ಸಮಾಚಾರ

ಮಾರಣಾಂತಿಕ ಕಾಯಿಲೆಯಿಂದಾಗಿ ಚಾಂಪಿಯನ್ ಪಟ್ಟ ತ್ಯಜಿಸಿ WWEಗೆ ನಿವೃತ್ತಿ ಘೋಷಿಸಿದ ರೋಮನ್ ರೈನ್ಸ್

ಎಲ್ಲಾ ವರ್ಗದ ಜನರು ಕುತೂಹಲದಿಂದ ನೋಡುವ ಹೊಡೆದಾಡುವ ಆಟವೇ ವರ್ಲ್ಡ್​ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE). ಥೇಟು ಹುಚ್ಚು ಹಿಡಿದ ಕಾಡುಪ್ರಾಣಿಳಂತೆ ಕಚ್ಚಾಡುವ ರಾಕ್ಷಸ ರೂಪದ ದೈತ್ಯದೇಹಿ ದಾಂಡಿಗರು ಮಾಡುವ ಅಟಾಟೋಪಗಳು ಫೇಕ್ ಎಂದು ಜಾಹೀರಾಗಿದ್ದರೂ; ಅದೆಷ್ಟೇ ತಕರಾರುಗಳು ಇದ್ದರೂ ಇದು ಈಗಲೂ ಅತ್ಯಂತ ಜನಪ್ರಿಯವಾಗಿದೆ. ಇಂಥಾ WWE ಅಭಿಮಾನಿಗಳಿಗೆ ರೋಮನ್ ರೈನ್ಸ್ ತುಂಬಾನೇ ಪರಿಚಿತರಿರುತ್ತಾರೆ.. ‘ಪ್ರಿನ್ಸ್’ ಖ್ಯಾತಿಯ ಸ್ಟಾರ್ ರಸ್ಲರ್ ಅಮೆರಿಕಾದ ರೋಮನ್ ರೇನ್ಸ್ ಅತ್ಯಂತ ಜನಪ್ರಿಯ ಮತ್ತು ಅಚ್ಚುಮೆಚ್ಚು.

ಇಂಥಾ ರೋಮನ್ ರೈನ್ಸ್ ಅಭಿಮಾನಿಗಳಿಗೆ ಸ್ಯಾಡ್ ನ್ಯೂಸ್ ಕೊಟ್ಟಿದ್ದಾನೆ. ಚಾಂಪಿಯನ್ ಸ್ಟಾರ್ ರೋಮನ್ ರೈನ್ಸ್ ತಮಗೆ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್) ಇರುವ ಕಾರಣ ತನ್ನ ವಿಶ್ವ ಚಾಂಪಿಯನ್ ಪಟ್ಟವನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಘೊಷಿಸಿದ್ದಾರೆ. ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ರೈನ್ಸ್ ಸೋಮವಾರ ತಮ್ಮ ಅಭಿಮಾನಿಗಳಿಗೆ ಈ ವಿಷಯವನ್ನು ಖಚಿತಪಡಿಸಿದ್ದಾರೆ.”ನಾನು ಲ್ಯುಕೇಮಿಯಾದಿಂದ ಬಳಲುತ್ತಿದ್ದೇನೆ. ಕಳೆದ 11 ವರ್ಷಗಳಿಂದ ನನಗೆ ಈ ರೋಗ ಬಾಧಿಸುತ್ತಿದೆ. ಹೀಗಾಗಿ WWEನಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ” ಅವರು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಅವರು 2008ರಲ್ಲಿ ಮೊದಲ ಬಾರಿಗೆ ಲುಕೆಮಿಯಾ ಚಿಕಿತ್ಸೆಗೆ ಒಳಗಾದೆ. ಆದರೆ, ಉಪಶಮನಗೊಂಡಿದ್ದ ರೋಗ ಮತ್ತೆ ಮರುಕಳಿಸಿದ್ದು, ಡಬ್ಲ್ಯು.ಡಬ್ಲ್ಯು.ಇನಿಂದ ಹೊರಗುಳಿಯಬೇಕಾಗಿದೆ. ಆದರೆ ಇದಕ್ಕೆ ನನ್ನ ವೃತ್ತಿ ಜೀವನವನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ. ರೋಗವನ್ನು ಗೆದ್ದು ಮತ್ತೆ ಶೀಘ್ರದಲ್ಲಿ ರಿಂಗ್​ನಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದ ರೋಮನ್​, ಪ್ರಪಂಚದಾದ್ಯಂತ ಇರುವ ಅಭಿಮಾನಿಗಳನ್ನು ಮಿಸ್​ ಮಾಡಿಕೊಳ್ಳುತ್ತೇನೆ ಎಂಬ ಬೇಸರವನ್ನೂ ವ್ಯಕ್ತಪಡಿಸಿದರು.

ಒಬ್ಬಂಟಿಯಾಗಿ ಬಂದರೂ, ತಂಡದ ಜೊತೆಗಿದ್ದರೂ ರೇನ್ಸ್ ರಸ್ಲಿಂಗ್ ನಲ್ಲಿ ಮಿಂಚುತ್ತಿದ್ದವರು. ತಂಡ ಸ್ಪರ್ಧೆಯಲ್ಲಿ ಹೆಚ್ಚುಸಾರಿ ಕಾಣಿಸಿಕೊಳ್ಳುತ್ತಿದ್ದ ರೋಮನ್, ಯುನಿವರ್ಸಲ್ ಚಾಂಪಿಯನ್ ಎನಿಸಿಕೊಂಡಿದ್ದವರು. ಅಂದಹಾಗೆ ರೇನ್ಸ್ ಮಾಜಿ ಫುಟ್ಬಾಲ್ ಆಟಗಾರರೂ ಹೌದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top