ಮನೋರಂಜನೆ

ಸೆನ್ಸಾರ್‌ಗೆ ರೆಡಿಯಾದ ಮುನಿರತ್ನ ಕುರುಕ್ಷೇತ್ರ- ದುರ್ಯೋಧನನ ಆಗಮನಕ್ಕೆ ಇನ್ನು ಲೇಟ್ ಆಗುತ್ತಾ?

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಯಾವಾಗಲೋ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಲೇ ಇದೆ.. ಆದರೆ ಒಂದಲ್ಲ ಒಂದು ಕಾರಣ ಹೇಳುತ್ತಾ ಚಿತ್ರವನ್ನು ಮುಂದೂಡುತ್ತಲೇ ಬಂದಿದ್ದಾರೆ. ಕುರುಕ್ಷೇತ್ರ ಸಿನಿಮಾ ಇಷ್ಟೊಂದು ಲೇಟ್ ಆಗುತ್ತಿರುವುದಕ್ಕೆ ಸ್ವತಃ ದರ್ಶನ್ ಅಭಿಮಾನಿಗಳಲ್ಲಿ ಅಸಹನೆ ಮೂಡಿಸಿರುವುದು ಸುಳ್ಳಲ್ಲ!

ಇಂಥಾ ಕುರುಕ್ಷೇತ್ರದ ಆಗಮನದ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೊಂದು ಸುದ್ದಿ ಬಂದಿದೆ. ಮುನಿರತ್ನ ಕುರುಕ್ಷೇತ್ರ ಚಿತ್ರ 2D ಮತ್ತು 3D ಆವೃತ್ತಿಯಲ್ಲಿ ಬರುತ್ತಿದ್ದು ಚಿತ್ರದ ಸದ್ಯ 2D ಕೆಲಸಗಳು ಮುಗಿದಿರುವುದರಿಂದ ಸೆನ್ಸಾರ್’ಗೆ ಕಳುಹಿಸಲು ಚಿತ್ರತಂಡ ರೆಡಿಯಾಗಿದೆ. ಕೆಲವೇ ದಿನಗಳಲ್ಲಿ 2ಡಿ ಆವೃತ್ತಿ ಸೆನ್ಸಾರ್ ಮಂಡಳಿಯನ್ನೂ ತಲುಪಲಿದೆ. ಇನ್ನು 3ಡಿ ಆವೃತ್ತಿ ಶೇಕಡ 70ರಷ್ಟು ಕೆಲಸಗಳು ಆಗಿವೆ.

“ಕುರುಕ್ಷೇತ್ರ ದೊಡ್ಡ ಸಿನಿಮಾ. ಇಲ್ಲಿ ಕೆಲಸ ಮಾಡಿರುವವರೆಲ್ಲಾ ತುಂಬಾ ದೊಡ್ಡವರು. ಇಡೀ ಚಿತ್ರಕ್ಕೆ ನಾವು ಅಂದುಕೊಂಡಂತೆ ಗ್ರಾಫಿಕ್ಸ್ ವರ್ಕ್ ಬರುತ್ತಿಲ್ಲ. ಪದೇ ಪದೇ ರೀ ವರ್ಕ್ ಮಾಡುತ್ತಿದ್ದೇವೆ. ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ಸಿಜಿ ಕೆಲಸ ನಡೆಯುತ್ತಿವೇ.. ಈಗ ಮಾಡಿರುವ ಸಿಜಿ ಕೆಲಸ ನನಗೆ ಇಷ್ಟವಾಗುತ್ತಿಲ್ಲ. ಕುರುಕ್ಷೇತ್ರ ತಡವಾಗುತ್ತಿರುವುದಕ್ಕೆ ಇದೇ ಮುಖ್ಯ ಕಾರಣ ಎನ್ನುತ್ತಾರೆ ನಿರ್ಮಾಪಕ ಮುನಿರತ್ನ.

“ಒಬ್ಬ ನಿರ್ಮಾಪಕನಾಗಿ ನನಗೇ ಖುಷಿ ಕೊಡುವಷ್ಟು ಕೆಲಸ ಮಾಡುವವರೆಗೂ ಈ ಚಿತ್ರವನ್ನು ನಾನು ತೆರೆಗೆ ತರಲ್ಲ. ಇದರ ನಡುವೆ ಬೇರೆ ಯಾವ ಚಿತ್ರಗಳು ತೆರೆಗೆ ಬಂದರೂ ನಾನು ಆ ಬಗ್ಗೆ ಯೋಚಿಸಲ್ಲ. ಅದನ್ನು ಯಾವ ಕ್ವಾಲಿಟಿಯಲ್ಲಿ ತೋರಿಸಬೇಕೋ ಎನ್ನುವ ಕನಸು ನನಗಿದೆ. ಅದು ಈಡೇರುವ ತನಕ ಕುರುಕ್ಷೇತ್ರ ತೆರೆ ಮೇಲೆ ಬರಲ್ಲ. ” ಎನ್ನುತ್ತಾರೆ ನಿರ್ಮಾಪಕ ಮುನಿರತ್ನ. ಅಲ್ಲಿಗೆ ಮುನಿರತ್ನ ಅವ್ರಿಗೆ ಸಮಾಧಾನ ಆಗುವವರೆಗೂ ದರ್ಶನ್ ಅಭಿಮಾನಿಗಳಿಗೆ ದುರ್ಯೋಧನನನ್ನು ನೋಡುವ ಭಾಗ್ಯ ಸಿಗುದಿಲ್ಲ..

ಕುರುಕ್ಷೇತ್ರ ಚಿತ್ರಕ್ಕೆ ಮುಂಬೈ, ಹೈದರಾಬಾದ್, ಚೆನ್ನೈ ಬೆಂಗಳೂರಿನಲ್ಲಿ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿವೆಯಂತೆ.. ನವೆಂಬರ್ 05ರ ವೇಳೆಗೆಲ್ಲಾ ಅದು ಕಂಪ್ಲೀಟ್ ಆಗಲಿದೆಯಂತೆ. ಇನ್ನು ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿದಿರುವ ಕಾರಣ ಮುನಿರತ್ನ ಅವರು ನವೆಂಬರ್ 10 ರಂದು 2ಡಿ ವರ್ಷನ್ ನಲ್ಲಿ ಕುರುಕ್ಷೇತ್ರ ನೋಡಲಿದ್ದಾರಂತೆ. ನೋಡಿದಾಗ ಅವರಿಗೆ ತೃಪ್ತಿಯಾದ್ರೆ, ತಕ್ಷಣವೇ ರಿಲೀಸ್ ಡೇಟ್ ಫಿಕ್ಸ್ ಮಾಡ್ತಾರಂತೆ… ಆದಷ್ಟು ಬೇಗ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top