ದೇವರು

ಯಾವುದಾದರೂ ಒಂದು ಗುರುವಾರದ ದಿನ ನಿಂಬೆ ಹಣ್ಣಿನಿಂದ ಹೀಗೆ ಮಾಡಿದ್ರೆ ನಿಮ್ಮ ಸಕಲ ಕಷ್ಟಗಳು ಮಾಯವಾಗುತ್ತಂತೆ

ನಿಂಬೆ ಹಣ್ಣಿನಿಂದ ಒಂದು ಶಕ್ತಿಯುತವಾದ ಚಮತ್ಕಾರ ಮಾಡುವುದನ್ನು ತಿಳಿದುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಒಂದು ಅದ್ಭುತವಾದಂತಹ ಬದಲಾವಣೆಯಾಗುತ್ತದೆ. ನಿಮ್ಮ ದುಃಖ ,ಕಷ್ಟಗಳು ದೂರವಾಗುತ್ತವೆ. ಅಷ್ಟೇ ಅಲ್ಲದೆ ಈ ಪರಿಹಾರದಿಂದ ನಿಮ್ಮ ಗುರು ಬಲವನ್ನು ಕೂಡ ಹೆಚ್ಚಿಸಿಕೊಳ್ಳಬಹುದು .ನಿಮ್ಮ ಇಚ್ಛೆಗಳನ್ನು ಕೂಡ ಈಡೇರಿಸಿ ಕೊಳ್ಳಬಹುದು .ಮನುಷ್ಯನ ಜೀವನದಲ್ಲಿ ಗುರು ಗ್ರಹ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ನಿಮ್ಮ ಜಾತಕದಲ್ಲಿ ಗುರುಬಲ ಇಲ್ಲದೇ ಹೋದಲ್ಲಿ ನೀವು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

 

 

 

ನೀವು ಕೂಡ ಗುರು ಬಲವನ್ನು ಪಡೆದುಕೊಳ್ಳಬೇಕಾದರೆ ಈ ಉಪಾಯವನ್ನು ಮಾಡಿ ಅದೇನೆಂದರೆ ಮೊದಲು ಹಳದಿ ಬಣ್ಣದ ಒಂದು ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಯಾವುದೇ ಕಲೆಗಳು ಇರಬಾರದು. ಈ ನಿಂಬೆ ಹಣ್ಣನ್ನು ನಿಮ್ಮ ಮನೆಯ ದೇವರ ಮುಂದೆ ಇಟ್ಟು “ಓಂ ನಮೋ ಭಗವತೇ ವಾಸುದೇವಾಯ ನಮಃ” ಎಂದು ಈ ಮಂತ್ರವನ್ನು 21 ಬಾರಿ ಜಪಿಸಬೇಕು.ಈ ಮಂತ್ರವನ್ನು ಭಕ್ತಿಯಿಂದ ಜಪಿಸಿದ ನಂತರ ಅದನ್ನು ಬಲಗೈಯಿಂದ ಎತ್ತಿಕೊಂಡು ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು . ನಂತರ ಅದೇ ನಿಂಬೆಹಣ್ಣನ್ನು ನಿಮ್ಮ ತಲೆಯ ಬಲದಿಂದ ಎಡಕ್ಕೆ ಅಂದರೆ ಉಲ್ಟಾ ಸುತ್ತಬೇಕು. ಅಂದರೆ ಗಡಿಯಾರ ಯಾವ ಕಡೆ ತಿರುಗುತ್ತದೆ , ಅದಕ್ಕೆ ವಿರುದ್ಧವಾಗಿ ಏಳು ಬಾರಿ ಸುತ್ತಬೇಕು.ಮತ್ತೆ ಅದೇ ನಿಂಬೆಹಣ್ಣನ್ನು ದೇವರ ಕೋಣೆಯಲ್ಲಿ ದೇವರ ಮುಂದೆ ಇಟ್ಟು ಮಾರನೇ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ನಿಮ್ಮ ದೇವರ ಪೂಜೆಯನ್ನು ಮುಗಿಸಿ ಮತ್ತೆ ಅದನ್ನು ಅಲ್ಲಿಂದ ಎತ್ತಿಕೊಂಡು ಆ ನಿಂಬೆಹಣ್ಣನ್ನು ನಾಲ್ಕು ಭಾಗಗಳಾಗಿ ಕತ್ತರಿಸಬೇಕು, ನಂತರ ಸ್ವಲ್ಪ ಕುಂಕುಮವನ್ನು ನಾಲ್ಕು ಭಾಗಕ್ಕೆ ಹಚ್ಚಬೇಕು. ಅದಾದ ನಂತರ ಈ ನಾಲ್ಕು ಭಾಗವನ್ನು ನಿಮ್ಮ ಮನೆಯ ಒಂದೊಂದು ದಿಕ್ಕಿನಲ್ಲಿ , ನಾಲ್ಕು ದಿಕ್ಕಿಗೂ ಇಡಬೇಕು.

ನಂತರ ನೀವು ಅದನ್ನು ನೋಡದೆ ಮರಳಿ ಬರಬೇಕು. ಈ ನಾಲ್ಕು ಭಾಗಗಳಲ್ಲಿ ಇಟ್ಟಾಗ ನಿಧಾನವಾಗಿ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಯನ್ನು ಸ್ವತಹ ನೀವೇ ಕಾಣುತ್ತೀರ.ಇದೊಂದು ಪ್ರಯತ್ನವನ್ನು ನೀವು ಕೂಡ ಮಾಡಿ ನೋಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top