fbpx
ಮನೋರಂಜನೆ

#MeToo ವಿವಾದದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಹೇಳಿದ್ದೇನು?

ಸಿನಿಮಾ ಹೀರೋಯಿನ್ನುಗಳಿಗೆ ಥರಥರದ ಕಾಟ ಕಾಡುವ ಪ್ರವೃತ್ತಿಯ ಸರಣಿಗಳು ಈಗ ದೇಶದೆಲ್ಲೆಡೆ ಬಿಚ್ಚಿಕೊಳ್ಳುತ್ತಿವೆ, ಇತ್ತೀಚಿಗೆ ಬಾಲಿವುಡ್ ನಟಿ ತನುಶ್ರೀ ದತ್ತ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದೇ ತಡ ಮೀಟೂ ಎಂಬ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲಕ ಚಿತ್ರರಂಗದ ನಟಿಯರು ತಾವೇ ಕಂಡುಂಡ ನೋವುಗಳನ್ನ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಲಾರಂಭಿಸಿದ್ದಾರೆ. ಈ ಮೂಲಕ ಸಭ್ಯ ನಟರು ಎಂಬ ಲೇಬಲ್ಲು ಮೆತ್ತಿಕೊಂಡು ಓಡಾಡುತ್ತಿರುವ ಸ್ಟಾರ್ ನಟರ ಅಸಲಿ ಮುಖವಾಡಗಳು ಕಳಚಿ ಬೀಳಲಾರಂಭಿಸಿವೆ.

ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ಸ್ಯಾಂಡಲ್‌ವುಡ್‌ನತ್ತಲೂ ಬಂದಿದೆ. ಕನ್ನಡದ ನಟಿಯರನೇಕರು ಕೂಡ ತಮಗಾದ ಲೈಂಗಿಕ ಕಿರುಕುಳಗಳ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಇದೀಗ ನಟ ಅರ್ಜುನ್‌ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್‌ ಮತ್ತು ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಸಂಜನಾ ಆಪಾದನೆ ಮಾಡಿದ್ದಾರೆ. ಮೀಟೂ ಅಭಿಯಾನವು ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಇದೇ ಮೊದಲ ಬಾರಿಗೆ ನಟ ಶಿವರಾಜ್‌ಕುಮಾರ್‌ ಮೀಟೂ ಕುರಿತು ಮಾತನಾಡಿದ್ದಾರೆ.

ಶಿವಣ್ಣ ಪ್ರತಿಕ್ರಿಯೆ:
ಮೀಟೂ ಬಗ್ಗೆ ಮಾಧ್ಯಮಪ್ರತಿನಿಧಿಗಳ ಜೊತೆ ಮಾತನಾಡಿದ ಶಿವರಾಜ್ ಕುಮಾರ್ “ಮೀಟೂ ಆರೋಪಗಳು ಅವರವರ ಭಾವನೆಗಳ ಮೇಲೆ ನಿರ್ಧಾರವಾಗುತ್ತವೆ. ಅವು ತಪ್ಪಾ? ಸರಿನಾ? ಎಂದು ಹೇಳಲಾಗುವುದಿಲ್ಲ..ಎಲ್ಲರೂ ಒಳ್ಳೆಯವರೇ,.ನಾನು ಯಾರನ್ನು ನೋಯಿಸಲು ಇಷ್ಟಪಡುವುದಿಲ್ಲ. ಈ ವಿವಾದ ಆದಷ್ಟು ಬೇಗ ಬಗೆಹರಿಯಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ,. ಇನ್ನೂ ಮೀಟೂ ಬಗ್ಗೆ ಮಾತನಾಡಲು ಆಗಲ್ಲ. ಚಿತ್ರರಂಗಕ್ಕೆ ಸಂಬಂಧಿಸಿದ ವಿಚಾರಗಳೆಂದರೆ ನೋವಾಗುತ್ತದೆ. ವಾಣಿಜ್ಯ ಮಂಡಳಿಯಲ್ಲಿ ಆದಷ್ಟು ಬೇಗ ಸಮಸ್ಯೆ ಬಗೆಹರಿಯುತ್ತದೆ. ಯಾಕೆಂದರೆ ಮಂಡಳಿ ಮೇಲೆ ಒಂದು ಗೌರವವಿದ್ದು, ನಮ್ಮಲ್ಲೇ ಎಲ್ಲ ವಿಚಾರಗಳನ್ನು ಬಗೆಹರಿಸಿಕೊಳ್ಳುತ್ತೇವೆ.” ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top