ದೇವರು

ಗುರುವಾರದ ದಿನ ಈ ಪರಿಹಾರಗಳನ್ನು ಮಾಡಿಕೊಳ್ಳೋದ್ರಿಂದ ನಿಮ್ಮ ಜೀವನದಲ್ಲಿರೋ ಕಷ್ಟಗಳೆಲ್ಲ ಮಾಯ ಆಗುತ್ತೆ ಅನ್ನುತ್ತೆ ಶಾಸ್ತ್ರ .

ಗುರುವಾರದ ಅಧಿಪತಿ ಗುರು ಗ್ರಹ .ಗುರು ಗ್ರಹ ಅಂದರೆ ಗುರು ಬೃಹಸ್ಪತಿಗೆಂದೇ ಸೀಮಿತವಾಗಿರುವ ದಿನವದು.ಬೃಹಸ್ಪತಿಯ ಬಣ್ಣ  ಹಳದಿ ಬಣ್ಣ.ಹಾಗೂ ಗುರು ಗ್ರಹವನ್ನು ಅದೃಷ್ಟ ಮತ್ತು ಸಂಪತ್ತು ತಂದುಕೊಡುವ ಗ್ರಹ ಎಂದು ನಂಬಲಾಗಿದೆ. ಗುರು ಗ್ರಹ  ಯಾವ ವ್ಯಕ್ತಿಯ  ಜಾತಕದಲ್ಲಿ ಒಳ್ಳೆಯ ಮನೆಯಲ್ಲಿ ಉಚ್ಛ ಸ್ಥಾನದಲ್ಲಿ ಸ್ಥಿತನಿದ್ದರೆ ಅವರಿಗೆ ಒಳ್ಳೆಯ ಯೋಗ ಹಣ,ಅಧಿಕಾರ,ಸಂಪತ್ತು,ಉತ್ತಮ ಶಿಕ್ಷಣ,ವೃತ್ತಿ,ಪ್ರಾಮಾಣಿಕ ಸಂಗಾತಿಯ ಜೊತೆಗೆ ಬುದ್ದಿವಂತ ಮಕ್ಕಳನ್ನು ಸಹ ಗುರು ಗ್ರಹ ಕರುಣಿಸುವುದು.ಗುರು ಗ್ರಹ ಚಂದ್ರ ಗ್ರಹದ ಜೊತೆಗೆ ಉತ್ತಮವಾದ ಗ್ರಹ ಸ್ಥಿತಿಯನ್ನು  ಹೊಂದಿದ್ದರೆ  ಗಜ ಕೇಸರಿ ಯೋಗವು ಉಂಟಾಗುವುದು.ಆದರೆ ಜಾತಕದಲ್ಲಿ ಗುರು ಗ್ರಹ ನೀಚನಾಗಿದ್ದರೆ ಅದರಿಂದ  ಜೀವನದಲ್ಲಿ ಅನೇಕ ತೊಂದರೆಗಳನ್ನು ಸಹ ತಂದೊಡ್ಡುತ್ತದೆ.ಇಂದು ನಾವು ನಿಮಗೆ ಕೆಲವು ಸರಳವಾದ ಉಪಾಯಗಳನ್ನು ತಿಳಿಸುತ್ತಿದ್ದೇವೆ.ಅವುಗಳಿಂದ  ನಮ್ಮ ಜೀವನದಲ್ಲಿ ಗುರು ಗ್ರಹದಿಂದ ಉಂಟಾದ  ತೊಂದರೆಗಳಿಂದ ಮುಕ್ತಿ  ಪಡೆಯಬಹುದು.

 

 

 

ಗುರುವಾರದ ದಿನ ಹಳದಿ ಬಣ್ಣದ ಬಟ್ಟೆಗಳನ್ನು ತಪ್ಪದೇ ಧರಿಸಿರಿ.ಗುರುವಾರದ ದಿನ ಉಪ್ಪಿಲ್ಲದೇ ಇರುವ ಆಹಾರವನ್ನು ಸೇವಿಸಬೇಕು.ಆ ದಿನ  ಯಾವುದೇ ಪದಾರ್ಥಗಳನ್ನು ಸೇವಿಸಿದರೂ ಸಹ ಅವು ಹಳದಿ ಬಣ್ಣದಲ್ಲಿದ್ದರೆ ಇನ್ನೂ ಒಳ್ಳೆಯದು.ಅವು ಕಡಲೆ ಹಿಟ್ಟಿನ ಲಡ್ಡು,ಮಾವಿನ ಹಣ್ಣು,ಬಾಳೆಹಣ್ಣು ಹೀಗೆ  ಇನ್ನೂ ಮುಂತಾದವು.ಪ್ರತಿ ಗುರುವಾರ ಶಿವಲಿಂಗಕ್ಕೆ ಹಳದಿ ಬಣ್ಣದಲ್ಲಿರುವ ಕಡಲೆ ಹಿಟ್ಟಿನಿಂದ ಮಾಡಿದ ಲಡ್ಡುಗಳನ್ನು ಅರ್ಪಿಸಿ ಮತ್ತು  ಆ ದಿನ ಪೂರ್ತಿ ಸಂಪೂರ್ಣವಾಗಿ ಉಪವಾಸ ವ್ರತ ಕೈಗೊಳ್ಳಿ.ಹೀಗೆ ಮಾಡುವುದರಿಂದ ದೇವರನ್ನು ಗುರು ಗ್ರಹವನ್ನು  ಪ್ರಸನ್ನಗೊಳಿಸಬಹುದು.ನಿಮ್ಮ ಜೀವನದಲ್ಲಿ ನಿಮ್ಮ ಸುತ್ತ ಮುತ್ತ ಇರುವ ನಕಾರಾತ್ಮಕ ಶಕ್ತಿಯಿಂದ ಮುಕ್ತಿರಾಗಬಹುದು.

ಗುರುವಾರದ ದಿನವೇ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡುವುದಕ್ಕೆ ಉತ್ತಮವಾದ ದಿನ ಅವುಗಳಾದ ಬಂಗಾರ,ಅರಿಷಿನ, ಹಳದಿ ಬಣ್ಣದ ಹಣ್ಣುಗಳಾದ ಮಾವಿನ ಹಣ್ಣು,ಬಾಳೆ ಹಣ್ಣು,ಹಲಸಿನ ಹಣ್ಣು, ಬೇಳೆಯನ್ನು ದಾನ ಮಾಡಿದರೆ ಒಳ್ಳೆಯದು.ಗುರುವಾರದ ದಿನ ಸೂರ್ಯ ಹುಟ್ಟುವುದಕ್ಕೂ ಮುನ್ನ ಹಾಸಿಗೆಯಿಂದ   ಎದ್ದೇಳಿ.ನಿಮ್ಮ ದಿನ ನಿತ್ಯದ  ಕರ್ಮಗಳನ್ನು ಮುಗಿಸಿದ ನಂತರ ಭಗವಂತನಾದ ಶ್ರೀ ವಿಷ್ಣುವಿನ ಫೋಟೋ ಅಥವಾ ಮೂರ್ತಿಯ ಮುಂದೆ ಮುಂದೆ  ಒಂದು ಮಣ್ಣಿನ ದೀಪವನ್ನು ಹಚ್ಚಬೇಕು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top