ಮನೋರಂಜನೆ

ಟಾಲಿವುಡ್‌ನ ಸೂಪರ್‌ಸ್ಟಾರ್‌ ಮಗಳು ಹಾಗೂ ಈ ಪುಟಾಣಿ ಫ್ಯಾನ್ ನೋಡಿ ಥ್ರಿಲ್‌ ಆದ ಆಲಿಯಾ.ಯಾರ್ ಗೊತ್ತಾ ಆ ಪುಟಾಣಿ

ಟಾಲಿವುಡ್ ಚಿತ್ರನಟ ಪ್ರಿನ್ಸ್ ಮಹೇಶ್ ಬಾಬು ಚಿತ್ರರಂಗದಲ್ಲಿ ತುಂಬಾ ಖಾಸಗಿ ವ್ಯಕ್ತಿ. ತನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಎಲ್ಲಿಯೂ ಕೂಡ ಬಹರಂಗವಾಗಿ ಮಾತನಾಡಲ್ಲ. ಮತ್ತು ಯಾವುದೇ ಖಾಸಗಿ ವಿವಾದಲ್ಲಿ ಕೂಡ ಸಿಲುಕದ ವ್ಯಕ್ತಿತ್ವ ಮಹೇಶ್ ಬಾಬು ಅವರದ್ದು.ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್‌ ಪ್ರೀತಿಸಿ ಮದುವೆಯಾದವರು ,ಇವರಿಗೆ ಇಬ್ಬರು ಮಕ್ಕಳು .

ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್‌ ರವರಮಗಳು ಸಿತಾರಾ ನೋಡುವುದಕ್ಕೆ ಮುದ್ದು ಮುದ್ದಾಗಿ ಇರುವ ಈ ಪುಟಾಣಿಗೆ ಬಾಲಿವುಡ್‌ನ ಆಲಿಯಾ ಅಂದ್ರೆ ಪಂಚಪ್ರಾಣ ಅಂತೇ ,ಆಲಿಯಾ ದೊಡ್ಡ ಫ್ಯಾನ್ ಅಂತೇ ಸಿತಾರಾ.
ಮಹೇಶ್‌ಬಾಬು ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ‘ಮಹರ್ಷಿ’ ಚಿತ್ರದ ನಾಯಕಿ ಪೂಜಾ ಹೆಗ್ಡೆ ಜೊತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಹತ್ವದ ಸನ್ನಿವೇಶಗಳನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿದೆ. ಇತ್ತ ಆಲಿಯಾ ಬಿಡುವಿರದ ಕೆಲಸಗಳ ಮಧ್ಯೆ ಸ್ವಲ್ಪ ವಿರಾಮ ‍ಪಡೆದು ತಮ್ಮ ಪ್ರಿಯತಮ ರಣಬೀರ್‌ ಕಪೂರ್ ಮತ್ತು ಅವರ ಕುಟುಂಬದೊಂದಿಗೆ ಕಾಲ ಕಳೆಯಲು ನ್ಯೂಯಾರ್ಕ್‌ಗೆ ಭೇಟಿ ನೀಡಿದ್ದಾರೆ.ಅಲ್ಲಿ ತಾಜ್‌ ಹೋಟೆಲ್ನಲ್ಲಿ ಕಾಲ ಕಳೆಯುತ್ತಿದ್ದ ಆಲಿಯಾಗೆ ಅಚ್ಚರಿ ಕಾದಿತ್ತು. ನ್ಯೂಯಾರ್ಕ್‌ನ ಇನ್ನೊಂದು ತುದಿಯಿಂದ ಬಂದಿದ್ದ ಪುಟಾಣಿ ಅಭಿಮಾನಿಯನ್ನು ಕಂಡು ಅವರು ಥ್ರಿಲ್‌ ಆಗಿದ್ದರು.

 

 

 

ಆ ಪುಟಾಣಿ ಬೇರೆ ಯಾರು ಅಲ್ಲ ಟಾಲಿವುಡ್‌ನ ಸೂಪರ್‌ಸ್ಟಾರ್‌ ಮಹೇಶ್‌ಬಾಬು ಮಗಳು ಸಿತಾರಾ,ಸಿತಾರಾಗೆ ಆಲಿಯಾ ಅಂದರೆ ಅಚ್ಚುಮೆಚ್ಚು ಅಂತೆ. ಹಾಗಾಗಿ ಮಗಳನ್ನು ನಿರಾಸೆಗೊಳಿಸಲಾರದೆ ಮಹೇಶ್‌ ಪತ್ನಿ ನಮ್ರತಾ ಶಿರೋಡ್ಕರ್‌ ತಾಜ್‌ ಹೋಟೆಲ್‌ಗೆ ಕರೆತಂದಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿರುವ ಮಾಜಿ ರೂಪದರ್ಶಿ ನಮ್ರತಾ, ‘ಆಲಿಯಾ, ನನ್ನ ಮಗಳ ಮುಖದಲ್ಲಿ ಅಂತಹುದೊಂದು ನಗು ಮೂಡಿಸಿದ್ದಕ್ಕೆ ದೊಡ್ಡ ಥ್ಯಾಂಕ್ಸ್‌’ ಎಂದು ಬರೆದುಕೊಂಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top