ಮನೋರಂಜನೆ

ಸಂಚಲನ ಸೃಷ್ಟಿಸುತ್ತಿದೆ ‘ಹೆಬ್ಬುಲಿ’ ನಟಿ ಸಿಡಿಸಿದ #Metoo ಬಾಂಬ್.

ಸಿನಿಮಾ ಹೀರೋಯಿನ್ನುಗಳಿಗೆ ಥರಥರದ ಕಾಟ ಕಾಡುವ ಪ್ರವೃತ್ತಿಯ ಸರಣಿಗಳು ಈಗ ದೇಶದೆಲ್ಲೆಡೆ ಬಿಚ್ಚಿಕೊಳ್ಳುತ್ತಿವೆ, ಅಂತೆಯೇ ಹೀಗೆ ಧ್ವನಿ ಎತ್ತಿದ ನಟಿಯರ ಧ್ವನಿಯಡಗಿಸುವ ಪ್ರಯತ್ನಗಳೂ ಭರ್ಜರಿಯಾಗಿ ನಡೆಯುತ್ತಿವೆ..ಇತ್ತೀಚಿಗೆ ಬಾಲಿವುಡ್ ನಟಿ ತನುಶ್ರೀ ದತ್ತ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದೇ ತಡ ಮೀಟೂ ಎಂಬ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲಕ ಚಿತ್ರರಂಗದ ನಟಿಯರು ತಾವೇ ಕಂಡುಂಡ ನೋವುಗಳನ್ನ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಲಾರಂಭಿಸಿದ್ದಾರೆ. ಈ ಮೂಲಕ ಸಭ್ಯ ನಟರು ಎಂಬ ಲೇಬಲ್ಲು ಮೆತ್ತಿಕೊಂಡು ಓಡಾಡುತ್ತಿರುವ ಸ್ಟಾರ್ ನಟರ ಅಸಲಿ ಮುಖವಾಡಗಳು ಕಳಚಿ ಬೀಳಲಾರಂಭಿಸಿವೆ.

 

 

ಬಾಲಿವುಡ್‌ನಲ್ಲಿ ಹುಟ್ಟಿಕೊಂಡ ಮೀ ಟೂ ಅಭಿಯಾನ ದಕ್ಷಿಣಕ್ಕೂ ಬಂದಿದೆ. ದಕ್ಷಿಣ ಭಾರತದ ನಟಿಯರನೇಕರು ಕೂಡ ತಮಗಾದ ಲೈಂಗಿಕ ಕಿರುಕುಳಗಳ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ನೊಂದವರ ಬೆನ್ನಿಗೆ ನಿಂತಿದ್ದಾರೆ. ಅಂತೆಯೇ ಹೀಗೆ ಧ್ವನಿ ಎತ್ತಿದ ನಟಿಯರ ಧ್ವನಿಯಡಗಿಸುವ ಪ್ರಯತ್ನಗಳೂ ಭರ್ಜರಿಯಾಗಿ ನಡೆಯುತ್ತಿವೆ.. ಇದೀಗ ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಸ್ಟಾರ್ ನಟಿ ಅಮಲಾ ಪೌಲ್ ಕೂಡ ಮೀ ಟೂ ಬಾಂಬ್ ಸಿಡಿಸಿದ್ದಾರೆ.

ತಿರುಟ್ಟು ಪಾಯಲೆ 2 ಚಿತ್ರದಲ್ಲಿ ನಟಿಸುವ ವೇಳೆ ಈ ಚಿತ್ರದ ನಿರ್ದೇಶಕ ಸುಶಿ ಗಣೇಶನ್ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕ ಸುಶಿ ತಮ್ಮ ಬಳಿ ಕೆಟ್ಟದಾಗಿ ವರ್ತಿಸಿದ್ದು ಇದು ಚಿತ್ರರಂಗದಲ್ಲಿ ನನಗಾದ ಅತ್ಯಂತ ಕೆಟ್ಟ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಮಾತು ನಡತೆ ಎಲ್ಲದಲ್ಲಿರಯೂ ಕೂಡ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ಅಮಲಾ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಅಮಲಾ ಪಾಲ್ ಅವರ ಈ ಆರೋಪ ಕಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top