಶ್ವರ್ಯವನ್ನು ಕೊಡು ಎಂದು ಪ್ರಾರ್ಥಿಸಿ ಕೊಳ್ಳಬೇಕು. ಈ ರೀತಿ ಈ ದಿನ ಆಚರಣೆ ಮಾಡಿದರೆ ಶುಭ ಫಲಗಳು ಪ್ರಾಪ್ತಿಯಾಗುತ್ತವೆ.

ಆದ್ದರಿಂದ ಎಲ್ಲರೂ ಈ ದಿನವನ್ನು ಸದುಪಯೋಗಪಡಿಸಿಕೊಳ್ಳಿ. ಭೂಮಿ ತಾಯಿಗೆ ಮೊದಲು ಭಕ್ತಿ,ಶ್ರದ್ಧೆಯಿಂದ ನಮನವನ್ನು ಅರ್ಪಿಸಿ.ನೈವೇದ್ಯವಾಗಿ ಒಂದು ಲೋಟ ಹಾಲನ್ನಾದರು ಅರ್ಪಿಸಿ ಪೂಜಿಸಿ ನಮಸ್ಕಾರ ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top