ಮನೋರಂಜನೆ

ತಾರಕಕ್ಕೇರಿದ ‘ಗಂಡ ಹೆಂಡತಿ’ ವಿವಾದ- “ರವಿ ಶ್ರೀವತ್ಸ ಒಬ್ಬ ಫ್ಲಾಪ್ ಡೈರೆಕ್ಟರ್” ಎಂದ ಸಂಜನಾ.

ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯಂತೆ ಎದ್ದಿರುವ #MeToo ಅಭಿಯಾನ ವಿವಾದದ ಕೇಂದ್ರ ಬಿಂದುವಾಗುತ್ತಿವೆ. ಇತ್ತೀಚೆಗಷ್ಟೆ ನಟಿ ಸಂಜನಾ ಗಲ್ರಾಣಿ ಅವರು ನಿರ್ದೇಶಕ ರವಿ ಶ್ರೀವತ್ಸ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ‘ಗಂಡ ಹೆಂಡತಿ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಿರ್ದೇಶಕ ತನಗೆ ಮುಜುಗರವಾಗುವಂತೆ ಚುಂಬನ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಲು ತನ್ನ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ವಿರೋಧಿಸಿದಕ್ಕೆ ಅವರು ತನಗೆ ಬೆದರಿಕೆ ಹಾಕಿ 50ಕ್ಕೂ ಹೆಚ್ಚು ಚುಂಬನದ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಅದು ಅವರ ಮೊದಲ ಸಿನಿಮಾ, ಆಗ ಅವರಿಗೆ 16 ವರ್ಷವಾಗಿದ್ದ ಕಾರಣ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಇದ್ದರು ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಿರ್ದೇಶಕ ರವಿ ಶ್ರೀವತ್ಸ “ನಟಿ ಸಂಜನಾ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. 12 ವರ್ಷಗಳ ನಂತರ ಸುಮ್ಮನೆ ಆರೋಪ ಮಾಡುತ್ತಿದ್ದಾರೆ.” ಎಂದು ಫೇಸ್ಬುಕ್ ಮೂಲಕ ಹೇಳಿಕೊಂಡಿದ್ದರು. ಅಲ್ಲದೇ ನೆನ್ನೆ ಸುದ್ದಿಗೋಷ್ಠಿ ನಡೆಸಿ ರವಿ ಶ್ರೀವತ್ಸ ಅವರು ಪಬ್ಲಿಸಿಟಿಗಾಗಿ ನಟಿ ಸಂಜನಾ ಈ ರೀತಿ ಮಾಡುತ್ತಿದ್ದಾರೆ. ಇಡೀ ಚಿತ್ರರಂಗ ಸಂಜನರನ್ನು ಪ್ಲಾಪ್ ನಟಿ ಎಂದು ಕರೆಯುತ್ತದೆ. ಆದರೆ ನನ್ನನ್ನು ಯಾರೂ ಪ್ಲಾಪ್ ನಿರ್ದೇಶಕರೆಂದು ಕರೆಯುವುದಿಲ್ಲ. ಎಂದು ಟೀಕಿಸಿದರು. ಅವರ ಟೀಕೆಗೆ ಪ್ರತಿಕ್ರಿಸಿರುವ ಸಂಜನಾ ರವಿ ಶ್ರೀವತ್ಸ ಅವ್ರಿಗೆ ತಿರುಗೇಟು ನೀಡಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ಸಂಜನಾ “ರವಿ ಶ್ರೀವತ್ಸ ಫ್ಲಾಪ್ ನಿರ್ದೇಶಕ. ಮನೆಯಲ್ಲಿ ಕುಳಿತು ಉಪ್ಪಿನಕಾಯಿ ಹಾಕುವವರು ಸುಳ್ಳು ಹೇಳುತ್ತಿದ್ದಾರೆ ರವಿ 1 ಲಕ್ಷ ರೂ. ಸಾಲ ಬೇಕೆಂದು ಕೇಳಿದ್ದರು. ಆಗ ನಾನು ನೀವು ನನ್ನ ವೆಬ್ ಸೀರಿಸ್ ಸಿನಿಮಾ ಮಾಡಿದರೆ ಸಂಬಳವಾಗಿ ನಿಮಗೆ 1 ಲಕ್ಷ ನೀಡುತ್ತೇನೆ ಎಂದು ತಿಳಿಸಿದ್ದೆ.. ನಾನು ಹಲವು ನಿರ್ದೇಶಕರ ಜತೆ ನಟಿಸಿದ್ದೇನೆ. ಆದರೆ ಅವರ ಮೇಲೆಲ್ಲಾ ನಾನು ಆರೋಪಗಳನ್ನು ಮಾಡಿಲ್ಲ. ರವಿ ಶ್ರೀವತ್ಸ ಓರ್ವ ಸ್ಯಾಡಿಸ್ಟ್ ಅದಕ್ಕಾಗಿಯೇ ನಾನು ಅವರ ಮೇಲೆ ಕಿರುಕುಳದ ಆರೋಪ ಮಾಡಿದ್ದೇನೆ ಎಂದರು.” ಎಂಬುದಾಗಿ ಸಂಜನಾ ಹೇಳಿದ್ದಾರೆ.

