ಮನೋರಂಜನೆ

ನಟಿ ಸಂಜನಾ ಬಗ್ಗೆ ಹೊಸ ಬಾಂಬ್ ಸಿಡಿಸಿದ ‘ಗಂಡಹೆಂಡತಿ’ ನಿರ್ದೇಶಕ ರವಿಶ್ರೀವತ್ಸ.

ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯಂತೆ ಎದ್ದಿರುವ #MeToo ಅಭಿಯಾನ ವಿವಾದದ ಕೇಂದ್ರ ಬಿಂದುವಾಗುತ್ತಿವೆ. ಇತ್ತೀಚೆಗಷ್ಟೆ ನಟಿ ಸಂಜನಾ ಗಲ್ರಾಣಿ ಅವರು ನಿರ್ದೇಶಕ ರವಿ ಶ್ರೀವತ್ಸ ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ‘ಗಂಡ ಹೆಂಡತಿ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಿರ್ದೇಶಕ ತನಗೆ ಮುಜುಗರವಾಗುವಂತೆ ಚುಂಬನ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಲು ತನ್ನ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ವಿರೋಧಿಸಿದಕ್ಕೆ ಅವರು ತನಗೆ ಬೆದರಿಕೆ ಹಾಕಿ 50ಕ್ಕೂ ಹೆಚ್ಚು ಚುಂಬನದ ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಅದು ಅವರ ಮೊದಲ ಸಿನಿಮಾ, ಆಗ ಅವರಿಗೆ 16 ವರ್ಷವಾಗಿದ್ದ ಕಾರಣ ಏನು ಮಾಡಬೇಕೆಂದು ತೋಚದೆ ಸುಮ್ಮನೆ ಇದ್ದರು ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಿರ್ದೇಶಕ ರವಿ ಶ್ರೀವತ್ಸ “ನಟಿ ಸಂಜನಾ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. 12 ವರ್ಷಗಳ ನಂತರ ಸುಮ್ಮನೆ ಆರೋಪ ಮಾಡುತ್ತಿದ್ದಾರೆ.” ಎಂದು ಫೇಸ್ಬುಕ್ ಮೂಲಕ ಹೇಳಿಕೊಂಡಿದ್ದರು. ಅಲ್ಲದೇ ನೆನ್ನೆ ಸುದ್ದಿಗೋಷ್ಠಿ ನಡೆಸಿ ರವಿ ಶ್ರೀವತ್ಸ ಅವರು ನಟಿ ಸಂಜನಾ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದರು.. ಅಷ್ಟೇ ಅಲ್ಲದೆ ಸಂಜನಾ ಬಗ್ಗೆ ರವಿ ಶ್ರೀವತ್ಸ ಹೊಸ ಬಾಂಬ್ ಒಂದನ್ನು ಕೂಡ ಸಿಡಿಸಿದ್ದಾರೆ. ಅದೇನು ಅಂತೀರಾ? ಮುಂದೆ ಓದಿ.

ಗಂಡ-ಹೆಂಡತಿ ಸಿನಿಮಾ ಯಶಸ್ಸಿನ ನಂತರ ನಟಿ ಸಂಜನಾ 2012ರಲ್ಲಿ ಹಿಂದಿಯ ‘ಜಿಸ್ಮ್‌’ ಸಿನಿಮಾ ರಿಮೇಕ್ ಸಿನಿಮಾ ಮಾಡಿಕೊಡಿ ಎಂದು ಕೇಳಿದ್ದರು ಎಂದು ನಿರ್ದೇಶಕ ರವಿಶ್ರೀವತ್ಸ ಹೊಸ ಬಾಂಬ್ ಸಿಡಿಸಿದ್ದಾರೆ. ಸಂಜನಾ ‘ಗಂಡ ಹೆಂಡತಿ’ ಬಂದು ಹೋದ ನಂತರ ಕೆಲವು ವರ್ಷಗಳಲ್ಲಿ ಅವಕಾಶಗಳಿಲ್ಲದೆ ಮನೆಯಲ್ಲಿ ಕುಳಿತಿದ್ದಾಗ ನನ್ನ ಬಳಿ ಬಂದು ಹಿಂದಿಯ ‘ಜಿಸ್ಮ್’ ಚಿತ್ರವನ್ನು ಕನ್ನಡದಲ್ಲಿ ಮಾಡೋಣ ಅಂದಿದ್ದರು. ಆ ಸಿನಿಮಾದಲ್ಲಿ ‘ಗಂಡ ಹೆಂಡತಿ’ ಸಿನಿಮಾಗಿಂತ ಹೆಚ್ಚಿನ ಹಸಿಬಿಸಿ ದೃಶ್ಯಗಳಿದ್ದವು. ಆದರೆ ಹೆಣ್ಣಿನ ಬಗ್ಗೆ ಗೌರವ ಇರುವುದರಿಂದ ಬೇಡ ಎಂದಿದ್ದೆ.’ ಎಂದು ರವಿ ಶ್ರೀವತ್ಸ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top