ಮನೋರಂಜನೆ

‘ದಿ ವಿಲನ್’ ಯಶಸ್ಸಿಗೆ ಕೋಣವನ್ನು ಕಡಿದು ಸಂಭ್ರಮಿಸಿದವರಿಗೆ ಎಂಥಾ ಗತಿ ಬಂತು ನೋಡಿ.

ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಕೇವಲ ನಾಲ್ಕೇ ದಿನದಲ್ಲಿ ಬರೋಬ್ಬರಿ 58ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಸ್ಯಾಂಡಲ್​ವುಡ್​ನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ‘ದಿ ವಿಲನ್’ ಸಿನಿಮಾ ಧೂಳೀಪಟ ಮಾಡಿದ್ದು ಇಬ್ಬರು ಘಟಾನುಘಟಿ ಸ್ಟಾರ್​​ ನಟರು ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯಿಸಿದ್ದಾರೆ.. ಕನ್ನಡ ಸಿನಿಮಾವೊಂದು ಈ ಪಾಟಿ ಕಲೆಕ್ಷನ್ ಮಾಡಿರುವುದು ನಿಜಕ್ಕೂ ಸಂತೋಷವೇ.

ಆದರೇ ಕಿಚ್ಚ ಸುದೀಪ್ ಅಭಿಮಾನಿಗಳು ಕೋಣ, ಕುರಿಗಳಂತ ಪ್ರಾಣಿಗಳನ್ನು ಬಲಿ ಕೊಟ್ಟು ಕಟೌಟ್ ಹಾಗೂ ಪೋಸ್ಟರ್ ಗೆ ರಕ್ತದ ಅಭಿಷೇಕ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. “ಈ ರೀತಿಯ ಕೃತ್ಯಗಳನ್ನು ನಡೆಸುತ್ತಿರುವುದು ನಿಜಕ್ಕೂ ಅಮಾನವೀಯ. ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು” ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕ್ರಮ ಕೈಗೊಂಡಿರುವ ಪೊಲೀಸರು ಆ ಅಪಾಪೋಲಿಗಳ ಹೆಡೆಮುರಿ ಕಟ್ಟಿ ಎಳೆದುತಂದಿದ್ದಾರೆ.. ಅಲ್ಲದೇ ತಮ್ಮ ಲಾಠಿ ಏಟಿನ ರುಚಿಯನ್ನು ಕೂಡ ಆ ಪಾಪಿಗಳಿಗೆ ಪೊಲೀಸರು ತೋರಿಸಿದ್ದಾರೆ. ಕೋಣವನ್ನು ಕಡಿದು ಸಂಭ್ರಮಿಸಿದವರಿಗೆ ಪೊಲೀಸರು ಯಾವ ರೀತಿ ಟ್ರೀಟ್ ಮೆಂಟ್ ನೀಡಿದ್ದಾರೆ ಎಂದು ಈ ವಿಡಿಯೋದಲ್ಲಿ ನೋಡಿ.

 

ಕೋಣ ಕಡಿದವರ ಪರಿಸ್ಥಿತಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top