ದೇವರು

ಪ್ರದಕ್ಷಿಣೆಯನ್ನು ಯಾವ ಸಮಯದಲ್ಲಿ ಹಾಗೂ ಎಷ್ಟು ಸಲ ಮಾಡಿದ್ರೆ ಏನ್ ಫಲ ಸಿಗುತ್ತೆ ಗೊತ್ತಾ

ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ಸುತ್ತ ಪ್ರದಕ್ಷಿಣೆಗಳನ್ನು ಹಾಕುತ್ತೇವೆ. ಆದರೆ ಪ್ರದಕ್ಷಿಣೆಯನ್ನು ಯಾಕೆ ಹಾಕುತ್ತೇವೆ ? ಬಹಳಷ್ಟು ಜನರಿಗೆ ಗೊತ್ತಿಲ್ಲ. ಯಾವುದೇ ಕಾರ್ಯವನ್ನು ಮಾಡುವ ಮೊದಲು ಅದರ ಫಲವನ್ನು ತಪ್ಪದೆ ತಿಳಿದುಕೊಂಡು ನಂತರ ಆ ಕಾರ್ಯವನ್ನು ಮಾಡಿದರೆ ಸಾಕಷ್ಟು ಒಳ್ಳೆಯ ಫಲಗಳು ಸಿದ್ಧಿಸುತ್ತವೆ. ಅದೇ ರೀತಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಮಾಡುವುದರಿಂದ ಯಾವ ಯಾವ ಉಪಯೋಗಗಳು ನಮಗೆ ಸಿಗುತ್ತವೆ. ಎನ್ನುವುದನ್ನು ಈ ಮೂಲಕ ತಿಳಿದುಕೊಳ್ಳೋಣ.

ಪರಮೇಶ್ವರನ ಬಳಿ ನಿನ್ನನ್ನು ಬಿಟ್ಟರೆ ನನ್ನನ್ನು ಕಾಯುವವರು ಯಾರು ? ಎನ್ನುವ ದಾಸ್ಯ ಭಾವದಿಂದ ನಾವು ಹೋಗುತ್ತೇವೆ. ಅವನು ತೋರಿಸಿದ ಮಾರ್ಗದಿಂದ ನಾವು ನಡೆಯುತ್ತೇವೆ ಎಂಬುದು ಪ್ರದಕ್ಷಿಣೆಯ ಅರ್ಥ ದೇವಸ್ಥಾನದಲ್ಲಿ ಎಷ್ಟು ಬಾರಿ ಪ್ರದಕ್ಷಿಣೆ ಮಾಡಿದರೆ ಮತ್ತು ಯಾವ ಸಮಯದಲ್ಲಿ ಪ್ರದಕ್ಷಿಣೆ ಮಾಡಿದರೆ ಹೆಚ್ಚು ಫಲಗಳು ಸಿದ್ಧಿಸುತ್ತವೆ ಎನ್ನುವುದನ್ನು ನೋಡೋಣ ಬನ್ನಿ.

ದೇವಸ್ಥಾನದಲ್ಲಿ ಐದು ಬಾರಿ ಪ್ರದಕ್ಷಿಣೆ ಮಾಡಿದರೆ ಜಯ ಸಿಗುತ್ತದೆ. ಏಳು ಬಾರಿ ಪ್ರದಕ್ಷಿಣೆ ಮಾಡಿದರೆ ಶತ್ರುಗಳನ್ನು ಪರಾಜಯ ಮಾಡಬಹುದು. 9 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಸಂತಾನ ಪ್ರಾಪ್ತಿಯಾಗುತ್ತದೆ. 11 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಆಯುಷ್ಯ ವೃದ್ಧಿಯಾಗುತ್ತದೆ. 13 ಬಾರಿ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿದರೆ ಪ್ರಾರ್ಥನೆ ಸಿದ್ಧಿಯಾಗುತ್ತದೆ. ಹದಿನೈದು ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನ ಪ್ರಾಪ್ತಿಯಾಗುತ್ತದೆ . 17 ಬಾರಿ ಪ್ರದಕ್ಷಿಣೆ ಮಾಡಿದರೆ ಧನ ಮತ್ತು ಆಯುಷ್ಯ ವೃದ್ಧಿಯಾಗುತ್ತದೆ. 19 ಬಾರಿ ಪ್ರದಕ್ಷಿಣೆಯನ್ನು ಹಾಕಿದರೆ ರೋಗಗಳು ನಿವಾರಣೆಯಾಗುತ್ತವೆ. ದೇವಸ್ಥಾನಕ್ಕೆ ಸಾಧ್ಯವಾದಷ್ಟ ಪ್ರಾತಃ ಕಾಲದಲ್ಲಿ ಪ್ರದಕ್ಷಿಣೆಗಳನ್ನು ಹಾಕಿಕೊಂಡರೆ ರೋಗಗಳು ನಿವಾರಣೆಯಾಗುತ್ತವೆ ಎಂದು ಶಾಸ್ತ್ರಕಾರರು ಹೇಳುತ್ತಾರೆ.