ನೀವು ನನಗೆ ಅವಕಾಶ ಇಲ್ಲ ಎಂದು ಹೇಳುತ್ತಿದ್ದೀರಿ ನಿಮಗೆ ಗೊತ್ತಾ? ನಾನು ಬಾಹುಬಲಿ ಚಿತ್ರ ನಿರ್ಮಾಪಕರ ಜತೆ ಕೆಲಸ ಮಾಡುತ್ತಿದ್ದೇನೆ. 4 ಭಾಷೆಗಳಲ್ಲಿ ಬರುತ್ತಿರುವ ಮೆಗಾ ಬಜೆಟ್ ಶೋನಲ್ಲಿ ನಟಿಸುತ್ತಿದ್ದೇನೆ. ತೆಲುಗಿನಲ್ಲಿ ಸ್ವರ್ಣಖಡ್ಗಂ, ತಮಿಳಿನಲ್ಲಿ ಇಳಯತಳಪತಿ, ಬೆಂಗಾಲಿಯಲ್ಲಿ ಶೋನಾ ತಲ್ವಾರ್, ಒಡಿಯಾದಲ್ಲಿ ಸ್ವರ್ಣಖಡ್ಗ. ಅದರಲ್ಲಿನನ್ನದು ವೀರರಾಣಿಯ ಪಾತ್ರ.

ನಾನು ಪ್ರಭಾಸ್, ಮೋಹನ್‍ಲಾಲ್, ಮಮ್ಮೂಟಿ, ಶಿವಣ್ಣ, ದರ್ಶನ್ ಸರ್, ಪವನ್ ಕಲ್ಯಾಣ್ ಸರ್ ಮುಂತಾದ ದೊಡ್ಡ ನಟರ ಜೊತೆ ನಟಿಸಿದ್ದೇನೆ. ನಾನು ಸದ್ಯ 45ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನನಗೆ ಇಂತಹ ಚೀಪ್ ಪುಟಗೋಸಿ ಪಬ್ಲಿಸಿಟಿಯ ಅವಶ್ಯಕತೆ ಇಲ್ಲ. ಚಲನಚಿತ್ರೋದ್ಯಮವು ಉತ್ತಮ ಸ್ಥಳವಾಗಿದೆ, ನನ್ನ 45 ಚಿತ್ರಗಳಲ್ಲಿ ಕೇವಲ ಒಂದು ಚಿತ್ರದಲ್ಲಿ ಮಾತ್ರ ಕೆಟ್ಟ ಅನುಭವವಾಗಿದೆ – ಹಾಗಾಗಿ ನನ್ನ ಅನುಭವವನ್ನು # ಮೀಟೂ ಅಭಿಯಾನದಲ್ಲಿ ಬಹಿರಂಗಪಡಿಸಿದ್ದೇನೆ” ಎಂದು ಸಂಜನಾ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top