ಸಮಾಚಾರ

ಫೈರ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಎಕ್ಸಿಟ್ ಆದ ಪ್ರಿಯಾಂಕ ಉಪೇಂದ್ರ,ಅದಕ್ಕೆ ಕಾರಣ ಏನ್ ಗೊತ್ತಾ

ನಟ ಚೇತನ್ ಹುಟ್ಟು ಹಾಕಿದ ಫೈರ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಪ್ರಿಯಾಂಕ ಉಪೇಂದ್ರ ಹೊರ ಬಂದಿದ್ದಾರೆ. ನಟಿ ಶ್ರುತಿ ಹರಿಹರನ್, ನಟ ಅರ್ಜುನ್​ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಬೆನ್ನಲೇ ‘ಫೈರ್​’ ಸಂಸ್ಥೆಯಲ್ಲಿ ಪ್ರಿಯಾಂಕ ಉಪೇಂದ್ರ ರಾಜೀನಾಮೆ ಸಾಕಷ್ಟು ಅನುಮಾನ ಹಾಗೂ ಊಹಪೊಹಗಳಿಗೆ ದಾರಿ ಮಾಡಿ ಕೊಟ್ಟಿದೆ.

ಫೈರ್​ (FIRE) ಸಂಸ್ಥೆಯಿಂದ ಹೊರ ಬಂದ ನಂತರ ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ ಚಿತ್ರರಂಗದಲ್ಲಿ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ಹಾಗೂ ಅವರ ಮೇಲಾಗುವ ಲೈಂಗಿಕ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದಲೇ ಫೈರ್ ಸಂಸ್ಥೆಯನ್ನು ಹುಟ್ಟುಹಾಕಲಾಗಿತ್ತು,ಸಂಸ್ಥೆಯ ಉದ್ದೇಶವೇ ಹಾದಿ ತಪ್ಪುತ್ತಿದೆ, ಫೈಯರ್ ಸಂಸ್ಥೆಯ ಸದಸ್ಯರ ಸಿದ್ಧಾಂತಗಳಿಗೂ ನನ್ನ ಸಿದ್ಧಾಂತಕ್ಕೂ ಹೊಂದಾಣಿಕೆ ಆಗಲಿಲ್ಲ. ಶ್ರುತಿ ಹರಿಹರನ್ #MeToo ಪ್ರಕರಣವನ್ನ ಬೇರೆ ರೀತಿಯಲ್ಲೇ ಬಗೆಹರಿಸಬಹುದಿತ್ತು.

 

 

 

ಅದನ್ನು ಈರೀತಿಯಾಗಿ ಹಾದಿರಂಪ ಬೀದಿರಂಪ ಮಾಡದೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳ ಬಹುದ್ದಿತ್ತು ಆದರೆ ಇದು ಫೈರ್ ಸಂಸ್ಥೆಯ ಉದ್ದೇಶವೇ ಅಲ್ಲ. ಎಲ್ಲವನ್ನೂ ಗುಟ್ಟಾಗಿ ಪರಿಹರಿಸುವ ಪರಿಕಲ್ಪನೆಯೊಂದಿಗೆ ಈ ಸಂಸ್ಥೆ ರೂಪುಗೊಂಡಿತ್ತು.ಅಷ್ಟೇ ಅಲ್ಲದೇ ಶೃತಿ ಹರಿಹರನ್ ಅವರು ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಬರೆದು ಮಾರನೆ ದಿನವೇ ಪತ್ರಿಕಾಗೋಷ್ಠಿ ಕರೆದಿದ್ದಾರೆ. ನಾವು ಇಲ್ಲದ ವೇಳೆ ಪತ್ರಿಕಾಗೋಷ್ಠಿ ಮಾಡಿದ್ದಾರೆ ಇದು ನನಗೆ ಸರಿ ಅನ್ನಿಸುತ್ತಿಲ್ಲಎಲ್ಲೋ ಒಂದು ಕಡೆ ಉದ್ದೇಶ ದಾರಿ ತಪ್ಪುತ್ತಿದೆ. ಹೀಗಾಗಿ ನಾನು ರಾಜೀನಾಮೆ ಕೊಡಬೇಕೆಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top