 

 

 

ಯಾವ ಸಮಯದಲ್ಲಿ ಪ್ರದಕ್ಷಿಣೆ ಹಾಕಿದರೆ ಏನು ಫಲ ?
ಮಧ್ಯಾಹ್ನದ ವೇಳೆಯಲ್ಲಿ ಪ್ರದಕ್ಷಿಣೆಯನ್ನು ಹಾಕಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಸಂಜೆಯ ಸಮಯದಲ್ಲಿ ಪ್ರದಕ್ಷಿಣೆ ಮಾಡುವುದರಿಂದ ಪಾಪಗಳು ದೂರವಾಗುತ್ತವೆ. ರಾತ್ರಿಯ ಸಮಯದಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ದೇವರನ್ನು ಮೆಚ್ಚಿಸಲು ಕೇವಲ ದೀರ್ಘದಂಡ ನಮಸ್ಕಾರ ಹಾಕಿದರೆ ಸಾಲುವುದಿಲ್ಲ, ದೇವಸ್ಥಾನಕ್ಕೆ ಹೋದಾಗ 108 ಅಥವಾ ಯಥಾಶಕ್ತಿ ಪ್ರದಕ್ಷಿಣೆಗಳನ್ನು ತಪ್ಪದೇ ಹಾಕಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ. ದೇವಸ್ಥಾನಕ್ಕೆ ಹೋದವರು ಯಾರು ಪ್ರದಕ್ಷಿಣೆ ಹಾಕದೆ ಹಿಂದೆ ಬರುವುದಿಲ್ಲ. ಪ್ರದಕ್ಷಿಣೆಗೆ ನಮ್ಮ ಜನ್ಮ ಜನ್ಮಾಂತರದ ಪಾಪಗಳನ್ನು ಕಳೆಯುವ ಶಕ್ತಿ ಇದೆ ಎಂದು ಪಂಡಿತೋತ್ತಮರು ಹೇಳುವ ಮಾತಾಗಿದೆ. ಆದ್ದರಿಂದಲೇ ಪೂಜೆಯ ಪ್ರಯೋಗ ವಿಧಿಗಳಲ್ಲಿ ಕೇವಲ “ ಕುರಿಯಾತ್” ಎಂದು ಹೇಳುವುದಿಲ್ಲ. ಬದಲಿಗೆ “ಪ್ರದಕ್ಷಿಣಾ-ನಮಸ್ಕಾರಂ ಕುರಿಯಾತ್” ಎಂದು ಎಲ್ಲಾ ಕಡೆ ಹೇಳಲಾಗಿದೆ.

ಪ್ರದಕ್ಷಿಣೆಯ ಹಿಂದಿರುವುದು ಜ್ಯೋತಿಷ್ಯ ವಿಜ್ಞಾನ. ಈ ಜಗತ್ತು ಒಂದು ಶಕ್ತಿಯ ಸುತ್ತ ಯಾವಾಗಲೂ ಸುತ್ತುತ್ತಾ ಇರುತ್ತದೆ. ಸೂರ್ಯಶಕ್ತಿ ಭೂಮಿ ಸೇರಿದಂತೆ ಎಲ್ಲಾ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತದೆ. ಈ ರೀತಿ ಸುತ್ತುವುದರಿಂದ ಭೂಮಿಯ ಮೇಲೆ ನಮಗೆ ಜೀವ ಹಿಡಿದುಕೊಳ್ಳಲು ಬೇಕಾದ ನೀರು, ಗಾಳಿ , ಆಹಾರ ಇತ್ಯಾದಿಯ ಶಕ್ತಿಯ ಮೂಲಗಳು ಸರಿಯಾದ ಪ್ರಮಾಣದಲ್ಲಿ ಲಭಿಸುತ್ತವೆ.ಪ್ರಕೃತಿಯೇ ದೇವರು ಎಂದು ನಂಬಿರುವ ನಮ್ಮ ಇಂದೂಗಳು ತಮ್ಮ ಪೂಜಾ ವಿಧಿಯನ್ನು ಪ್ರಕೃತಿಯ ನಿಯಮಕ್ಕೆ ಅನುಗುಣವಾಗಿ ರೂಪಿಸಿಕೊಂಡಿದ್ದಾರೆ. ಹೇಗೆ ಸೂರ್ಯನಿಂದ ಭೂಮಿಗೆ ಶಕ್ತಿಯು ಸಿಗುತ್ತದೆಯೋ…. ಹಾಗೆಯೇ ದೇವರು ಎಂಬ ಪರಮ ಶಕ್ತಿಯ ಸುತ್ತ ಪ್ರದಕ್ಷಿಣೆ ಮಾಡುವುದರಿಂದ ನಮಗೂ ಶಕ್ತಿ ಒದಗಿ ಬರುತ್ತದೆ ಎನ್ನುವ ಪ್ರಕರವಾದ ನಂಬಿಕೆ ಮತ್ತು ವಿಶ್ವಾಸ ಇದೆ. ಪ್ರದಕ್ಷಿಣೆಯು ಏಕರೂಪದ ಪುನರಾವರ್ತನೆಯಾಗಿ ಇರುವುದರಿಂದ ಏಕಾಗ್ರತೆಯು ಸುಲಭವಾಗಿ ಸಿದ್ಧಿಸುತ್ತದೆ. ಯಾವುದೇ ಶಕ್ತಿಗೆ ಸಂಪೂರ್ಣ ಶರಣಾಗಲು ಏಕಾಗ್ರತೆಯು ಅತ್ಯಗತ್ಯ. ದೇವರನ್ನು ಪೂಜಿಸುವುದು ಎಂದರೆ ಆತನಿಗೆ ಎಲ್ಲಾ ರೀತಿಯಲ್ಲಿ ಶರಣಾಗುವುದು ಎಂದರ್ಥ,ಎಂದರೆ ಪ್ರದಕ್ಷಿಣೆ ಕೂಡ ಉದ್ದೇಶವನ್ನು ಈಡೇರಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top